ಸಾಣೇಹಳ್ಳಿ
31 ಡಿಸೆಂಬರ್ 2024ರಂದು ನಡೆದ ವರ್ಷದ ಹರ್ಷ ಕಾರ್ಯಕ್ರಮಕ್ಕೆ ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮಸ್ಥರಿಂದ 32 ಕ್ವಿಂಟಲ್ ಅಕ್ಕಿಯನ್ನು ಸಾಣೇಹಳ್ಳಿ ಶ್ರೀಮಠಕ್ಕೆ ಸಮರ್ಪಿಸಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಪೂಜ್ಯರು ಭಕ್ತಾದಿಗಳು ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವುದು ಸಂತೋಷ. ಪ್ರತಿಯೊಬ್ಬರು ದುರ್ವ್ಯಸನ ದುರಾಚಾರದಿಂದ ದೂರವಾಗಬೇಕು. ಪ್ರತಿಯೊಬ್ಬರು ಆದರ್ಶ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ವ್ಯಕ್ತಿ ಪರಿಶುದ್ದವಾಗಿದ್ದರೆ ಸಮಾಜವೂ ಶುದ್ಧವಾಗುವುದು. ಈ ನೆಲೆಯಲ್ಲಿ ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಬೇಕು. ಆಗ ಮನ, ಮನೆ, ಸಮಾಜದಲ್ಲಿ ಸುಧಾರಣೆಯಾಗುವುದು.
ನೀವು ಕಲೆ, ಸಾಹಿತ್ಯ, ಸಂಗೀತದ ಒಲವು ಬೆಳಸಿಕೊಂಡು ಸುಸಂಸ್ಕೃತ ಜೀವನ ನಡೆಸುವಂತಾಗಲಿ ಎಂದು ತಾಲ್ಲೂಕಿನ ಯುವಕರಿಗೆ ಕಿವಿ ಮಾತು ಹೇಳಿದರು. ಕಲೆಗೆ ನೆರವು ನೀಡುವ ನಿಮ್ಮ ಸದ್ಭಾವನೆಗಳು ಹೀಗೇ ಮುಂದುವರಿದು ಇತರರಿಗೂ ಆದರ್ಶವಾಗಲಿ ಎಂದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಶಂಭುಲಿಂಗಪ್ಪ, ಖಜಾಂಚಿ ಬಿ. ಎಂ. ಹನುಮಂತಪ್ಪ, ಸದಸ್ಯರಾದ ನಾಗರಾಜಪ್ಪ, ಮುಖ್ಯೋಪಾಧ್ಯಾಯರಾದ ಎಂ. ಸಿದ್ಧಾರ್ಥ, ರವೀಂದ್ರನಾಥ, ಲೋಕೇಶ, ಶಂಭುಲಿಂಗಪ್ಪ, ಗಣೇಶ, ರಾಘವೇಂದ್ರ, ಶಿವಕುಮಾರ, ರಮೇಶ ಮತ್ತಿತರರು ಇದ್ದರು.