ವಾರಣಾಸಿ
ಬಸವಾದಿ ಶರಣ ಶಿವಲೆಂಕ ಮಂಚಣ್ಣನವರ ತಪೋಭೂಮಿಯಾದ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಒಂದು ದಿನದ ‘ಬಸವಧರ್ಮ ಸಮಾವೇಶ’ವನ್ನು ಆಗಸ್ಟ್ 31 ಆಯೋಜಿಸಲಾಗಿದೆ.
ಸಾನಿಧ್ಯವನ್ನು ಕೂಡಲಸಂಗಮ ಬಸವಧರ್ಮ ಪೀಠದ ಜಗದ್ಗುರು ಡಾ. ಗಂಗಾ ಮಾತಾಜಿ ವಹಿಸಿಕೊಳ್ಳಲಿದ್ದಾರೆ, ಬಸವ ಧ್ವಜಾರೋಹಣವನ್ನು ಮಿರ್ಜಾಪುರದ ಶರಣ ರಾಮಬಿಲಾಸ್ ಅವರು ನಡೆಸಿಕೊಡಲಿದ್ದು, ಗುರುಪೂಜೆಯನ್ನು ಬನಾರಸ್ ಹಿಂದೂ ವಿ.ವಿ.ದ ದಂತವೈದ್ಯೆಯಾದ ಡಾ. ಕೌಶಿಕಾ ರಾಜಶೇಖರ ನೆರವೇರಿಸಲಿದ್ದು, ಡಾ. ಯು. ಪರಮೇಶ್ವರಪ್ಪ ಉಪಸ್ಥಿತರಿರುವರು.
ಬಸವಾದಿ ಶರಣರ ವಚನಗಳ ಮೇಲೆ ಪೂಜ್ಯರಿಂದ ಪ್ರವಚನಗಳು ನಡೆಯಲಿದ್ದು, ನಿರ್ಣಯಗಳ ಘೋಷಣೆಯಾಗಲಿದೆ. ನೇತೃತ್ವವನ್ನು ಬಸವಯೋಗಿ ಮಹಾಸ್ವಾಮೀಜಿ ಹಾಗೂ ಮಾತೆ ವಿಜಯಾಂಬಿಕಾ ವಹಿಸಲಿದ್ದಾರೆ.
