ಕಲಬುರಗಿ
ಬಸವ ಸೇವಾ ಪ್ರತಿಷ್ಠಾನ ಬಸವಗಿರಿ, ಬೀದರದಲ್ಲಿ ದಿನಾಂಕ 10, 11, 12ನೇ ಫೆಬ್ರವರಿ 2025 ರಂದು ನಡೆಯಲಿರುವ ವಚನ ವಿಜಯೋತ್ಸವ 2025 ಕಾರ್ಯಕ್ರಮಕ್ಕಾಗಿ ಕಲಬುರಗಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕ ಅಕ್ಕನವರು ತಿಳಿಸಿದ್ದಾರೆ.
ಹೊಸ ವರ್ಷದ ದಿನದರ್ಶಿಕೆ ಬಿಡುಗಡೆಯ ಪ್ರಯುಕ್ತ ದಿನಾಂಕ 5.01.2025 ರವಿವಾರದಂದು ಮುಂಜಾನೆ 11 ಗಂಟೆಗೆ ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪ ಜಯನಗರದಲ್ಲಿ ನಡೆಯಲಿದೆ.
ಕಾರಣ ವಿವಿಧ ಕಾಯಕ ಶರಣ ಸಂಘಟನೆಗಳ ಪ್ರಮುಖರು, ಬಸವಪರ ಸಂಘಟನೆಯವರು ಆಗಮಿಸಿ ಸೂಕ್ತ ಸಲಹೆ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.