೨೦೦ನೇ ಸಂಚಿಕೆ ಪೂರೈಸಿದ ವಚನಾಮೃತ ಕಾರ್ಯಕ್ರಮ

ಹುಬ್ಬಳ್ಳಿ

ಕರ್ನಾಟಕ ವಿಶ್ವವಿದ್ಯಾಲಯ ಬಸವೇಶ್ವರ ಪೀಠ, ಆಕಾಶವಾಣಿ ಧಾರವಾಡ, ಶ್ರೀ ಗುರುಬಸವ ಮಂಟಪ ಟ್ರಸ್ಟ್ ಕಮೀಟಿ, ಬಸವ ಕೇಂದ್ರ ಹುಬ್ಬಳ್ಳಿ, ಧಾರವಾಡ ಇವರ ಸಹಯೋಗದೊಂದಿಗೆ ಶ್ರೀ ಗುರುಬಸವ ಮಂಟಪ ಟ್ರಸ್ಟ್ ಸಭಾಂಗಣದಲ್ಲಿ ವಚನಾಮೃತ – ೨೦೦ನೇ ಸಂಚಿಕೆಯ ಕಾರ್ಯಕ್ರಮ ನಡೆಯಿತು.

ಆಕಾಶವಾಣಿ ಧಾರವಾಡದ ಕಾರ್ಯಕ್ರಮ ಮುಖ್ಯಸ್ಥ ಶರಣಬಸವ ಚೋಳಿನ ಪ್ರಾಸ್ತಾವಿಕವಾಗಿ ಮಾತನಾಡುತ್ತ 200 ಸಂಚಿಕೆಯವರೆಗೂ ಬಂದಿರುವ ವಚನಾಮೃತ ಕಾರ್ಯಕ್ರಮವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಕೇಳುಗರನ್ನು ತಲುಪಿದೆ ಎಂದರು.

ಮುಖ್ಯ ಅತಿಥಿಯಾಗಿ ಬಂದಿದ್ದ ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಂ. ಡಾ. ವೀರಣ್ಣ ರಾಜೂರ ಕರ್ನಾಟಕ ವಿಶ್ವವಿದ್ಯಾಲಯದ ಎಲ್ಲ ಪೀಠಗಳಿಗೆ ಸಾಕಷ್ಟು ಹಣ ಇದೆ, ಆದರೆ ಬಸವ ಪೀಠಕ್ಕೆ ಅನುದಾನ ಇಲ್ಲ. ಅನುದಾನ ಇಲ್ಲದೆ ಕೇವಲ ಬಸವಾಭಿಮಾನಿಗಳ ದಾಸೋಹದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಜಮಖಂಡಿಯ ಹನಗಂಡಿ ಗ್ರಾಮದ ಸರಕಾರಿ ಪ್ರೌಢಶಾಲೆ ಪ್ರಾಚಾರ್ಯರಾದ ಶಾರದಾ ಮುಳ್ಳೂರ ಮಾತನಾಡುತ್ತ ವಚನಗಳನ್ನು ಕೇಳುತ್ತಾ ಹೋದಂತೆ ಅವುಗಳ ಮಹತ್ವ ನಮಗೆ ಅರಿವಾಗುತ್ತದೆ, ಎಲ್ಲಾ ಸಮಸ್ಯೆಗಳಿಗೂ ವಚನಗಳಲ್ಲಿ ಪರಿಹಾರ ಇದೆ ಎಂದರು.

ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಬಸು ಬೇವಿನಗಿಡದ ಮಾತನಾಡುತ್ತ, ವಚನಾಮೃತವು ಇಂದು ಯುವಕರಿಗೆ ಪ್ರೇರಣೆಯಾಗಿದೆ, ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಕೆ. ಬಿ. ಗುಡಸಿ ಮಾತನಾಡುತ್ತ, ಅಂದು ವಚನ ಕಟ್ಟುಗಳನ್ನು ಸುಟ್ಟರು, ಶರಣರ ಕಗ್ಗೊಲೆ ಮಾಡಿದರು. ಇಂದೂ ಸಹ ಶರಣರ ಇತಿಹಾಸ ತಿರುಚುತ್ತಿದ್ದಾರೆ, ಶರಣರ ಮೇಲೆ ದಾಳಿ ಮಾಡುತ್ತಿದ್ದಾರೆ. ಅಪಾಯದ ದಿನಗಳು ಮತ್ತೆ ಮರುಕಳಿಸಬಹುದೇನೊ ಎನ್ನುವ ಭಯ ಕಾಡುತ್ತಿದೆ ಎಂದರು.

ಗದುಗಿನ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ, ಬಸವಾದಿ ಶರಣರ ತತ್ವಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಜನರನ್ನು ತಲಪುತ್ತಿದೆ. ಅದರಲ್ಲಿ ಆಕಾಶವಾಣಿಯ ವಚನಾಮೃತ ಕಾರ್ಯಕ್ರಮ ಹೆಚ್ಚು ಪರಿಣಾಮ ಬೀರುತ್ತಿದೆ ಎಂದರು.

ಅಧ್ಯಕ್ಷತೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆರ್.ಎಲ್. ಹೈದರಾಬಾದ ವಹಿಸಿದ್ದರು.

ಚಂದ್ರಶೇಖರ ಕರವೀರಶೆಟ್ಟರ ಕಾರ್ಯಧ್ಯಕ್ಷರು, ಶ್ರೀ ಗುರುಬಸವ ಮಂಟಪ ಟ್ರಸ್ಟ್, ಹುಬ್ಬಳ್ಳಿ, ಜಿ.ಬಿ. ಹಳ್ಯಾಳ ಅಧ್ಯಕ್ಷರು ಬಸವಕೇಂದ್ರ ಹುಬ್ಬಳ್ಳಿ, ಸಿದ್ಧರಾಮಣ್ಣ ನಡಕಟ್ಟಿ ಧಾರವಾಡ ಇವರು ಉಪಸ್ಥಿತರಿದ್ದರು.

ಮಾಯಾ ರಾಮನ್ ವಚನ ಪ್ರಾರ್ಥನೆ ಮಾಡಿದರು. ಸುಲೋಚನಾ ತಾಯಿ ಭೂಸನೂರ ಸ್ವಾಗತಿಸಿದರು. ವಚನ ಸುನಾದ ಸಂಗೀತ ತಂಡದ ಶರಣೆಯರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶರಣೆ ಶೈಲಜಾ ರಾಜಕುಮಾರ ಹಾಗೂ ಡಾ. ಈರಣ್ಣ ಇಂಜನಗೇರಿ ಕಾರ್ಯಕ್ರಮ ನಿರೂಪಿಸಿದರು. ಅತಿಥಿಗಳಿಗೆ ಸ್ಮರಣ ಫಲಕ ನೀಡಿ ಗೌರವಿಸಲಾಯಿತು.

ಪ್ರಥಮ‌ ಸಂಚಿಕೆ ವಿಡಿಯೋ: ರಾಜೂರ ಅವರ ವಚನ ವಿಶ್ಲೇಷಣೆ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *