ವಚನ ಸಂಕ್ರಾಂತಿಯಂದು ವಚನ ಕಂಠಪಾಠ, ವೇಷಭೂಷಣ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ರಾಮನಗರ

ಈ ವರ್ಷದ ವಚನ ಸಂಕ್ರಾಂತಿಯನ್ನು ಆಚರಿಸಲು ವಚನ ಕಂಠಪಾಠ ಸ್ಪರ್ಧೆ ಮತ್ತು ಶರಣ-ಶರಣೆಯರ ವೇಷಭೂಷಣ ಸ್ಪರ್ಧೆಯನ್ನು ಜನವರಿ 12ರಂದು ಬೆಳಿಗ್ಗೆ 09.00 ಗಂಟೆಗೆ ಶ್ರೀ ಬಸವ ಗುರುಕುಲ ಶಿವಮಠ, ದೊಡ್ಡಮರಳವಾಡಿ, ಹಾರೋಹಳ್ಳಿ ತಾಲುಕು ರಾಮನಗರ ಜಿಲ್ಲೆಯಲ್ಲಿ ಏರ್ಪಡಿಸಲಾಗಿದೆ.

ಸ್ಪರ್ಧೆಗಳ ವಿವರ:

ವಿಭಾಗ-1) 5ನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳು 25ಕ್ಕೂ ಹೆಚ್ಚು ವಚನಗಳನ್ನು ಕಂಠಪಾಠ ಮಾಡಿ ಒಪ್ಪಿಸುವುದು ಹಾಗೂ

ವಿಭಾಗ-2) 8ನೇ ತರಗತಿ ಯಿಂದ 10ನೇ ತರಗತಿಯ ವಿದ್ಯಾರ್ಥಿಗಳು
40ಕ್ಕೂ ಹೆಚ್ಚು ವಚನಗಳನ್ನು ಕಂಠಪಾಠ ಮಾಡಿ ಒಪ್ಪಿಸುವುದು.

ಪ್ರತಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನವಾಗಿ 1000/- ರೂಗಳನ್ನು ಹಾಗೂ ದ್ವಿತೀಯ ಬಹುಮಾನವಾಗಿ 500/-ರೂ.ಗಳನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಇರುತ್ತದೆ.

ನಿವೃತ ಉಪನ್ಯಾಸಕ ಕೃಪಾಶಂಕರ ಮತ್ತು ಲೆಕ್ಕ ಪರಿಶೋಧಕ ಶಿವಕುಮಾರ ಸಿ ಎ ಬಹುಮಾನ ನೀಡುವರು. /

ಹೆಚ್ಚಿನ ವಿವರಗಳಿಗೆ :
9972727248 / 7349588844 ಈ ಮೊ. ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.

Share This Article
Leave a comment

Leave a Reply

Your email address will not be published. Required fields are marked *