ಕಲಬುರಗಿ
ವಿದ್ಯಾರ್ಥಿಗಳ, ಸಭಿಕರ ಜೊತೆ ಸಂವಾದದಲ್ಲಿ ಪೂಜ್ಯರು ಲಿಂಗಾಯತ ಧರ್ಮ, ಕಲ್ಯಾಣ ಕ್ರಾಂತಿ, ಕಾಯಕ, ದಾಸೋಹ, ಅಂದಿನ ನೈತಿಕತೆ ಇಂದಿನ ಪ್ರಸ್ತುತತೆ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದರು.
ಬಾಲ್ಕಿ ಶ್ರೀಗಳು, ಸಿದ್ಧರಾಮ ಸ್ವಾಮೀಜಿಗಳು, ಚೆನ್ನಬಸವ ಶ್ರೀಗಳು, ವಿದ್ಯಾರ್ಥಿಗಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.
ಲಿಂಗಾಯತ ಯಾಕೆ ವಿಶ್ವಧರ್ಮ ಆಗುತ್ತಿಲ್ಲ ಎಂಬ ಸಭಿಕರ ಪ್ರಶ್ನೆಗೆ ಸಾಣೇಹಳ್ಳಿ ಸ್ವಾಮೀಜಿ ಇದಕ್ಕೆ ಲಿಂಗಾಯತ ಸ್ವಾಮೀಜಿಗಳೇ ಕಾರಣ ಎಂದರು. ಭಕ್ತರ ಅವಲಂಬಿಕೆಯೇ ಇದಕ್ಕೆ ಕಾರಣವಾಗಿದೆ ಎಂದರು. ಮಠಗಳು ಜಾಗೃತವಾದರೆ ಸಮಾಜ ಜಾಗೃತವಾಗುತ್ತೆ ಎಂದರು.


ಜನಗಣತಿಯಲ್ಲಿ ನಾವು ಲಿಂಗಾಯತ, ವೀರಶೈವ, ವೀರಶೈವ-ಲಿಂಗಾಯತ ಬರೆಸಬೇಕೋ ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಧರ್ಮದ ಕಾಲಂ ನಲ್ಲಿ “ಲಿಂಗಾಯತ” ಬರೆಸಲು ಪಂಗಡ ಉಪಪಂಗಡ ಕಾಲಂನಲ್ಲಿ ತಮ್ಮ ತಮ್ಮ ಪಂಗಡಗಳನ್ನು ಬರೆಸಲು ಸೂಚಿಸಿದರು.
ಮೂಢನಂಬಿಕೆ ಆಚರಿಸುವ ಸ್ವಾಮೀಜಿಗಳ ಬಗ್ಗೆ ಮತ್ತು ಇದರ ಬಗೆ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಎಚ್ಚರಿಕೆ ನೀಡಲು ಒತ್ತಾಯಿಸಿದ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಬಾಲ್ಕಿ ಶ್ರೀಗಳು ಉತ್ತರಿಸಿ, ಅಂತಹ ಮಠಾಧಿಪತಿಗಳನ್ನು ಪ್ರಶ್ನಿಸಿ ಎಂದರು. ನಿಧಾನವಾಗಿ ಬಹುಪಾಲು ಮಠಾಧಿಪತಿಗಳ ಗಣನೆಗೆ ತೆಗೆದುಕೊಂಡು ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮಹಾಂತೇಶ ಕುಂಬಾರ ಅವರ “ಏಕರೂಪ ದೀಕ್ಷಾ, ಪೂಜೆ ಮುಂತಾದ ಪದ್ಧತಿಗಳ ಪ್ರಶ್ನೆಯೊಂದಕ್ಕೆ ಮುಂದಿನ ದಿನಗಳಲ್ಲಿ ಈ ಕುರಿತಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಈಗಿನ ಸಮಾಜದಲ್ಲಿ 12ನೇ ಶತಮಾನದ ಕಲ್ಯಾಣವನ್ನು ನೋಡಬಹುದೇ? ಸಂವಾದದಲ್ಲಿ ಇದು ಒಂದು ಮಗು ಕೇಳಿದ ಪ್ರಶ್ನೆ. ಇದನ್ನು ಸಾಣೇಹಳ್ಳಿ ಶ್ರೀಗಳು ಉತ್ತರಿಸಿದರು.