ವಿಜಯಪುರ
ಪೇಜಾವರ ಶ್ರೀಗಳ ಮೇಲೆ ಮನಗೂಳಿ ವಿರಕ್ತ ಮಠದ ಶ್ರೀ ವಿರತೀಶಾನಂದ ಸ್ವಾಮೀಜಿ ನೀಡಿರುವ ಹೇಳಿಕೆ ವೈರಲ್ ಆಗಿದೆ.
ಡಿಸೆಂಬರ್ 2ರಂದು ವಿಜಯಪುರದಲ್ಲಿ ಬಸನಗೌಡ ಪಾಟೀಲ ಯತ್ನಾಳ, ಚಂದ್ರಶೇಖರನಾಥ ಸ್ವಾಮೀಜಿ ಕಾಡಸಿದ್ದೇಶ್ವರ ಸ್ವಾಮಿಜೀ, ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥರ ವಿರುದ್ಧ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸ್ವಾಮೀಜಿ ಪಾಲ್ಗೊಂಡಿದ್ದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತ ಪೇಜಾವರ ಶ್ರೀಗಳು ಇತ್ತೀಚೆಗೆ ಸಂವಿಧಾನ ಗೌರವಿಸುತ್ತಿಲ್ಲ ಎಂದು ನೀಡಿದ್ದ ಹೇಳಿಕೆಯನ್ನು ಖಂಡಿಸಿದರು.
“ಪೇಜಾವರ್ ಶ್ರೀಗಳೆ ನಮ್ಮ ಸಂವಿಧಾನದ ನಾಲ್ಕು ಗಾಲಿಗಳು – ಬುದ್ಧದೇವನ ಶಾಂತಿ, ಬಸವ ತಂದೆಯ ಸಮಾನತೆ, ಗಾಂಧೀಜಿಯ ಅಹಿಂಸೆ, ಡಾಕ್ಟರ್ ಬಾಬಾ ಸಾಹೇಬರ ಸಾಮಾಜಿಕ ನ್ಯಾಯ. ಇವರನ್ನು ತಾವು ಒಪ್ಪಿಕೊಳ್ಳುವುದಿಲ್ಲ, ತಮ್ಮ ಕುಲಕ್ಕೆ ಹಾಗೂ ತಮಗೆ ಸಂವಿಧಾನ ಬೇಡವಾಗಿದೆ.
ತಾವು ಜಾತಿವಾದಿಗಳಿದ್ದೀರಿ, ಮನುವಾದಿಗಳಿದ್ದೀರಿ ತಾವು ಅಸಮಾನತವಾದಿಗಳಿದ್ದೀರಿ, ತಮಗೆ ಲಿಂಗಾಯಿತರು ಬೇಡ, ಮುಸ್ಲಿಮರು ಬೇಡ, ದಲಿತರು ಬೇಡ, ಮುಸ್ಲಿಂ ಕ್ರಿಶ್ಚಿಯನ್ರೂ ಬೇಡ, ಸಿಕ್ಕರು ಬೇಡ, ಬದ್ಧರು ಬೇಡ ಕೊನೆಗೆ ಹಿಂದೂಗಳು ಬೇಡ ಯಾಕೆಂದರೆ ನಾವು ಹಿಂದೂಗಳಲ್ಲ ಎಂದು ಹಿಂದಿನ ಪೇಜಾವರ್ ಶ್ರೀಗಳೇ ಹೇಳಿದ್ದಾರೆ.
ತಾವು ಈ ಭರತ ಭೂಮಿಯವರೇ ಅಲ್ಲ, ತಾವು ಮಧ್ಯ ಏಷ್ಯಾದಿಂದ ದನ ಕಾಯುತ್ತ ಭಾರತಕ್ಕೆ ಬಂದವರು, ಅತಿಥಿ ದೇವೋ ಭವ ಎಂದು ಸ್ಥಳ ಆಶ್ರಯ ಕೊಟ್ಟ ನಮ್ಮನ್ನೆ ತುಳಿದು ತಲೆಯ ಮೇಲೆ ಕಾಲಿಡುತ್ತಿದ್ದೀರಿ.
ನಾವು ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ಸುಖವಾಗಿದ್ದೇವೆ ತಮಗೆ ಭಾರತದ ಸಂವಿಧಾನ ಸರಿ ಕಾಣುತ್ತಿಲ್ಲ ಎಂದಾದರೆ ತಾವು ಭಾರತವನ್ನು ಬಿಟ್ಟು ಹೋಗಿರಿ. ಆದಷ್ಟು ಬೇಗ ಪೇಜಾವರ ಶ್ರೀಗಳು ತಮ್ಮ ಶಿಷ್ಯರೊಂದಿಗೆ ಭಾರತವನ್ನು ಬಿಟ್ಟು ತೊಲಗಿ ಹೋಗಿರಿ. ಎಲ್ಲಿಂದ ಬಂದಿರೋ ಅಲ್ಲಿಗೆ ಹೋಗಿರಿ. ಒಂದು ವೇಳೆ ಇಲ್ಲೇ ಇರುವ ಇಚ್ಛೆ ಇದ್ದರೆ ಡಾ. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಒಪ್ಪಿಕೊಂಡು ನಮ್ಮೆಲ್ಲರೊಂದಿಗೆ ಹೊಂದಿಕೊಂಡು ಬದುಕಿರಿ.

ಅಪ್ಪ ಬಸವಣ್ಣನವರು 900 ವರ್ಷಗಳ ಹಿಂದೆಯೆ ನಮಗೆ ಹೇಳಿದ್ದಾರೆ
ಬ್ರಾಹ್ಮಣನೆ ದೈವನೆಂದು ನಂಬಿದ ಕಾರಣ ಗೌತಮ ಮುನಿಗೆ ಗೋವೇಧೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ ಬಲಿಗೆ ಬಂಧನವಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ ಕರ್ಣನ ಕವಚ ಹೋಯಿತ್ತು
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ ದಕ್ಷಂಗೆ ಕುರಿದಲೆಯಾಯಿತ್ತು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ ಪರಶುರಾಮ ಸಮುದ್ರಕ್ಕೆ ಗುರಿಯಾದನು.
ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ ನಾಗಾರ್ಜುನನ ತಲೆ ಹೋಯಿತ್ತು.
ದೇವಾ, ಭಕ್ತನೆಂದು ನಂಬಿದ ಕಾರಣ ನಮ್ಮ ಕೂಡಲಸಂಗನ ಶರಣರು ಕೈಲಾಸವಾಸಿಗಳಾದರು.
–
ಭೇದ ಬುದ್ಧಿಯುಳ್ಳ ಬಸನಗೌಡ ಪಾಟೀಲರಿಗೆ ಹಾಗೂ ಪೇಜಾವರ ಶ್ರೀಗಳಿಗೆ ಕೊನೆಯದಾಗಿ ಹೇಳುತ್ತೇವೆ ತಮ್ಮಂತಹ ಭೇದ ಬುದ್ಧಿವರಿಂದಲೇ ಭಾರತದ ಮೇಲೆ ದಾಳಿಗಳಾದವು ತಮ್ಮಂಥ ಕುತಂತ್ರ ಬುದ್ಧಿಯಿಂದಲೇ ಮುಸಲ್ಮಾನರು ಧರ್ಮ ಭಾರತಕ್ಕೆ ಬಂತು, ಏನಾಗೋದು ಆಗಿಹೋಗಿದೆ ನಾವೆಲ್ಲರೂ ಅಣ್ಣತಮ್ಮಂದಿರಂತೆ ಬದುಕುತ್ತಿದ್ದೇವೆ ಮತ್ತೆ ಈ ದೇಶದ ಶಾಂತಿ ಕದಡಬೇಡಿ ಎಂದು ಎಚ್ಚರಿಕೆ ಕೊಟ್ಟರು.
ಗುರುಗಳೇ ನಿಮಗೆ ಕೋಟಿಧನ್ಯವಾದಗಳು. ಸರಿಯಾಗಿ ಹೇಳಿದ್ದೀರಾ