ವೀರಶೈವ ಅತಂತ್ರ, ಲಿಂಗಾಯತ ಸ್ವತಂತ್ರ

ಬೆಂಗಳೂರು

ರಂಭಾಪುರಿ ಶ್ರೀಗಳೆ, ಕೇದಾರ ಶ್ರೀಗಳೇ, ಇದು 21ನೇ ಶತಮಾನದಲ್ಲಿ ನಿಮ್ಮ ಕಾಗಕ್ಕ ಗುಬ್ಬಕ್ಕ ಕ್ಕ ಕಥೆಗಳಿಂದ ಲಿಂಗಾಯತವನ್ನು ವೀರಶೈವ ಜೊತೆ ಸೇರಿಸುವ ವ್ಯರ್ಥ ಪ್ರಯತ್ನ ಮಾಡಬೇಡಿ. ಇಂದು ಲಿಂಗಾಯತರು ವಚನ ಸಾಹಿತ್ಯದ ಅರಿವಿನ ಮೂಲಕ ಎಚ್ಚೆತ್ತು ಕೊಂಡಿದ್ದಾರೆ.

ಸಮಾಜದಲ್ಲಿ ಮುಗ್ಧ ಜನರನ್ನು ದಿಕ್ಕು ತಪ್ಪಿಸಬೇಡಿ. ವೀರಶೈವ ಅಂಥ ಹೇಳುವ ತಾವು ಈ ಹಿಂದೆ ನಿಮ್ಮ ವರ್ಗಾವಣೆ ಪತ್ರಿಕೆಯಲ್ಲಿ (T.C)ಯಲ್ಲಿ ಏನಿದೆ ಎಂಬುದನ್ನು ಗಮನಿಸಿ ಪೂಜ್ಯರೇ? ತಾವು ತಮ್ಮ ವರ್ಗಾವಣೆ ಪತ್ರಿಕೆಯಲ್ಲಿ ಲಿಂಗಾಯತ ಎಂದು ಬರೆದಿದ್ದು ಮರೆತು ಹೊಯಿತೇ?

ತಾತ್ವಿಕವಾಗಿ ವೀರಶೈವ ಸಿದ್ದಾಂತ ಮತ್ತು ಲಿಂಗಾಯತ ಸಿದ್ದಾಂತ ಬೇರೆ ಬೇರೆಯಾಗಿದೆ.
ನಿಮಗೆ ವೀರಶೈವ ಧರ್ಮದ ಮೇಲೆ ಅಭಿಮಾನ ಇದ್ದರೆ ನಿಮ್ಮ ಸಿದ್ಧಾಂತ ಪ್ರಸಾರ ಮಾಡಿ.

ಅದು ಬಿಟ್ಟು ಲಿಂಗಾಯತ ಪದ ಸೇರಿಸಿಕೊಂಡು ಹೇಳುವುದು ಏಕೆ? ಒಂದು ಕಡೆ ವೀರಶೈವ ಹಿಂದು ಧರ್ಮದ ಭಾಗ ಅಂಥ ಹೇಳುತ್ತಿರಿ, ಮತ್ತೊಂದು ಕಡೆ
Schedule caste ಅಡಿಯಲ್ಲಿ ನಾವು ಬೇಡ ಜಂಗಮರು ಎಂದು ಮೀಸಲಾತಿ ಕೇಳುತ್ತೀರಿ.

ಹಾಲುಮತದ ರೇವಣಸಿದ್ಧರನ್ನು ಕಪೋಲಕಲ್ಪಿತ ರೇಣುಕಾಚಾರ್ಯರನ್ನಾಗಿ ಮಾಡಿದ ಪುರಾಣ ಇತಿಹಾಸ ಆಗುವುದಿಲ್ಲ.

ಲಿಂಗಾಯತ ಧರ್ಮಕ್ಕೆ ಇತಿಹಾಸ ಇದೆ. ಲಿಂಗಾಯತ ಧರ್ಮದ ಸ್ಥಾಪಕ ವಿಶ್ವಗುರು ಬಸವಣ್ಣನವರು ಎಂದು ಹೇಳುವ ಕನ್ನಡ ನೆಲಮೂಲದ ಶರಣರ ವಚನಗಳು ಇವೆ.

ನಿಮ್ಮದೊಂದು ಧರ್ಮ ಎಂದು ಹೇಳುವ ನಿಮ್ಮ ಪಂಥಾಹ್ವಾನ ಸ್ವೀಕಾರ, ಚರ್ಚೆಗೆ
ಸಿದ್ದ. ಸಮಯ, ಸ್ಥಳ‌ ತಿಳಿಸಿ.

ಮತ್ತೂಮ್ಮೆ ಮಗದೂಮ್ಮೆ ಹೇಳುತ್ತೇವೆ ಲಿಂಗಾಯತರು ಹಿಂದೂಗಳಲ್ಲ, ಲಿಂಗಾಯತರು
ವೀರಶೈವರಲ್ಲ. ತಾವು ಶತಕದ ಅಂಚಿನಲ್ಲಿರುವ ನಾಡಿನ ವಯೋವೃದ್ಧ ನಾಡೋಜ ಗೂರುಚ ಅವರನ್ನು ಏಕವಚನದಲ್ಲಿ ಮಾತನಾಡಿದ್ದನ್ನು ಖಂಡಿಸುತ್ತೇವೆ. ಅಂಗದ ಮೇಲೆ
ಲಿಂಗವಿದ್ದವನು, ಬಸವಾದಿ ಶರಣರ ವಚನಗಳೆ ನಮ್ಮ ಉಸಿರು ಎಂದು ಬದುಕುವ ಎಲ್ಲರೂ ಲಿಂಗಾಯತರು.

ಲಿಂಗಾಯತ ಧರ್ಮಕ್ಕೆ ಸ್ಪಷ್ಟತೆ ಇದೆ,ಅದು ಹುಟ್ಟಿದ್ದೇ ಸ್ವತಂತ್ರವಾಗಿ. ಬದುಕುವುದು
ಎಲ್ಲರನ್ನೂ ಒಳಗೊಂಡ ಶರಣರ ವಚನ ಸಂವಿಧಾನದ ತಳಹದಿ ಮೇಲೆ ಕಟ್ಟಲ್ಪಟ್ಟ ಸ್ವತಂತ್ರ ಲಿಂಗಾಯತ ಧರ್ಮ ಎಂದೆಂದೂ ಸ್ವತಂತ್ರ ಧರ್ಮ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ

https://chat.whatsapp.com/IxxC2m7AXyW84KPf73t5iL

Share This Article
2 Comments
  • ಪಾಪ ಇತ್ತೀಚೆಗೆ ಲಿಂಗಾಯುತ ಧರ್ಮಿಯರಲ್ಲಿ ಆಗುವಂತಹ ಜಾಗೃತಿ ಮತ್ತು ಬೆಳವಣಿಗೆಗಳನ್ನು ಕಂಡಾಗ, ಈ ಮನು ವಾದಿ ಸಂಸ್ಕೃತಿಯ ಪುನರಾವತಾರಿಗಳಾದ ರಂಭಾಪುರಿ ಶ್ರೀಗಳಿಗೆ ತಾವು ನಿಂತ ನೆಲ ಅಲುಗಾಡುತ್ತಿರುವುದನ್ನು ಕಂಡು ಅಸಹಾಯಕತೆಯಿಂದ ತೊಳಲಾಡುತ್ತಿದ್ದಾರೆ. ಅವರು ಯಾರೆಂಬುದು ಅವರಿಗೆ ಗೊತ್ತಿಲ್ಲ.ಹಿಂದುಗಳೋ, ವೀರಶೈವರೋ, ಲಿಂಗಾಯಿತರೋ, ಬೇಡ ಜಂಗಮರೋ ಒಂದೂ ತಿಳಿಯದೆ ಗೊಂದಲದಲ್ಲಿದ್ದಾರೆ. ಅವರ ಕಪೋಲ ಕಲ್ಪಿತ ಪುರಾಣ, ಇತಿಹಾಸ ಪರಂಪರೆಯ ಮುಂದೆ ನಿಲ್ಲಲಾರದು. ಬಸವ ಪರಂಪರೆಯ ಮಠದಲ್ಲಿಯೇ ಬಾಲ್ಯದಲ್ಲಿ ತಿಂದುಂಡು ಬೆಳೆದು ಇದೀಗ ಬಸವಣ್ಣನವರ ಧರ್ಮಕ್ಕೆ ಅಪಚಾರ ಮಾಡುವುದು ಎಷ್ಟರ ಮಟ್ಟಿಗೆ ಸರಿ. ತಮ್ಮ ಶಾಲಾ ದಾಖಲಾತಿಗಳಲ್ಲಿ ಲಿಂಗಾಯಿತ ಎಂದು ಇದ್ದರೂ ಜನರಿಗೆ ಸುಳ್ಳು ಹೇಳುವುದರಲ್ಲಿ, ಸತ್ಯ ಮರೆಮಾಚುವುದರಲ್ಲಿ ತಾವು ಸಿದ್ದ ಹಸ್ತರಾದರು ಈ ವರ್ತಮಾನ ಯುಗದಲ್ಲಿ ಜನಗಳ ಕಣ್ಣಿಗೆ ಮಣ್ಣೆರೆಚಲು ಸಾಧ್ಯವಿಲ್ಲ . ಸತ್ಯಕ್ಕೆ ಎಂದಾದರೂ ಜಯ ಸಿಕ್ಕೇ ಸಿಗುತ್ತದೆ.

  • ಅವರಿಗೆ ಮಾನ ಮರ್ಯಾದೆ ಇಲ್ಲ. ನಾವು ಕೊಡುವ ಮರ್ಯಾದೆ ಹೆಚ್ಚಾಗಿದೆ. ನಾನು ಲಿಂಗಾಯತ, ನೀವು ವೀರಶೈವ. ವೀರಶೈವ ವೀರಶೈವ ಸಿದ್ದಾಂತ ವನ್ನಷ್ಟೆ ಹೇಳಿ, ಬಸವ ಪ್ರಣೀತ ಲಿಂಗಾಯತ ವನ್ನೇಕೆ ತಳಕು ಹಾಕಿಕೊಳ್ಳುತ್ತೀರಿ. ಇಲ್ಲವೆ ಜಗಜ್ಯೋತಿ ಬಸವೇಶ್ವರನ್ನು ಧರ್ಮಗುರು ಎಂದು ಒಪ್ಪಿಕೊಂಡು ಪೀಠದ ಮುಖಾಂತರ ಲಿಂಗಾಯತ ಧರ್ಮಪ್ರಚಾರ, ಪ್ರಸಾರ ಮಾಡಿ. ಯಾವ ಯೋಗ್ಯತೆಯ ಮೇರೆಗೆ ಕೈಯನ್ನು ಯಾವಾಗಲು ಆಶೀರ್ವಾದ ಮುದ್ರೆಯಿಂದ ತೋರಿಸುತ್ತಾರೊ? ತೋರಿಸಿ ಅದು ನಿಮ್ಮ ವೀರಶೈವ ಭಕ್ತಾದಿಗಳಿಗೆ, ಲಿಂಗಾಯತರಿಗಲ್ಲ! ಜಯ ಬಸವ! ಜೈ ಲಿಂಗಾಯತ!

Leave a Reply

Your email address will not be published. Required fields are marked *

ಸಂಸ್ಥಾಪಕ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು.