ವಚನ ವಿಶ್ವವಿದ್ಯಾಲಯ ಸ್ಥಾಪಿಸಲು ಮುಖ್ಯಮಂತ್ರಿಗಳ ಭೇಟಿ: ಭಾಲ್ಕಿ ಶ್ರೀ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಚಿತ್ರದುರ್ಗ

ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪಕ್ಕೆ ಜೀವಂತಿಕೆ, ಚೈತನ್ಯ ಬರಬೇಕಾದರೆ ಅಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಅದಕ್ಕಾಗಿ ಮಠಾಧೀಶರಾದ ನಾವು ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಿದ್ಧರಿದ್ದೇವೆ, ಎಂದು
ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟದ್ದೇವರು ಶನಿವಾರ ಹೇಳಿದರು.

ನಗರದಲ್ಲಿ ನಡೆಯುತ್ತಿರುವ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುತ್ತಾ ಇಲ್ಲಿ ಉಪಸ್ಥಿತರಿರುವ ಸಚಿವ ಎಂ.ಬಿ.ಪಾಟೀಲರ ಗಮನಕ್ಕೂ ಇದನ್ನು ತರುತ್ತಿದ್ದೇವೆ. ಬಸವಾದಿ ಶರಣರ ವಚನಗಳನ್ನು ಶಾಲಾ, ಕಾಲೇಜುಗಳ ಪಠ್ಯದಲ್ಲಿ ಅಳವಡಿಸಬೇಕೆಂದು ಒತ್ತಾಯಿಸುವೆ. ಅನುಭಾವಿ ಬೆಲ್ದಾಳ ಶರಣರನ್ನು ಈ ಸಮ್ಮೇಳನದ ಅಧ್ಯಕ್ಷರಾಗಿಸಿರುವುದು ಅತ್ಯಂತ ಸೂಕ್ತವಾಗಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನು ಹೇಳಿದ ಶರಣ ಸಾಹಿತ್ಯ ಪರಿಷತ್ತಿನ ಡಾ.ಸಿ. ಸೋಮಶೇಖರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದ್ದು ಸಾಗತಾರ್ಹ. ಆದರೆ ಸಾಲದು, ಸರಕಾರ ಅವರ ಸಾಹಿತ್ಯ ಅಧ್ಯಯನಕ್ಕೆ ಮುಂಬರುವ ಬಜೆಟಿನಲ್ಲಿ 500 ಕೋಟಿ ರೂಪಾಯಿ ಮೀಸಲಿಡಬೇಕೆಂದು ಹೇಳಿದರು.

ಇಂದು ಬೆಳಗ್ಗೆ ನಗರದ ಮುರುಘಾ ಮಠದ ಆವರಣದಲ್ಲಿ ಆಯೋಜನೆಗೊಂಡಿರುವ 2 ದಿನಗಳ ಅಖಿಲ ಭಾರತ 13ನೇ ಶರಣ ಸಾಹಿತ್ಯ ಸಮ್ಮೇಳನಕ್ಕೆ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಶನಿವಾರ ಚಾಲನೆ ನೀಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಮುರುಘಾ ಮಠದ ಅನುಭವ ಮಂಟಪದಲ್ಲಿ ಸಮ್ಮೇಳನ ಆಯೋಜನೆಗೊಂಡಿದೆ. ಸಿದ್ದರಾಮ ಬೆಲ್ದಾಳ ಶರಣರು ಸಾರ್ವಧ್ಯಕ್ಷತೆ ವಹಿಸಿದ್ದಾರೆ. ನಾಡಿನ ವಿವಿಧ ಮಠಗಳ ಶ್ರೀಗಳು ಪಾಲ್ಗೊಂಡಿದ್ದಾರೆ.

Share This Article
1 Comment
  • ಶರಣರಾದ ಸಿ.ಸೋಮಶೇಖರ್ ರವರು ನಮ್ಮೆಲ್ಲರ ಹಿರಿಯರು ಮತ್ತು ಜ್ಞಾನವೃದ್ಧರೂ ಆದ ಗೊ.. ರು. ಚನ್ನಬಸಪ್ಪ ಅವರು ಬೆಳೆಸಿದ ಶರಣ ಸಾಹಿತ್ಯ ಪರಿಷತ್ತಿನ ರಥವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಲಿಂಗಾಯತ ಧರ್ಮದ ಉಳಿಸಿ ಬೆಳೆಸುವ ಕಾರ್ಯಗಳಲ್ಲಿ ಕಾಯ,ವಾಚಾ, ಮನಸಾ ಸಹಕರಿಸುತ್ತಿರುವ ಸಚಿವರಾದ ಮಲ್ಲನ ಗೌಡ ಬಸವನಗೌಡ ಪಾಟೀಲ್ ರವರ ಸೇವೆ ಪ್ರಶಂಸಾರ್ಹ. ಇಬ್ಬರಿಗೂ ಶರಣು ಶರಣಾರ್ಥಿ.

Leave a Reply

Your email address will not be published. Required fields are marked *