ಚಿಂಚೋಳಿ
ಶ್ರಾವಣ ಮಾಸದ ಪ್ರಯುಕ್ತ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆ ವತಿಯಿಂದ ತಾಲ್ಲೂಕು ಮಟ್ಟದ ವಚನ ಕಂಠಪಾಠ ಸ್ಪರ್ಧೆ ನಡೆಯಿತು.
ತಾಲ್ಲೂಕಿನ 20 ವಿವಿಧ ಶಾಲೆಗಳ 60 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಾಲ್ಕು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು ನಿರ್ಣಾಯಕರಾಗಿದ್ದರು.
ವಚನ ಕಂಠಪಾಠ ಸ್ಪರ್ಧೆ ವಿಜೇತರು
ಪ್ರಾಥಮಿಕ ವಿಭಾಗದಲ್ಲಿ
ಪ್ರಥಮ
ಸಿದ್ಧಲಿಂಗ ಮಹಾದೇವ, ೫ನೇ, ಹಾರಕೂಡ ಶ್ರೀ ಚನ್ನಬಸವೇಶ್ವರ ಶಾಲೆ, ಚಂದಾಪುರ.
ದ್ವಿತೀಯ
ಮಂಜುನಾಥ ತುಕಾರಾಮ, ೭ನೇ,
ವಿಶ್ವಗಂಗಾ ಹಿ.ಪ್ರಾ. ಶಾಲೆ, ಚಿಮ್ಮನಚೋಡ.
ತೃತೀಯ
ಅನನ್ಯ ಸಂತೋಷ ರೆಡ್ಡಿ, ೫ ನೇ, ವಿಶ್ವಗಂಗಾ ಹಿ.ಪ್ರಾ.ಶಾಲೆ, ಚಿಮ್ಮನಚೋಡ.
ಪ್ರೌಢ ವಿಭಾಗದಲ್ಲಿ
ಪ್ರಥಮ
ಸದಾನಂದ ಮಹಾದೇವ, ೮ ನೇ, ಹಾರಕೂಡ ಶ್ರೀ ಚನ್ನಬಸವೇಶ್ವರ ಶಾಲೆ, ಚಂದಾಪುರ.
ದ್ವಿತೀಯ
ವರ್ಷಾ ಸೂರ್ಯಕಾಂತ, ೮ನೇ,
ಶ್ರೀ ವಿಶ್ವಜ್ಞಾನ ವಾಹಿನಿ ಶಾಲೆ ಐನಾಪುರ.
ತೃತೀಯ
ಉಷಾ ಪರಮೇಶ್ವರ, ೮ನೇ, ವಿಶ್ವಗಂಗಾ ಹಿರಿಯ ಪ್ರಾಥಮಿಕ ಶಾಲೆ, ಚಿಮ್ಮನಚೋಡ.
ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೆಯೇ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ, ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ವಚನ ಕಂಠಪಾಠ ಪ್ರಶಸ್ತಿ ವಿಜೇತ ಜಗದೀಶ ಮರಪಳ್ಳಿ, ದಾಸೋಹಿಗಳಾದ ಚಂದ್ರಯ್ಯ ಸ್ವಾಮಿ ಮದರಗಿಮಠ, ಸಮಿತಿ ಅಧ್ಯಕ್ಷ ಆನಂದಕುಮಾರ ಬೆಡಸೂರು, ಶಿಕ್ಷಕರಾದ ಹೈದರಾಲಿ, ಸಂಗಮೇಶ, ರವಿ, ರಾಹುಲ್, ಮಹೇಶ, ಚಂದ್ರಕಲಾ, ವಿಶಾಲಾಕ್ಷಿ, ಜ್ಞಾನೇಶ್ವರಿ, ಪ್ರೇಮಾ ಕೊಡಂಗಲ್ ರಾಧಿಕ, ಶಿವರುದ್ರಯ್ಯಾ, ಜ್ಯೋತಿ, ರೂಪಾ ರೆಡ್ಡಿ, ವೀರಸಂಗಯ್ಯ, ಮಹೇಶಕುಮಾರ, ರಾಘವೇಂದ್ರ ರೆಡ್ಡಿ, ವೀರಶೆಟ್ಟಿ ದುಬಲಗುಂಡೆ, ಶಿವಶರಣ ಕೊಡಂಗಲ್, ಗುರುಶಾಂತ ಹುಂಡೇಕಾರ, ಅಣಿವೀರಯ್ಯ ಮದರಗಿ, ಶಾಂತಕುಮಾರ ಸೀತಾಳಗೆರಾ, ಅರುಣ ಮರಪಳ್ಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.