ಹರಿಹರ
ಒಂದು ವರ್ಷ ಪೂರ್ತಿ ರಾಜ್ಯದ 16 ಜಿಲ್ಲೆಗಳಲ್ಲಿ ರಥಯಾತ್ರೆ ಮಾಡುವುದಾಗಿ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳು ಹೇಳಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಇದರ ಬಗ್ಗೆ ಮಾತನಾಡಿ ರಾಣಿ ಚೆನ್ನಮ್ಮನವರು ಈ ದೇಶಕ್ಕಾಗಿ ಮಾಡಿದ ತ್ಯಾಗವನ್ನು ಇಂದಿನ ತಲೆಮಾರಿನವರಿಗೆ ತಿಳಿಸುವ ಉದ್ದೇಶದಿಂದ ‘ಸ್ವತಂತ್ರ ಭಾರತದ ರಥಯಾತ್ರೆ’ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಚೆನ್ನಮ್ಮನವರ ಐಕ್ಯ ಸ್ಥಳ ಬೈಲಹೊಂಗಲದಿಂದ ಅಕ್ಟೊಬರ್ 23ರಿಂದ ಆರಂಭವಾಗಿ ರಥಯಾತ್ರೆ ರಾಜ್ಯದ 16 ಜಿಲ್ಲೆಗಳಲ್ಲಿ ಒಂದು ವರ್ಷದ ಅವಧಿವರೆಗೆ ಸಂಚರಿಸಲಿದೆ ಎಂದರು.