ಬೆಳಗಾವಿ
ಪೂಜೆ ಎಂದರೆ ತನ್ನನ್ನು ತಾನು ತಿಳಿದು, ನಡೆ ನುಡಿಯಲ್ಲಿ ಒಂದಾಗುವುದು. ಡಾಂಭಿಕ ಪೂಜೆಗಿಂತ ಮನಸ್ಸಿನಿಂದ ಮಾಡುವ ಪೂಜೆ ದೇವರ ತಲುಪುವದು. ತನ್ನನ್ನು ನಾನು ಅರಿತು ಪೂಜೆ ಮಾಡಬೇಕು. ಯಾರು ಕೋಪಗೊಳ್ಳುವರೋ ಅವರೇ ಪಾಪಿಷ್ಟರು.
ಸ್ವಯಂ ಶೋಧಿಸಿಕೊಳ್ಳುವುದೇ, ವಚನಗಳನ್ನು ಅರಿವುದೇ ನಿಜ ಸುಖವಾಗಿದೆ. ತನ್ನನ್ನು ತಾನು ಅರಿತುಕೊಳ್ಳುವುದು, ಬರುವ ದುಃಖವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಎಲ್ಲವೂ ಸರಳವಾಗುವುದು. ಬದುಕು ಎಂದರೆ ಕುದಿಯುವ ನೀರು ಇದ್ದ ಹಾಗೆ. ದುಗುಡ, ದಮ್ಮಾನದಿಂದ ದೂರ ಇರಬೇಕು ಅದೇ ನಿಜ ಬದುಕು ಎಂದು ಬಸವತತ್ವ ಅನುಭಾವ ಕೇಂದ್ರದ ವಾಗ್ದೇವಿ ತಾಯಿ ಹೇಳಿದರು.

ಲಿಂಗಾಯತ ಸಂಘಟನೆ ವತಿಯಿಂದ ಡಾ. ಫ.ಗು. ಹಳಕಟ್ಟಿ ಭವನದಲ್ಲಿ, ಶರಣ ಮಾಸದಂಗವಾಗಿ ನಡೆದ ಶರಣ ಸತ್ಸಂಗ ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು.
ಪೂಜ್ಯ ಕುಮುದಿನಿ ತಾಯಿ ಅವರು ಗೌರವ ಉಪಸ್ಥಿತರಿದ್ದರು. ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಸಂಗಮೇಶ ಅರಳಿ ಉಪಸ್ಥಿತರಿದ್ದರು.
ಲಿಂಗಾಯತ ಸಂಘಟನೆಯಿಂದ ದಾಸೋಹ ಸೇವೆ ನಡೆಯಿತು.

ಮಹಾಂತೇಶ ಮೆಣಸಿನಕಾಯಿ, ಶೋಭಾ ದೇಯನ್ನವರ, ಲೀಲಾವತಿ ರಾಚೋಟಿಮಠ, ರಾಜಶ್ರೀ ಖನಗಣಿ, ಶೋಭಾ ಅಂಗಡಿ, ಶಾರದಾ ಹಿರೇಮಠ, ರತ್ನಾ ಬೆಣಚನಮರಡಿ, ಅನಿತಾ ಚಟ್ಟೇರ, ರತ್ನಾ ಮುಂಗರವಾಡಿ, ಮಂಗಳಾ ಕಾಗತಿಕರ, ಗುತ್ತಿಗೂಳಿ, ವಿದ್ಯಾ ಕರಕಿ, ಅಶೋಕ ಇಟಗಿ, ರಮೇಶ ಕಳಸಣ್ಣವರ, ಬಸವರಾಜ ಕರಡಿಮಠ, ಬಸವರಾಜ ಮತ್ತಿಕಟ್ಟಿ, ಆನಂದ ಕರಕಿ, ಬಸವರಾಜ ಬಿಜ್ಜರಗಿ, ಮತ್ತಿಕೂಪ್ಪ ದಂಪತಿ, ಶಿವಾನಂದ ನಾಯಕ, ಬಸವರಾಜ ಚಟ್ಟೇರ, ರಾಮಾಪೂರೆ ದಂಪತಿ, ಸೋಮು ಮಾವಿನಕಟ್ಟಿ, ಶರಣ ಶರಣೆಯರು ಉಪಸ್ಥಿತರಿದ್ದರು.
ಸುರೇಶ ನರಗುಂದ ಸ್ವಾಗತಿಸಿದರು, ಸುಜಾತಾ ಮತ್ತಿಕಟ್ಟಿ ನಿರೂಪಿಸಿದರು, ಶ್ವೇತಾ ಮುಂಗರವಾಡಿ ಶರಣು ಸಮಪ೯ಣೆ ಸಲ್ಲಿಸಿದರು.