“ವೀರಶೈವ ಧರ್ಮಕ್ಕೆ 36 ಲಕ್ಷ ವರ್ಷಗಳ ಇತಿಹಾಸವಿದೆ ಎಂದು ಕಾಶಿ ಜಗದ್ಗುರುಗಳು ರಚಿಸಿರುವ ತಂತ್ರಜಾಲದಲ್ಲಿ ಹೇಳಲಾಗಿದೆ. ಇದಕ್ಕೆಲ್ಲಾ ಸಾಕ್ಷಿ ಕೊಡಲು ಸಾಧ್ಯವಿಲ್ಲ…”
ಹೊಸದುರ್ಗ
ವೀರಶೈವ ಬೇರೆ, ಲಿಂಗಾಯಿತ ಬೇರೆ ಎಂದು ಗೊಂದಲ ಸೃಷ್ಠಿಸುವುದು ಬೇಡ. ಹಿಂದೆ, ಇಂದು, ಮುಂದೆ, ಮುಂದೆಂದಿಗೂ ವೀರಶೈವ, ಲಿಂಗಾಯಿತ ಒಂದೇ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಶುಕ್ರವಾರ ಹೇಳಿದರು ಎಂದು ವರದಿಯಾಗಿದೆ.
“ವೀರಶೈವ ಹಾಗೂ ಲಿಂಗಾಯಿತ ಧರ್ಮಗಳ ಸಾರ ಒಂದೇ ಆಗಿರುವುದರಿಂದ ಬಾಳೆಹೊನ್ನೂರಿನ ಜಗದ್ದುರುಗಳು ಹಾಗೂ ಸಿದ್ದಗಂಗೆಯ ಶಿವಕುಮಾರ ಶ್ರೀಗಳು ಹೇಳಿರುವಂತೆ ವೀರಶೈವ, ಲಿಂಗಾಯಿತ ಒಂದೇ ಎಂದು ಎಲ್ಲರೂ ಭಾವಿಸೋಣ,” ಎಂದು ಬಿದರಿಯವರು ಭಾಷಣ ಮಾಡಿದರು ಎಂದು ಕನ್ನಡ ಪ್ರಭ ವರದಿ ಮಾಡಿದೆ.
ವರದಿಯ ಪ್ರಕಾರ ಬಿದರಿಯವರು “ವೀರಶೈವ ಧರ್ಮಕ್ಕೆ 36 ಲಕ್ಷ ವರ್ಷಗಳ ಇತಿಹಾಸವಿದೆ ಎಂದು ಕಾಶಿ ಜಗದ್ಗುರುಗಳು ರಚಿಸಿರುವ ತಂತ್ರಜಾಲದಲ್ಲಿ ಹೇಳಲಾಗಿದೆ. ಇದಕ್ಕೆಲ್ಲಾ ಸಾಕ್ಷಿ ಕೊಡಲು ಸಾಧ್ಯವಿಲ್ಲ ಏಕೆಂದರೆ ಶ್ರೀ ರಾಮ ಅಯೋಧ್ಯಯಲ್ಲಿಯೇ ಹುಟ್ಟಿದ್ದ ಎನ್ನುವುದಕ್ಕೆ ಸಾಕ್ಷಿ ಕೊಡಲು ಸಾಧ್ಯವೇ? ಇವೆಲ್ಲಾ ನಂಬಿಕೆ ಅಷ್ಠೆ. ಆದ್ದರಿಂದ, ಲಿಂಗಾಯಿತ ಧರ್ಮವನ್ನು ಬಸವಣ್ಣ 12ನೇ ಶತಮಾನದಲ್ಲಿ ಸ್ಥಾಪಿಸಿದ್ದರು ಎಂದು ಹೇಳಲಾಗುತ್ತಿದೆ,” ಎಂದು ಹೇಳಿದ್ದಾರೆ.
ನೂತನವಾಗಿ ಆಯ್ಕೆಯಾದ ಮಹಾಸಭಾದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಮಂಡಳಿಯ ಪದಗ್ರಹಣ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರಿಗೆ ಅಭಿನಂದನ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಬಿದರಿರವರು, ಹೊಸದುರ್ಗದ ಶಾಸಕರಾದ ಬಿ.ಜಿ ಗೋವಿಂದಪ್ಪನವರು, ನೂತನ ಅಧ್ಯಕ್ಷರಾದ ಶ್ರೀಯುತ ಮಂಜುನಾಥ್ ರವರು, ನಿಕಟಪೂರ್ವ ಅಧ್ಯಕ್ಷರಾದ ಶ್ರೀಯುತ ಓಂಕಾರಪ್ಪನವರು, ಜಿಲ್ಲಾಧ್ಯಕ್ಷರಾದ ಮಹಡಿ ಶಿವಮೂರ್ತಿರವರು, ಮಾಜಿ ಶಾಸಕರಾದ ಬಸವರಾಜಪ್ಪ ನವರು, ವಿಧಾನ ಪರಿಷತ್ ಸದಸ್ಯರಾದ ಕೆ ಎಸ್ ನವೀನ್ ರವರು, ಖನಿಜ ನಿಗಮ ಮಾಜಿ ಅಧ್ಯಕ್ಷರಾದ ಶ್ರೀಯುತ ಲಿಂಗಮೂರ್ತಿರವರು, ಅಂಜಿ ಶಿವಸ್ವಾಮಿ ರವರು, ಶ್ರೀಮತಿ ಮಧುರ ಅಶೋಕ್ ಕುಮಾರ್ ರವರು, ಶ್ರೀಯುತ ರೇಣುಕ ಪ್ರಸನ್ನ ರವರು, ನಟರಾಜ್ ಸಾಗರನಹಳ್ಳಿ ರವರು, ಈರೇಶ್ ಶಿಕಾರಿಪುರ ರವರು ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ವೀರಶೈವಧರ್ಮಕ್ಕೆ 36 ಲಕ್ಷ ವರ್ಷ ಇತಿಸಾಸವೇ……..?ಅಬ್ಬಬ್ಬಾ..ಸುಳ್ಳು ಹೇಳಿದ್ರೆ ಕೊನೆ ಪಕ್ಷ ನಂಬುವಷ್ಟರ ಮಟ್ಟಿಗಾದರೂ ಇರಬೇಕಲ್ವಾ….ಒಂದು ವೇಳೆ ವೀರಶೈವ ಧರ್ಮಕ್ಕೆ 36 ಲಕ್ಷ ವರ್ಷ ಇತಿಹಾಸವಿರುವುದಾಗಿದ್ದರೆ ವಿಶ್ವದಲೆಲ್ಲಾ ವೀರಶೈವ ಧರ್ಮೀಯರೇ ಇರಬೇಕಾಗಿತ್ತಲ್ವೆ… ??
ಹಾಡಿದ್ದನ್ನೇ ಹಾಡಿದ ಕಿಸಬಾಯಿ ದಾಸ..
ಇನ್ನೆಷ್ಟು ವರ್ಷಗಳು ಇದೇ ಸುಳ್ಳು ಸುದ್ದಿಗಳನ್ನು ಹೇಳುತ್ತೀರಿ ?
ವಿಷಯ ಅಳಿಸಿ ಹೋಗಿದೆ ಜಾಸ್ತಿ ತಿಂದರೆ ಹೊಟ್ಟೆ ಕೆಟ್ಟು ಹೋಗುತ್ತದೆ.
ಇದರಿಂದ ಏನೂ ಪ್ರಯೋಜನವಿಲ್ಲ ಇನ್ನಾದರೂ ಬದಲಾಗಿ.
ತಾವು ಒಬ್ಬ ಒಳ್ಳೆಯ ಅಧಿಕಾರಿಯಾಗಿ ಈ ರೀತಿ ಮಾತನಾಡುವದು ಸರಿಯಲ್ಲ ಸರ್…
ಇಂಥವರು ಎಷ್ಟೇ ಸುಳ್ಳುಗಳನ್ನ ಬಾಯ ಬಡಕೊಂಡ್ರು ಸತ್ಯ ಎಂದಿಗೂ ಸುಳ್ಳಾಗಲಾರದು.
ಲಿಂಗಾಯತ ಧರ್ಮ ಸತ್ಯ ಇದನ್ನು ಗುರು ಬಸವಣ್ಣನವರೇ ಕೊಟ್ಟದ್ದು ಇದು ಕೂಡ ನೂರಕ್ಕೆ ನೂರರಷ್ಟು ಸತ್ಯ.
ಸುಳ್ಳು ಯಾವಾಗಲೂ ತರಗಲೆ ಇದ್ದ ಹಾಗೆ ಜೋರಾದ ಗಾಳಿ ಬೀಸಿದರೆ ಸಾಕು ಹಾರಿ ಹೋಗುತ್ತದೆ.
ಸತ್ಯ ಯಾವಾಗಲೂ ಪ್ರಕಾಶಿಸುವ ವಜ್ರ ಇದ್ದ ಹಾಗೆ
ಇಂಥವರು ವಚನಸಾಹಿತ್ಯ ಒಂದಷ್ಟು ಚೆನ್ನಾಗಿ ಅಭ್ಯಾಸ ಮಾಡಬೇಕು.ತಮಗೆ ತಿಳಿಯಲಿಲ್ಲ ಅಂದರೂ ಒಳ್ಳೆಯ ಅನುಭಾವಿಗಳ ಹತ್ತಿರ ಕೇಳಿ ತಿಳಿದುಕೊಳ್ಳಬೇಕು.
“ಮಂಗಲಮಯ ಮಹಾಲಿಂಗೋದ್ಭವರಿಗೆ ಮಂಗಲವೆನ್ನಿರಿ ಸಾಂಗದಲಿ” ಈ ಮಂಗಲಗೀತೆಯಲ್ಲಿ ಲಿಂಗೋದ್ಭವ ಎಂದರೆ ಏನಂತ ತಿಳಿದು ಮಾತಾಡಿ ಬಿದರಿಯವರೇ. ಕಲ್ಲಿನಲ್ಲಿ ಹೆಂಗ ಪಂಚಾಚಾರ್ಯರು ಹುಟ್ಟಿದರು ಅನ್ನೋದನ್ನ ಹೇಳರಿ. ಕಲ್ಲಿನಾಗ ಒಂದ ಅಮೀಬಾ ಹುಟ್ಟಿಸಿ ತೋರಸರಿ. ಇಲ್ಲದೇ ಇರೋ ಅವೈಜ್ಞಾನಿಕ ಹುಟ್ಟನ್ನ ವೈಭವೀಕರಿಸಿ ಹೇಳುವ ನಿಮ್ಮ ಅಜ್ಞಾನಕ್ಕೆ ಏನಂತಾರ ಅನ್ನೂದರ ಖಬರ ಇರಲೀ.
ಅಭ್ಯಾಸದ ಕೊರತೆ ಹಾಗೂ ಪಟ್ಟಭದ್ರರ ವತ್ತಡದಿಂದ ವೀರಶೈವ-ಲಿಂಗಾಯತ ಒಂದೇ ಎಂದಿರುವದು ದುರದ್ರಷ್ಟ. ಅವರು ಏನೇ ಹೇಳಿಕೊಂಡು ನಿಜವನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದಲ್ಲದೆ ಈ ವಿಷಯದಲ್ಲಿ ರಾಮಾಯಣಕ್ಕೆ ಕೈಹಾಕಿರುವದು ನೋಡಿದರೆ ಓಲೈಕೆಗಾಗಿ ಏನೇನೋ ಹೇಳುತ್ತಿರುವದನ್ನು ಲಿಂಗಾಯತರು ಗಮನಿಸದೇ ಇರಲಾರರು. ಜಯ ಬಸವ! ಜೈ ಲಿಂಗಾಯತ!