ಭಾರತ ದೇಶ ಬಸವ ಭಾರತವಾಗಬೇಕು: ವಾರಣಾಸಿಯಲ್ಲಿ ಗಂಗಾ ಮಾತಾಜಿ

ಬಸವ ಮೀಡಿಯಾ
ಬಸವ ಮೀಡಿಯಾ

ವಾರಣಾಸಿ

ವಾರಣಾಸಿ ನಗರದ ಬನಾರಸ್ ಹಿಂದು ವಿಶ್ವವಿದ್ಯಾಲಯದ ಆವರಣದ ಕೆ. ಎನ್. ಉಡುಪ ಆಡಿಟೋರಿಯಂದಲ್ಲಿ ರವಿವಾರ ಐತಿಹಾಸಿಕ ೮ನೇ ‘ಬಸವ ಧರ್ಮ ಸಮ್ಮೇಳನ’ ಯಶಸ್ವಿಯಾಗಿ ನಡೆಯಿತು.

ಬೆಳಿಗ್ಗೆ 6 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಪ್ರಾರಂಭವಾಗಿ ಬೆ.9.30ಕ್ಕೆ ವೇದಿಕೆಯ ಕಾರ್ಯಕ್ರಮಗಳು ಪ್ರಾರಂಭವಾದವು.

ಕಾರ್ಯಕ್ರಮದ ಸಾನಿಧ್ಯವನ್ನು ಬಸವಧರ್ಮ ಪೀಠ, ಕೂಡಲಸಂಗಮದ ಜಗದ್ಗುರು ಪೂಜ್ಯ ಡಾ. ಗಂಗಾದೇವಿ ಮಾತಾಜಿಯವರು, ಬೆಂಗಳೂರಿನ ವಿಶ್ವಕಲ್ಯಾಣ ಮಿಷನ್ ನ ಸದ್ಗುರು ಬಸವಯೋಗಿ ಸ್ವಾಮೀಜಿ ಹಾಗೂ ಮಾತೆ ವಿಜಯಾಂಬಿಕಾದೇವಿ ವಹಿಸಿದ್ದರು.

ಪ್ರಾರಂಭದಲ್ಲಿ ಗುರು ಬಸವ ಪೂಜೆಯನ್ನು ವಾರಣಾಸಿ ಬನಾರಸ್ ಹಿಂದು ಯುನಿವರ್ಸಿಟಿಯ ಪ್ರೊ. ಯು. ಪರಮೇಶ್ವರಪ್ಪ, ಹೆಸರಾಂತ ವೈದ್ಯೆ ಕೌಷಿಕಾ ರಾಜಶೇಖರ, ಬೀದರ ಲಿಂಗಾಯತ ಸಮಾಜ ಅಧ್ಯಕ್ಷರಾದ ಕುಶಾಲರಾವ ಪಾಟೀಲ, ಬಸವ ಸಂಕ್ಷೇಮ ಸಂಪಾದಕರಾದ ಮಲ್ಲಿಕಾರ್ಜುನಪ್ಪ ಕಲವಾ ಹಾಗೂ ಜಹಿರಾಬಾದ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ಡಾ. ಶರಣಪ್ಪ ನೆರವೇರಿಸಿದರು.

ಧ್ವಜಾರೋಹಣವನ್ನು ತೆಲಂಗಾಣ ರಾಜ್ಯ ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಶಂಕರ ಪಾಟೀಲ ಹಾಗೂ ಕರ್ನಾಟಕ ರಾಜ್ಯ ಲಿಂಗಾಯತ ಧರ್ಮ ಮಹಾಸಭೆ ಅಧ್ಯಕ್ಷರಾದ ಈಶ್ವರ ಕೊರ್ಲಹಳ್ಳಿ ನೆರವೇರಿಸಿದರು.

ಅತಿಥಿಗಳಾದ ಮಲ್ಲಿಕಾರ್ಜುನಪ್ಪ ಕಲವಾ ಅವರು ತೆಲಗು ಭಾಷೆಯಲ್ಲಿ ಮಾತನಾಡುತ್ತಾ, ಯುಗಕ್ಕೊಬ್ಬರು ಧರ್ಮ ಸಂಸ್ಕಾರವನ್ನು ನೀಡಲು ಯುಗಪುರುಷ ಉದಯಿಸುವಂತೆ ಈ ಯುಗಕ್ಕೆ ಗುರು ಬಸವಣ್ಣನವರು ಯುಗಪುರುಷರಾಗಿ ಅವತರಿಸಿದ್ದಾರೆ. ಸಮಸಮಾಜದ ಕನಸಷ್ಟೆ ಅಲ್ಲದೇ ಮಹಿಳೆಯರ ಹಕ್ಕಿನ ಬಗ್ಗೆಯೂ ಪ್ರಸ್ತಾಪಿಸಿದ ಜಗತ್ತಿನ ಮೊಟ್ಟ ಮೊದಲ ದಾರ್ಶನಿಕ ಗುರು ಬಸವಣ್ಣನವರಾಗಿದ್ದಾರೆ ಎಂದರು.

ಅನಿಲ ಕುಮಾರ ಪಾಟೀಲ ಮಾತನಾಡುತ್ತ, ಮಾತಾಜಿಯವರ ಕನಸನ್ನು ಪೂರ್ಣಗೊಳಿಸಲು ಗಂಗಾಮಾತಾಜಿಯವರು ಬಂದಿದ್ದಾರೆ, ಅವರ ಕೈ ಬಲಪಡಿಸುವ ಕೆಲಸವಾಗಬೇಕು. ಮುಂದಿನ ದಿನಮಾನದಲ್ಲಿ ಹನ್ನೆರಡು ಜೋರ್ತಿಲಿಂಗ ಸ್ಥಳಗಳಲ್ಲೂ ಬಸವಧರ್ಮ ಸಮ್ಮೇಳನಗಳು ನಡೆಸಬೇಕು ಎನ್ನುವ ಇಚ್ಚೆಯನ್ನು ವ್ಯಕ್ತಪಡಿಸಿದರು.

ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕನಷ್ಷೇ ಅಲ್ಲದೇ ಇಡೀ ಪ್ರಪಂಚದ ನಾಯಕರಾಗಬೇಕು ಎಂದರು. ಕಾಯಕದಿಂದ ಬಂದ ಸಂಪೂರ್ಣ ಹಣವನ್ನ ಬಸವಣ್ಣನವರ ಸೇವೆಗಾಗಿ ನಾನು ನೀಡಲು ಸದಾ ಸಿದ್ದನಿದ್ದೇನೆ ಎಂದರು.

ಸಾನಿಧ್ಯವನ್ನು ವಹಿಸಿದ್ದ ಗಂಗಾದೇವಿ ಮಾತಾಜಿ ತಮ್ಮ ಆಶೀರ್ವಚನ ನೀಡುತ್ತಾ ಊಟಿಯಿಂದ ಪ್ರಾರಂಭವಾಗಿ ಇಂದು ವಿಶ್ವಪ್ರಸಿದ್ದ ಕಾಶಿ ನಗರದಲ್ಲಿ ಎಂಟನೆಯ ಬಸವಧರ್ಮ ಸಮ್ಮೇಳನ ಹೇಗೆ ನಡೆದುಕೊಂಡು ಬಂದಿವೆ ಎಂದು ವಿವರಿಸಿದರು.

ಜಗತ್ತಿನಲ್ಲಿ ಶಾಂತಿ ಸೌಹಾರ್ದತೆ ನೆಲೆಗೊಳ್ಳಬೇಕಾದರೆ ಬಸವ ಸಂಸ್ಕೃತಿಯು ದೇಶ ವ್ಯಾಪಿಯಾಗಿ ಪಸರಿಸಬೇಕು ಎಂದರು. ದೇಶದ ಐಕ್ಯತೆಗೆ ಬಸವಣ್ಣನವರ ತತ್ವಗಳೇ ಪೂರಕ, ಆದ್ದರಿಂದ ಭಾರತ ದೇಶ ಇನ್ನು ಮುಂದೆ ಬಸವ ಭಾರತವಾಗಬೇಕು ಎಂದರು.

ಬೆಂಗಳೂರಿನಲ್ಲಿ ಅಕ್ಟೊಬರ್ 5 ರಂದು ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶರಣ ವೃಂದಕ್ಕೆ ಕರೆ ಕೊಟ್ಟರು.

ಪೂಜ್ಯ ಮಾತಾಜಿಯವರು ರಚಿಸಿದ ಕಲ್ಯಾಣ ಕರೆದಿದೆ ಕಲ್ಯಾಣ ಗೀತೆಯನ್ನು ವಿಜಯಲಕ್ಷ್ಮಿ ಲಿಂಗಾಯತ ಅವರು ಗಾಯನ ಹಾಗೂ ಶಾಂತಕ್ಕ ಅದ್ಯಕ್ಷರು ಮಹಿಳಾ ಗಣ ಇವರು ಬಸವನ ಬೆಳಕೆ ಎಲ್ಲಾಡಿ ಬಂದೆ ಗೀತೆಯನ್ನು ಹಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಯು ಪರಮೇಶ್ವರಪ್ಪ ಅವರು ಮಾತನಾಡುತ್ತ ಲಿಂಗಾಯತ ಧರ್ಮ ಸ್ವತಂತ್ರವಾದರೆ ಅದರಿಂದ ಲಿಂಗಾಯತರಿಗೆ ಎಷ್ಟೊಂದು ಉಪಯೋಗವಾಗಲಿದೆ ಹಾಗೂ ವಚನಗಳು ಈಗ ಸಾಕಷ್ಟು ಡಿಜಿಟಲೀಕರಣವಾಗಿದೆ, ಅದರ ಸದುಪಯೋಗ ಮಾಡಿಕೊಳ್ಳಬೇಕೆಂದರು. ಕೇವಲ ಬಸವಣ್ಣನವರ ಬಗ್ಗೆ ಹೇಳುತ್ತ ಮತ್ತು ವಚನಗಳನ್ನ ಹೇಳುತ್ತ ಹೋದರೆ ಸಾಲದು ನಡೆಯಲ್ಲೂ ಆಚರಣೆಯನ್ನೂ ಮಾಡಬೇಕು ಎಂದರು.

ಬಸವಣ್ಣನವರ ಚಿಕ್ಕಮೂರ್ತಿಗಳನ್ನು ಮಾಡಿ ಮನೆಮನೆಗೂ ತಲುಪಿಸುವ ಕಾರ್ಯವಾಗಬೇಕು ಎಂದರು.

ಅತಿಥಿಗಳಾಗಿದ್ದ ಕೌಷಿಕ ರಾಜಶೇಖರ ಮಾತನಾಡುತ್ತ ಹಲವಾರು ವಚನಗಳನ್ನ ಓದಿಕೊಂಡಿದ್ದೇನೆ ಮತ್ತು ದಿನನಿತ್ಯ ಲಿಂಗಪೂಜೆ ಮಾಡುತ್ತೇನೆ ಎಂದರು, ಹಾಗೂ ಬಸವಣ್ಣನವರ ಆಶೀರ್ವಾದದಿಂದ ತಾನು ಹೇಗೆ ಎಂಬಿಬಿಎಸ್ ಸೀಟು ಪಡೆದೆ ಎಂದು ವಿವರಿಸಿದರು.

ಸ್ವಾಗತವನ್ನು ರವಿಶಂಕರ ಬಳ್ಳಾರಿ ಮಾಡಿದರು. ಪ್ರಾಸ್ತಾವಿಕ ನುಡಿಗಳನ್ನು ಚಂದ್ರಮೌಳಿ ಅವರು ನಡೆಸಿಕೊಟ್ಟರು.

ಗೌರವಾನ್ವಿತರಾಗಿ ಆಗಮಿಸಿದ, ಶರಣರಾದ ಅನಿಲಕುಮಾರ ಪಾಟೀಲ, ಚಂದ್ರಮೌಳಿ, ವೀರಣ್ಣ ಕೊರ್ಲಹಳ್ಳಿ, ದೇವಿಕಾ ಶರಣಪ್ಪ, ನಂದಕುಮಾರ ಕೊಲತಪಳ್ಳಿ, ಅಶೋಕ ಕುಮಾರ , ಡಾ. ಶರಣಪ್ಪ, ಶಿವಕುಮಾರ ಪಟ್ನೆ, ಪ್ರಕಾಶ ಜೀರ್ಗೆ, ಶಾಂತಮ್ಮ ಮಹಿಳಾ ಅದ್ಯಕ್ಷರು ರಾಬದ. ಶೊಭಾತಾಯಿ, ಸುನಿತಾತಾಯಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಶರಣರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
Leave a comment

Leave a Reply

Your email address will not be published. Required fields are marked *