ಬೆಂಗಳೂರು
ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಲು ನೂರು ಕೋಟಿ, ನೂರು ಎಕರೆ ನೆರವನ್ನು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಲಾಗಿದೆ.
ಈ ಬೇಡಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಶುಕ್ರವಾರ ಭೇಟಿಮಾಡಿದ ಲಿಂಗಾಯತ ಮಠಾಧಿಪತಿಗಳು ಹಾಗೂ ಗಣ್ಯರು ಯೋಜನೆಯ ರೂಪುರೇಷೆಯನ್ನು ಚರ್ಚಿಸಿದರು.
‘ವಚನ ಗ್ಲೋಬಲ್ ವಿಶ್ವವಿದ್ಯಾಲಯ’ ಎಂದು ಕರೆಯಲಾಗುವ ಈ ವಿಶ್ವವಿದ್ಯಾಲಯದ ಮೂಲ ಉದ್ದೇಶ ಬಸವತತ್ವವನ್ನು ಜಾಗತಿಕ ಮಟ್ಟದಲ್ಲಿ ಅನುಷ್ಠಾನಕ್ಕೆ ತರುವುದಾಗಿರುತ್ತದೆ. ಭಾಲ್ಕಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಇದನ್ನು ಸ್ಥಾಪಿಸಿ ನಿರ್ವಹಿಸುತ್ತದೆ.
ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಪ್ರತ್ಯೇಕ ಸಾರ್ವಜನಿಕ ದತ್ತಿಯನ್ನು ಭಾಲ್ಕಿ ಮಠ ರೂಪಿಸಲಾಗುತ್ತದೆ.
ವಿಶ್ವವಿದ್ಯಾಲಯಕ್ಕೆ ಕನಿಷ್ಠ 200 ಎಕರೆ ಜಮೀನಿನ ಅಗತ್ಯವಿದ್ದು ಸದ್ಯಕ್ಕೆ ನೂರು ಎಕರೆ ಜಮೀನು ಲಭ್ಯವಿದೆ. ಸರ್ಕಾರದ ವತಿಯಿಂದ ಬಸವಕಲ್ಯಾಣದಲ್ಲಿ ನೂರು ಎಕರೆಗಳಷ್ಟು ಭೂಮಿಯನ್ನು ಮಂಜೂರು ಮಾಡಬೇಕೆಂದು ಕೋರಲಾಗಿದೆ.
ವಿಶ್ವವಿದ್ಯಾಲಯಕ್ಕೆ ಬೇಕಾದ ಭಾರೀ ಪ್ರಮಾಣದ ದತ್ತಿಯನ್ನು ಜಗತ್ತಿನಾದ್ಯಂತ ಬಸವಾನುಯಾಯಿಗಳಿಂದ ಮತ್ತು ಶಿಕ್ಷಣಾಸಕ್ತರಿಂದ ಸಂಗ್ರಹಿಸಲಾಗುತ್ತದೆ.
ವಿಶ್ವವಿದ್ಯಾಲಯದಡಿ ಸ್ಥಾಪಿಸುವ ವಚನ ಸಂಶೋಧನಾ ಕೇಂದ್ರ ಮತ್ತು ಕಾಯಕ ವಿಸ್ತರಣಾ ಕೇಂದ್ರಗಳಿಗೆ ತಲಾ ಐವತ್ತು ಕೋಟಿ ರೂ.ಗಳ ಅನುದಾನ ನೀಡಬೇಕೆಂದು ಸರಕಾರವನ್ನು ಕೋರಲಾಗಿದೆ.
ಸಾರ್ವಜನಿಕ ದತ್ತಿಯಡಿ ನಿರ್ಮಾಣವಾಗುವ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಕಲ್ಪಿಸಲು ಬೇಕಾದ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಅಂಗೀಕರಿಸಲು ಕೋರಲಾಗಿದೆ.
ನಿಯೋಗದಲ್ಲಿ ಪರಮಪೂಜ್ಯರುಗಳಾದ ನಾಡೋಜ ಡಾ.ಬಸವಲಿಂಗ ಪಟ್ಟದ್ದದೇವರು, ಡಾ. ತೋಂಟದ ಸಿದ್ದರಾಮ ಸ್ವಾಮಿಗಳು, ಶ್ರೀ ಗುರುಮಹಾಂತಾ ಸ್ವಾಮಿಗಳು, ಶ್ರೀ ಪ್ರಭುಚನ್ನಬಸವ ಸ್ವಾಮಿಗಳು, ಹಂದಿಗುಂದದ ಶಿವಾನಂದ ಸ್ವಾಮಿಗಳು, ಬೆಳಗಾವಿ ಅಲ್ಲಮಪ್ರಭು ಸ್ವಾಮೀಜಿ, ಅಥಣಿ ಪ್ರಭುಚನ್ನಬಸವ ಸ್ವಾಮೀಜಿ, ಬೆಂಗಳೂರು ಬಸವಯೋಗಿ ಸ್ವಾಮೀಜಿ, ಭಾಲ್ಕಿ ಗುರುಬಸವ ಪಟ್ಟದ್ದೇವರು ಸೇರಿದಂತೆ ವಿವಿಧ ಮಠಗಳ ಗುರುಗಳು, ಸಚಿವರಾದ ಈಶ್ವರ ಖಂಡ್ರೆ ಎಮ್ ಬಿ ಪಾಟೀಲ್, ಹಿರಿಯ ಶಾಸಕ ಬಿ.ಆರ್. ಪಾಟೀಲ್ ಮತ್ತು ಇತರರು ಉಪಸ್ಥಿತರಿದ್ದರು.

ವಚನ ವಿಶ್ವವಿದ್ಯಾಲಯ ಲಿಂಗಾಯತ ಮಠಾಧೀಶರ ಒಕ್ಕೂಟಕ್ಕೆ ಒಪ್ಪಿಸಿಸದೇ ನಾಡಿನ ಹೆಸರಾಂತ ಬಸವ ಚಿಂತಕರ ಒಕ್ಕೂಟ ಮತ್ತು ಬಸವ ಸಂಘಟನೆಗಳು
ಒಳಗೊಂಡ ಒಂದು ಸಮಿತಿ ರಚಿಸಿ ಸರ್ಕಾರಿ ನಿಘಾ
ಘಟಕದಲ್ಲಿ ಇರಬೇಕು
ಅತ್ಯುತ್ತಮವಾದ ಕಾರ್ಯ ಎಲ್ಲಾ ಮಠಾಧೀಶರಿಗೂ ಭಕ್ತಿಯ ಶರಣು ಶರಣಾರ್ಥಿಗಳು 🙏🙏