ವೀರಶೈವ ಪದ ತೆಗೆಯಿರಿ ಎನ್ನುವ ‘ದುಷ್ಟರಿಗೆ’ ಪಾಠ ಕಲಿಸಬೇಕು: ರಾಜಶೇಖರ ಶಿವಾಚಾರ್ಯ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

“ಈ ಹಿಂದೆ ದಾರಿ ತಪ್ಪಿಸುವ ಕಾರ್ಯ ಮಾಡಿದ್ದ ಮಾತೆ ಮಹಾದೇವಿಯವರಿಗೆ ತಕ್ಕ ಶಿಕ್ಷೆಯಾಯಿತು,” ಎಂದು ಶ್ರೀಗಳು ಹೇಳಿದರೆಂದು ಮಾಧ್ಯಮಗಳು ವರದಿ ಮಾಡಿವೆ.

ಧಾರವಾಡ

ವೀರಶೈವ ಪದ ತೆಗೆಯಬೇಕೆಂದು ಹೇಳುತ್ತಿರುವವರಿಗೆ ಪಾಠ ಕಲಿಸಬೇಕು ಎಂದು ನವನಗರದ ಕಾಶಿ ಶಾಖಾಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕನ್ನಡ ಪ್ರಭದ ವರದಿಯ ಪ್ರಕಾರ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದಿಂದ “ವೀರಶೈವ’ ಪದ ತೆಗೆಯಬೇಕೆಂದು ಕೆಲವು ಕಾವಿಧಾರಿಗಳು ಹಾಗೂ ದುಷ್ಟ ಬುದ್ಧಿ ಜನರು ಸಮಾಜದ ದಾರಿ ತಪ್ಪಿಸುತ್ತಿದ್ದು, ಅವರಿಗೆ ಪಾಠ ಕಲಿಸುವ ಕಾರ್ಯವಾಗಬೇಕು,” ಎಂದು ಶ್ರೀಗಳು ಹೇಳಿದ್ದಾರೆ.

ನಗರದ ಹೊಸಯಲ್ಲಾಪುರಸ ಮಳೇಮಲ್ಲೇಶ್ವರ ಸಂಸ್ಥಾನ ಹಿರೇಮಠದಲ್ಲಿ ಈಚೆಗೆ ಆಯೋಜಿಸಿದ್ದ ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

“ಸರಿಯಾಗಿ ಅಧ್ಯಯನ ಮಾಡದೇ ಸಮಾಜವನ್ನು ದಾರಿ ತಪ್ಪಿಸುವ ಕಾರ್ಯ ಈ ಹಿಂದೆ ಮಾಡಿದ್ದ ಮಾತೆ ಮಹಾದೇವಿಯವರಿಗೆ ತಕ್ಕ ಶಿಕ್ಷೆಯಾಯಿತು. ಈಗ ಅದೇ ಮಾದರಿಯ ಜನರು ವೀರಶೈವ ಪದ ತೆಗೆದುಹಾಕಬೇಕು ಎಂದು ಹೇಳುತ್ತಿದ್ದಾರೆ,” ಎಂದು ವರದಿಯಾಗಿದೆ.

ಇಂತಹ ಮಾತು, ಕೃತಿಯಿಂದ ಬಸವಾದಿ ಶರಣರನ್ನು ಹಾಗೂ ಪಂಚ ಪೀಠಗಳನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಈ ಪ್ರಯತ್ನ ಮಾಡಿದರೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ವರದಿಯ ಪ್ರಕಾರ ‘ಬಸವಾದಿ ಶರಣರ ನುಡಿದ ನುಡಿಗಳಲ್ಲಿ, ಬರೆದ ವಚನಗಳಲ್ಲಿ ವೀರಶೈವ ಎಂಬುದಿದೆ. ಸರಿಯಾಗಿ ಅಧ್ಯಯನ ಮಾಡಿ ಈ ಬಗ್ಗೆ ಜಾಗೃತರಾಗುವ ಬದಲು ಸಮಾಜ ಒಡೆಯುವ ಕೃತ್ಯ ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘ಪಂಚಪೀಠಗಳು, ಬಸವಾದಿ ಶರಣರು ಬೇರೆಯಲ್ಲ. ಇವರೆಲ್ಲರೂ ವೀರಶೈವ–ಲಿಂಗಾಯತ ಧರ್ಮಕ್ಕೆ ಶಕ್ತಿ ನೀಡಿದವರು. ಒಂದು ನಾಣ್ಯದ ಮುಖಗಳು ಇದ್ದಂತೆ.’

‘ಸರಿಯಾಗಿ ಅಧ್ಯಯನ ಮಾಡದೆ, ಸಮಾಜದ ದಾರಿ ತಪ್ಪಿಸಲಾಗುತ್ತಿದೆ. ವೀರಶೈವ ಪದ ತೆಗೆದುಹಾಕಬೇಕೆಂದು ಹೇಳಿದವರಿಗೆ ಪಾಠ ಕಲಿಸಬೇಕು,’ ಎಂದು ಶ್ರೀಗಳು ಹೇಳಿದ್ದು ಪ್ರಜಾವಾಣಿಯಲ್ಲೂ ವರದಿಯಾಗಿದೆ.

ಹೊಸಯಲ್ಲಾಪೂರ ಹಿರೇಮಠದ ಶಶಾಂಕ ಸ್ವಾಮೀಜಿ ಮಾತನಾಡಿ, ‘ವೀರಶೈವ ಧರ್ಮ ಸ್ಥಾಪನೆ ಮಾಡಿದ ರೇಣುಕಾಚಾರ್ಯರು ಮಾನವ ಕುಲದ ಒಳಿತಿಗಾಗಿ ಶ್ರಮಿಸಿದರು. ಅವರ ಆಶಯದಂತೆ ಎಲ್ಲರೂ ಬದುಕಬೇಕು. ಸಮಾಜದ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳಬೇಕು’ ಎಂದರು.

ಗದಿಗಯ್ಯ ಸ್ವಾಮೀಜಿ, ಕರಡಿಗುಡ್ಡದ ಚನ್ನಬಸವ ಸ್ವಾಮೀಜಿ, ಮಂಜುನಾಥ ಹಿರೇಮಠ, ರಾಜೇಂದ್ರ ಹಿರೇಮಠ, ಸರೋಜಾ ಪಾಟೀಲ, ಸಿ.ಎನ್. ಹಿರೇಮಠ, ಶಕುಂತಲಾ ಹಿರೇಮಠ, ಜಯಲಕ್ಷ್ಮಿ ಹಿರೇಮಠ, ಬಸವರಾಜ ಕುರಹಟ್ಟಿಮಠ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
17 Comments
  • ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ದುಡಿಯದೆ, ಲಿಂಗಾಯತರು ಕೊಟ್ಟ ಬಿಕ್ಷೆಯಲ್ಲಿ ಬದುಕಿದವರ ಕುಟುಂಬ ದವರು. ಈ ವೀರಶೈವ ತೆಗೆದು ಹಾಕಿದರೆ ಹರಾಮಿ ದುಡ್ಡು, ದವಸ ದಾನ್ಯ ಸಿಗುವುದು ತಪ್ಪಿತು ಅನ್ನುವ ಭಯದಿಂದ ಹೀಗೆ ಮಾತಾಡುತ್ತಾರೆ.

  • Renukacharyayru. Lingadalli. Udbhavisiddare. Anta. Heluvavara. Nivu. Vidnyana. Nambalu. Saddyave.. Ellaru. Tai. Garbadalliye. Janisuttare. Modalu. Nimma. Mathagalli. Basava. Bhava. Chitra. Haki. Ammele. Matadi

  • ಅದೇ ರಾಗ ಅದೇ ಹಾಡು ಈ ಪೀಡೆಗಳದ್ದು. ಬಸವಣ್ಣನವರ ಹಾಗೂ ಶರಣರ ಹಿಂದೆ ಬೇತಾಳದಂತೆ ಬೆನ್ನು ಬಿದ್ದಿವೆ. ಕಪೋಲಕಲ್ಪಿತ ವ್ಯಕ್ತಿಯನ್ನು ಸೃಷ್ಟಿ ಮಾಡಿ ಕಥೆ ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ.

  • ಪೂಜ್ಯ ಮಾತೆ ಮಹಾದೇವಿ ಯವರ ಹೆಸರನ್ನು ಪದೇ ಪದೇ ಸ್ಮರಿಸಿದ್ದಕ್ಕೆ ಧನ್ಯವಾದಗಳು.

  • ಗುರುಲಿಂಗಪ್ಪ ಹೊಗತಾಪುರ ಬೀದರಜಿಲ್ಲೆ ಬೀದರ. says:

    ಇದು ಜಾತಿಜಂಗಮರ ಕೀಹಳುಮಟ್ಟದ ನಡೆ, ಯಾವುದೇಐತಿಹಾಸಿಕ ವಿಷಯವನ್ನು ಅರಿಯದ ಈ ಅವಿವೇಕಿಜಂಗಮರುಗಳಿಗೆ ಕಾಲ್ಪನಿಕ ರೇಣುಕಾಚಾರ್ಯನ ಒಣ ಹುಸಿ ಪುರಾಣವನ್ನು ಹೇಳಿ ಸಮಾಜವನ್ನು ದಾರಿತಪ್ಪಿಸಿ ತಮ್ಮ ಜಂಗಮತನವನ್ನು ಬೇಡ ಜಂಗಮವೆಂದು ಪ್ರಾತಪಾದಿಸಲು ಹೊರಟಿದ್ದಾರೆ. ಮಾತೆ ಮಹಾದೇವಿಯವರು ಕೀರ್ತಿಶಾಲಿಗಳಾಗಿ ಅಜರಾಮರರಾಗಿದ್ದಾರೆ. ಮೂರ್ಖರೆ ಈಗಲಾದರು ಸಮಾಜವನ್ನು ಅರಿಯಿರಿ.

    • ಡಾ: ಮಾತಾಜಿ ಮಾಡಿದಂಥ ಕಾರ್ಯ ಇವಾಗ ನೂರು ಮಠಾದಿಶರು ಕೂಡಿ ಮಾಡಕ್ಕೆ ಆಗಲ್ಲ ಡಾ: ಮಾತಾಜಿ ಹೊತ್ತಿಸಿದ ಲಿಂಗಾಯತ ಹೋರಾಟ ಯಾವುದೆ ಕಾರಣಕ್ಕೂ ನಿಲ್ಲಲ್ಲ

  • ಬಹುತೇಕ ಜಾತಿ ಜಂಗಮರು ಲಿಂಗಾಯತ ವಿರೋಧಿಗಳು

    • ಸನಾತನ ಹಿಂದು ಸಂಸ್ಕೃತಿಯ ಆಚರಣೆಯ ಮಾಡುವ ಕುಂಕುಮದಾರಿ ವೀರಶೈವರಿಗೂ ಮತ್ತು ಸನಾತನ ಹಿಂದು ಸಂಸ್ಕೃತಿಯ ವೀರೋದಿಸಿ ಹುಟ್ಟಿದ ಬಸವ ಇಷ್ಟ ಲಿಂಗಾಯತ ಧರ್ಮ ಒಂದೆ ಅಲ್ಲಾ. ಇವುಗಳೆರಡು ಧರ್ಮಗಳು ಒಂದೆ ಅಲ್ಲಾ. ಸೂರ್ಯ ಚಂದ್ರ ಇರುವ ತನಕ ಒಂದಾಗುವದಿಲ್ಲ. ಬಸವ ಸ್ವತಂತ್ರ ಲಿಂಗಾಯತ ಧರ್ಮ ಆದರ ಆಗ ಹಿಂದು ವೀರಶೈವ ರಿಗೆ ಯಾವ ಸವಲತ್ತುಗಳು ಸಿಗಲ್ಲಾ. .

      • ಇವರು ಹೇಳಿದ್ದು ಎಲ್ಲ ಸುಳ್ಳು ಯಾವ ವಚನದಲ್ಲಿ ವೀರಶೈವ ಎಂಬ ಶಬ್ದವಿದೆ ವೀರಶೈವ ಶಬ್ದವನ್ನು 16ನೇ ಶತಮಾನದಲ್ಲಿ ವಚನ ಸಾಹಿತ್ಯದಲ್ಲಿ ಸೇರಿಸಿ ವಚನ ಸಾಹಿತ್ಯವನ್ನು ವಿತೃತಗೊಳಿಸಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಯಾವತ್ತೂ ನಿಲ್ಲುವುದಿಲ್ಲ. ಜೈ ಗುರುಬಸವೇಶ ಜೈ ಲಿಂಗಾಯತ ಧರ್ಮ

    • ಕೃಲಾಗದವನು ಮೈ ಪರಚಿಕೊಂಡಂತೆ ಎಂಬ ವಾಕ್ಯ. ಈ ಪಂಚ ಪೀಡೆ ಗಳಿಗೆ ಸರಿಯಾಗಿ ಅನ್ವಯ ವಾಗುತ್ತದೆ. ಸಾವಿರಾರು ಶ್ರೇಷ್ಠ ಕಾರ್ಯ ಮಾಡಿದ ಡಾಕ್ಟರ್ ಮಾತೆ ಮಹಾದೇವಿ ತಾಯಿ ಅವರೆಲ್ಲಿ ಇವರೆಲ್ಲಿ? ಆ ತಾಯಿ ಯು ಪಾದದ ಧೂಳಿನ ಸಣ್ಣ ಕಣಕ್ಕೂ ಸಮ ಬಾರದ ಕುನ್ನಿ ಗಳು.

      • ಹಿಂದೂ ವೀರಶೈವಯೇನ್ನುವ, ಸನತನವದಿಗಳೇ,ಕಲ್ಯಾಣ್ ಕ್ರಾಂತಿ ಯಾದಾಗ ರೇಣುಕಾಚಾರ್ಯರು, ಏನು ಮಾಡುತ್ತಿದ್ದರು? ಏಕೆ ಪ್ರತಿಭಟಿಸಲಿಲ್ಲ? ಯಾವ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ? ಶರಣರ ಕೊಲೆಯಾದಾಗ ಅವರ ಆತ್ಮ ವಿಶ್ವಾಸದಿಂದ ವರ್ತಿಸಬೇಕು. ಲಿಂಗಾಯತರ ಬಗ್ಗೆ ಯಾವ ಕಾಳಜಿ ವಹಿಸಿದ್ದಾರೆ? ಎರಡು ಒಂದೇ ಎನ್ನುವವರು ಏಕೆ ಬಸವೇಶ್ವರರ ಭಾವಚಿತ್ರ ಹಾಕುವುದಕ್ಕೆ ಮನಸ್ಸು ಮಾಡಿದಿಲ್ಲವೇಕೆ? ನಿಮಗೆ ರೇಣುಕಾಚಾರ್ಯರು ಮಾರ್ಗದರ್ಶನ ಮಾಡಿಲ್ಲವೇ? ಪಂಚಪೀಠದವರಲ್ಲಿ ವರ್ಗ, ವರ್ಣ,ಲಿಂಗ ಭೇದ ಭಾವ ಎದ್ದುಕಾಣುತ್ತದೆ. ಸ್ತ್ರೀ ಸಮಾನತೆ, ಆರ್ಥಿಕ ಸಮಾನತೆ, ಧಾರ್ಮಿಕ ಸಾಮಾಜಿಕ ಸಮಾನತೆ ತಮ್ಮಲಿಲ್ಲ. ಅದು ಹೇಗೆ ಎರಡು ಒಂದೇ ಎನ್ನುವರೂ? ನಮ್ಮಲಿ ಭಕ್ತ ಮತ್ತು ದೇವರ ದರ್ಶನ ಸಂಬಂಧ ವಿದೆ, ನಿಮ್ಮಲ್ಲಿ ಗುರು ಮತ್ತು ಶಿಷ್ಯರ ಸಂಬಂಧವಿದೆ. ಅಲ್ಲಿ ದೇವರ ದರ್ಶನ ಸಂಬಂಧ ಇಲ್ಲ. ಭಕ್ತರ ಸಂಖ್ಯೆ ಹೆಚ್ಚಾಗಲು ಎರಡು ಒಂದೇ ಎಂದು ಪರಿಗಣಿಸಿದ್ದಾರೆ. ವೈದಿಕರು ನಮಸ್ಕಾರ ಹೇಳುತ್ತಾರೆ. ಲಿಂಗಾಯತರ ಶರಣು ಶರಣಾರ್ಥಿ ಹೇಳುತ್ತಾರೆ. ನೀವು ಸ್ಥಾವರ ಲಿಂಗದ ಪೂಜಾ ಮಾಡುತ್ತಾರೆ. ನಾವು ಇಷ್ಟಲಿಂಗದ ಪೂಜೆ ಮಾಡಿಕೊಳ್ಳುತ್ತೇವೆ. ಹರಳಯ್ಯ, ಮದುವಯ್ಯ,ಶೀಲವಂತ, ಮತ್ತು ಇತರರ ಕೊಲೆಯದಾಗ ನಿಮ್ಮ ಪ್ರತಿಕ್ರಿಯೆ ಏಕೆ ಪ್ರತಿಭಟಿಸಲಿಲ್ಲ? ಮಾನವತಾವಾದಿ ಹಾಗೂ ತಮಗೆಲ್ಲರಿಗೂ ಕರುಣೆ ಬರಲಿಲ್ಲವೇ? ವೀರಶೈವರ? ಈಗ ಏಕೆ ಒಂದೇ ಎಂದು ಹೇಳುತ್ತಿದ್ದೀರಿ? ನಮ್ಮಲಿ ಅಜ ಗಜಾನಂತರ ವ್ಯತ್ಯಾಸವಿದೇ. ದಯವೇ ಧರ್ಮದ ಮೂಲವಯ್ಯ ಯೆಂದವರಿಗೆ ಏಕೆ ರಕ್ಷಿಸಲಿಲ್ಲ ನಿಮ್ಮ ರೇಣುಕಾಚಾರ್ಯರು? ಉತ್ತರ ವಿಲ್ಲವೇ? ವಿಮರ್ಷೇಮಾಡಿಕೊಳ್ಳಿ.

        • ವೀರಶೈವ ಲಿಂಗಾಯತ, ಬದಲು ಅಖಿಲ ಭಾರತ್ ಬಸವ ಧರ್ಮ/ ಲಿಂಗಾಯತ ಧತಮಾಯೆಣ್ಣುವದೆ ಸೂಕ್ತ.

  • Naavu lingayatharu. Nemma sahavasa beeda. endare
    Yaake namage joothu beddedere.
    Neevu Verashyvaru doddavaru nammenda. Doora ere…

  • ಪೂಜ್ಯ . ರಾಜಶೇಖರ ಸ್ವಾಮೀಜಿಯವರೇ, ವೀರಶೈವದೊಂದಿಗೆ ಲಿಂಗಾಯತ ಧರ್ಮ ಸೂಚಕ ಪದವನ್ನು, ವೀರಶೈವ ಮಹಾಸಭೆಯವರು ಸೇರಿಸಿದ್ದು ಈಗಾಗಲೇ ಸಾಕಷ್ಟು ವಿವಾದಕ್ಕೊಳಗಾಗಿ ಲಿಂಗಾಯತರ ಪ್ರತಿರೋಧವನ್ನು ಎದುರಿಸಬೇಕಾಗಿದೆ. ವೀರಶೈವ ಪದಕ್ಕಾಗಲಿ, ವೀರಶೈವರ ಆಚರಣೆಗಳಿಗಾಗಲಿ ಯಾವುದೇ ಲಿಂಗಾಯತರ ಅಭ್ಯಂತರವಿಲ್ಲ. ಆದರೆ ಲಿಂಗಾಯತದೊಂದಿಗೆ ವೀರಶೈವವನ್ನು ಸೇರಿಸಿ ಬಸವ ತತ್ವಕ್ಕೆ, ಶರಣ ಸಂಸ್ಕೃತಿಗೆ, ವಚನ ಸಾಹಿತ್ಯಕ್ಕೆ ಚ್ಯತಿ ತರುವ ಕಾರ್ಯಕ್ರಮಗಳಿಗೆ ಲಿಂಗಾಯತರ ಸಂಪೂರ್ಣ ವಿರೋಧವಿದೆ. ವೀರಶೈವ ಮತ್ತು ಲಿಂಗಾಯತ ಒಂದೇ ಎಂದು ನೀವು ಹೇಳುವದಾದರೆ ವೀರಶೈವವನ್ನು ಬಿಟ್ಬು ಲಿಂಗಾಯತವನ್ನು ಒಪ್ಪಿಕೊಳ್ಳಿ.
    ಬಸವಣ್ಣನವರನ್ನು ಧರ್ಮಗುರುವೆಂದು, ವಚನ ಸಾಹಿತ್ಯ ಧರ್ಮ ಗ್ರಂಥವೆಂದು ಒಪ್ಪುವ ಇಷ್ಟ ಲಿಂಗಧಾರಿ ವೀರಶೈವರೂ ಲಿಂಗಾಯತರು.

  • ರಾಜರು ಸಂಸಾರಸ್ತರ ರೀತಿ ಒಡವೆ, ಅಡ್ಡ – ಉದ್ದ ಪಲ್ಲಕ್ಕಿ, ತಲೆ ಒಳಗೆ ಶರಣರ ಬಗ್ಗೆ 5 ಪೈಸದ ಜ್ಞಾನ ಇಲ್ಲ, ಮಾತಾಜಿ ಇದ್ದಾಗ ಅವರ ಮುಂದೆ ಚರ್ಚೆಗೆ ಬರಲು ಹೆದ್ರುತಿದ್ರು, ಈಗ ಮಾತಾಡ್ತಾರೆ,

    ಈ ಎಲ್ಲ ಸ್ವಾಮೀಜಿಗಳು ಬರೀ ತಮ್ಮ ತಮ್ಮ ಏಳಿಗೆ ಪ್ರಚಾರ ಮಾಡಿದ್ರು ಅಷ್ಟೇ, ಬಸವಣ್ಣನವರ ಬಗ್ಗೆ ಎಲ್ಲೂ ತಪ್ಪಿಯೂ ಕೂಡಾ ಒಂದು ಮಾತಾಡಲ್ಲ,
    ಅದಕ್ಕೂ ಯೋಗ್ಯತೆ ಬೇಕು ಬಿಡಿ
    ಆ ಯೋಗ್ಯತೆ ಎಲ್ಲರಿಗೂ ಇರಲ್ಲ

  • Vishavad paratam Mahila Jagadguru Mate Mahadevi Lingayat Horatgar evrige Koti koti Pranam evar Bage Mat nadi dare Nalige Kat Agiirtude

  • ಗುರುಲಿಂಗಪ್ಪ ಹೊಗತಾಪುರ ಬೀದರಜಿಲ್ಲೆ ಬೀದರ. says:

    ವೀರಶೖವ ಪದವು ಯಾವ ಕಾಲಘಟ್ಟದಲ್ಲಿ ಹುಟ್ಟಿಕೊಂಡಿದೆ, ಇತಿಹಾಸದ ಪುಟಗಳನ್ನು ತಿರುವಿನೋಡಿ. ಇದ ಹದಿನಾಲ್ಕನೆಯ ಶತಮಾನದಲ್ಲಿ ಹುಟ್ಟಿದ್ದು. ಲಿಪಿಕಾರರು ವಚನಗಳ ಸಂಕಲನಕಾರರು ಶೖವರ ಪ್ರಭಾವದಿಂದ ವಚನಗಳಲ್ಲಿ ಸಂಸ್ಕೃತದ ಶ್ಲೋಕಗಳೊಂದಿಗೆ ವೀರಶೖವಪದವನ್ನು ಸೇರಿಸ್ಲಪಟ್ಟಿದೆ. ಮನಸ್ಸು ತಿಳಿಯಾಗಿಸಿಕೊಂಡು ಚಿಂತಿಸಿರಿ. ವಂದನೆಗಳು.

Leave a Reply

Your email address will not be published. Required fields are marked *