ಹುಬ್ಬಳ್ಳಿಯಲ್ಲಿ ವಚನ ಸಾಹಿತ್ಯ ನಿಜ ದರ್ಶನ ಪ್ರಬಂಧ ಸ್ಪರ್ಧೆ ಪೋಸ್ಟರ್ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಹುಬ್ಬಳ್ಳಿ

ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು ಸಂಘಟನೆಯಿಂದ ವಚನ ಸಾಹಿತ್ಯ ನಿಜದರ್ಶನ ಆನ್ಲೈನ್ ಪ್ರಬಂಧ ಸ್ಪರ್ಧೆ ಯೋಜನೆಯ ಪೋಸ್ಟರ್ಗಳನ್ನು ಜಾ.ಲಿಂ. ಮಹಾಸಭಾ ಹುಬ್ಬಳ್ಳಿ ಧಾರವಾಡ ಮಹಾನಗರದ ಸದಸ್ಯರು ಮಹಂತೇಶ ಆಲೂರು ಅವರ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.

ಬಸವಾದಿ ಶರಣರ ವಚನಗಳನ್ನು ತಿರುಚಿ, ತಪ್ಪು ಅರ್ಥ ಬರೆದು ವಚನ ದರ್ಶನ ಗ್ರಂಥವನ್ನು ಸಂಘ ಪರಿವಾರ ಬಿಡುಗಡೆ ಮಾಡಿದೆ. ಶರಣರ ಕ್ರಾಂತಿಕಾರಕ ವಿಚಾರಗಳನ್ನು ಹೇಳದೆ, ಶರಣರು ಕೇವಲ ಭಕ್ತಿ ಚಳವಳಿ ಮಾಡಿದರು ಎಂದು ಅರ್ಥ ಬರುವಂತೆ ತಿರುಚಿ ಇತಿಹಾಸಕ್ಕೆ ಅಪಚಾರ ಮಾಡುತ್ತಿದ್ದಾರೆ. ಇದು ಸುಳ್ಳು ಎಂದು ತೋರಿಸಲು ವಚನ ಸಾಹಿತ್ಯ ನಿಜದರ್ಶನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಲಿಂಗಾಯತ ಧರ್ಮದ ಇತಿಹಾಸ ಮಾಲಿಕೆ ವಿಷಯದ ಮೇಲೆ ಮಾತನಾಡುತ್ತ ಕುಮಾರಣ್ಣ ಪಾಟೀಲ ತಿಳಿಸಿದರು.

ಈ ಪೋಸ್ಟರ್ಗಳನ್ನು ಹುಬ್ಬಳ್ಳಿ ಧಾರವಾಡ ಮಹಾನಗರದ ಪದವಿ ಕಾಲೇಜುಗಳಿಗೆ ವಿಶ್ವವಿದ್ಯಾಲಯಗಳಿಗೆ ವಿತರಿಸಲಾಗುವುದು. ಯುವಕರು ತಮ್ಮ ನೈಜ ಇತಿಹಾಸ ತಿಳಿದುಕೊಂಡು ಜಾಗೃತರಾದರೆ ಸುಂದರವಾದ ಸಮಾಜವನ್ನು ಕಟ್ಟಲು ಸಹಾಯವಾಗುತ್ತದೆಯೆಂದು ಬಸವರಾಜ ಹುಲ್ಲೋಳಿ ಹೇಳಿದರು.

ಪ್ರಭಂದ ಸ್ಪರ್ಧೆಯಲ್ಲಿ ಎರಡು ವಿಭಾಗಗಳಿವೆ.

ಸಂಶೋಧನಾ ವಿದ್ಯಾರ್ಥಿಗಳು ಚಿಂತಕರು ಶಿಕ್ಷಕರು ಪ್ರಾಧ್ಯಾಪಕರು ಮತ್ತು ಆಸಕ್ತರಿಗೆ 10 ವಿಷಯಗಳು.
ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎರಡು ವಿಷಯಗಳನ್ನು ಇಡಲಾಗಿದೆ.

ಪ್ರತಿ ವಿಭಾಗದಲ್ಲಿನ ಅತ್ಯುತ್ತಮವಾದ ನಾಲ್ಕು ಲೇಖನಗಳಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ.
ಲೇಖನಗಳನ್ನು ಕಳುಹಿಸಲು ಕೊನೆಯ ದಿನಾಂಕ ಜನವರಿ ಒಂದು 2025 ಆಗಿರುತ್ತದೆ.

ಕಾರ್ಯಕ್ರಮಲ್ಲಿ ನ್ಯಾಯವಾದಿ ಕೋರಿಶೆಟ್ಟರ್, ಕುಮಾರಣ್ಣ ಪಾಟೀಲ, ಬಸವರಾಜ ಹುಲ್ಲೋಳಿ, ಶ್ರೀಶೈಲ ತುಂಗಳದ, ಸುರೇಶ ಹುಗ್ಗಿಶೆಟ್ಟರ್, ನಿವೇದಿತಾ ಹುಗ್ಗಿಶೆಟ್ಟರ್, ಮಹಂತೇಶ ಆಲೂರ, ಓಂ ಶಂಭು, ಸುನೀಲ ಪಾಟೀಲ. ಮುಂತಾದವರು ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *