ಮೊಟ್ಟ ಮೊದಲು ಜಗತ್ತಿನಲ್ಲಿಯೇ ಯೋಗದ, ಧ್ಯಾನದ ಪ್ರಕಾರಗಳು, ಆಧ್ಯಾತ್ಮದ ಸಕೀಲಗಳು ವೈವಿಧ್ಯಮಯ ಶಿವಸೂತ್ರಗಳನ್ನು ಹೇಳಿ ಕೊಟ್ಟಂಥ ದ್ರಾವಿಡ ಶಿವನಿಗೆ ಗಂಟು ಬಿದ್ದರು ಈ ಆರ್ಯ ವೈಷ್ಣವರು.
ಪ್ರಾಮಾಣಿಕನಾದ ಭೋಳಾ ಶಂಕರನಿಗೆ ಅವನ ಅನುಯಾಯಿಗಳಿಗೆ ಕುತಂತ್ರದಿಂದ ಕಾಡಿದರು.ಕೊನೆಗೆ ಶಿವನನ್ನೇ ಒಳಗೆ ತೆಗೆದುಕೊಂಡರು.
ಯಜ್ಞ ವಿರೋಧಿ ಶಿವನ ಮುಂದೆ ಯಜ್ಞ ಮಾಡುವುದು, ವಿಭೂತಿ ಮೇಲೆ ಕುಂಕುಮ ಇಡುವುದು, ಶಿವನ ಭಕ್ತರೆಂದು ಚೆಂಡಕಿ ಬಿಡುವುದು….ಇತ್ಯಾದಿ. ಶಿವನ ಮಹತ್ವ ಕಂಡು ತಮ್ಮವನೆಂದರು. ಶಿವದೇವಾಲಯಗಳ ಪೂಜಾ ಹಕ್ಕು ತಮ್ಮದೆಂದು ಆಕ್ರಮಿಸಿಕೊಂಡರು.
ಮುಂದೆ ಇತ್ತೀಚೆಗೆ ಬುದ್ಧನ ಮಹತ್ವ ಕಂಡು, ವಿಷ್ಣುವಿನ ದಶಾವತಾರದಲ್ಲಿ ಬುದ್ಧ ಒಂದು ಅವತಾರ ಎಂದು ಹೇಳಿ ಸನಿಹ ಮಾಡಿಕೊಳ್ಳಲು ನೋಡಿದರು.
ಹಾಗೆ ಎಷ್ಟೋ ದಿನ ಬಸವಣ್ಣ ಎಂದರೆ ಉರಿದು ಬೀಳುವ ಇವರು, ಎಂದೂ ತಮ್ಮ ಮನೆಯ ಮಗನಿಗೆ ಬಸವ ಎಂದು ಹೆಸರಿಡಲಿಲ್ಲ. ಒಂದು ಫೋಟೊ ಮನೆಯಲ್ಲಿ ಹಾಕಲಿಲ್ಲ.
ಆದರೆ ಇಂದು ಗುರುದೇವರ ತತ್ವ ದೇಶವಿದೇಶಗಳಲ್ಲಿ ಪಸರಿಸಿ ಪ್ರಭಾವಿಸುವುದನ್ನು ಕಂಡು, ವಚನಗಳನ್ನು ಸುಟ್ಟ ಇವರು ವಚನಗಳ ದರ್ಶನ ಮಾಡಿಸ್ತಾರಂತೆ.
ಇವರ ಕುತಂತ್ರಕ್ಕೆ ಬಲಿಯಾಗುವ ಜನ ಈಗಿಲ್ಲ. ಬರಿಬೇಡಿ, ಬಸವಣ್ಣನವರ ಆಶಯದಂತೆ ಬದಲಾಗಿ. ಆಮೇಲೆ ಬರಿಯುವಿರಂತೆ. ವಿ. ಕೃ. ಗೋಕಾಕ್, ಅ.ನ.ಕೃ, ರಂಗರಾವ ದಿವಾಕರ ಎಂಥ ದಿಗ್ಗಜ ವೈದಿಕ ಪಂಡಿತರು ವಚನಗಳ ವರ್ಣನೆ ಸಾರಿಲ್ಲವೆ? ಆ ಪ್ರಾಮಾಣಿಕತೆ ನಿಮ್ಮಲ್ಲಿಲ್ಲ.
“ಆದಿ ಪುರಾಣ ಅಸುರರಿಗೆ ಮಾರಿ, ವೇದ ಪುರಾಣ ಹೋತಿಂಗೆ ಮಾರಿ, ರಾಮ ಪುರಾಣ ರಕ್ಕಸರಿಗೆ ಮಾರಿ, ಭಾರತ ಪುರಾಣ ಗೋತ್ರಕ್ಕೆ ಮಾರಿ.ಎಲ್ಲ ಪುರಾಣ ಕರ್ಮಕ್ಕೆ ಮೊದಲು. ಕೂಡಲ ಸಂಗಮ ದೇವಾ ನಿಮ್ಮ ಶರಣರ ಪುರಾಣಕ್ಕೆ ಪ್ರತಿ ಇಲ್ಲವೊ.”
ಸದ್ಗುರು ಮಹಾನಂದ ತಾಯಿ ಹಿರೇಮಠ