ಅಭಿಯಾನದ ಏಳನೇ ದಿನದ ಲೈವ್ ಬ್ಲಾಗ್
ಫೋಟೋ: ಅಭಿಯಾನದ ಮುಖ್ಯ ದೃಶ್ಯಗಳು












ಡಾ. ಬಸವ ಮರಳಸಿದ್ದ ಸ್ವಾಮೀಜಿ
ಶಿವಮೊಗ್ಗದ ಡಾ. ಬಸವ ಮರಳಸಿದ್ದ ಸ್ವಾಮೀಜಿ ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ವಿಷಯವಾಗಿ ಅನುಭಾವ ನೀಡಿದರು.

ಡಾ. ಮೈತ್ರೇಯಿ ಗದಿಗೆಪ್ಪಗೌಡರ
ಸಂಜೆಯ ಸಾರ್ವಜನಿಕ ಕಾರ್ಯಕ್ರಮ
ಸಂಜೆಯ ಸಾರ್ವಜನಿಕ ಕಾರ್ಯಕ್ರಮ ಸುವರ್ಣ ಮಹೋತ್ಸವ ಭವನ, ವಿಜಯನಗರ ಮಹಾವಿದ್ಯಾಲಯದಲ್ಲಿ ಆರಂಭಗೊಂಡಿದೆ.
ವಚನ ವಿಜಯೋತ್ಸವ
ಬಸವ ಜ್ಯೋತಿಯೊಂದಿಗೆ ವಚನ ವಿಜಯೋತ್ಸವ ಮೆರವಣಿಗೆ ಪುನೀತ್ ರಾಜಕುಮಾರ ವೃತ್ತದಿಂದ ಶುರುವಾಗಿ ವಿಶ್ವಗುರು ಬಸವಣ್ಣ ವೃತ್ತದವರೆಗೆ ಸಾಗಿತು.
ಸುಡುಗಾಡು ಸಿದ್ಧರು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದಾರೆ.

ಅಭಿಯಾನದ ವಿಶೇಷ ಪುರವಣಿ
ಹಂಪಿ ಟೈಮ್ಸ್ ಪತ್ರಿಕೆಯ ಬಸವ ಸಂಸ್ಕೃತಿ ಅಭಿಯಾನದ ವಿಶೇಷ ಪುರವಣಿ ಬಿಡುಗಡೆ ಮಾಡಲಾಯಿತು.

ತುಂಬಿದ ಬೃಹತ್ ಸಭಾಂಗಣ
ಬಸವಾಭಿಮಾನಿಗಳಿಂದ ತುಂಬಿದ ವಿಜಯನಗರ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಭವನ.


ನಾಗರಾಜ ಗಂಟಿ ಅವರಿಗೆ ಧನ್ಯವಾದಗಳು
ವಿಜಯನಗರದಿಂದ ವರದಿ, ಫೋಟೋ, ವಿಡಿಯೋ ಕಳಿಸುತ್ತಿರುವ ನಾಗರಾಜ ಗಂಟಿ ಅವರಿಗೆ ಧನ್ಯವಾದಗಳು.
ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ
ಸಂವಾದದಲ್ಲಿ ಅಂತರ್ಜಾತಿ ವಿವಾಹದ ಬಗ್ಗೆ, ಪ್ರಸ್ತುತ ದಿನಮಾನದ ಶರಣ ತತ್ವದ ತಲ್ಲಣಗಳ ಬಗ್ಗೆ, ಅಭಿಯಾನದ ಮಹತ್ವದ ಕುರಿತು ವಿದ್ಯಾರ್ಥಿಗಳು ಅನೇಕ ಪ್ರಶ್ನೆಗಳನ್ನು ಕೇಳಿದರು.
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪೂಜ್ಯರು ಸರಳವಾಗಿ ಉತ್ತರ ನೀಡಿದರು.



ಪ್ರಾಸ್ತಾವಿಕ ನುಡಿ
ಶೇಗುಣಸಿ ಮಹಾಂತಪ್ರಭು ಮಹಾಸ್ವಾಮಿಗಳಿಂದ ಪ್ರಾಸ್ತಾವಿಕ ನುಡಿ.
ಷಟಸ್ಥಲ ಧ್ವಜಾರೋಹಣ
ಸಂವಾದ ಕಾರ್ಯಕ್ರಮಕ್ಕೆ ಮೊದಲು ಷಟಸ್ಥಲ ಧ್ವಜಾರೋಹಣವನ್ನು ಹೊಸಪೇಟೆ ಶಾಸಕರಾದ ಗವಿಯಪ್ಪನವರು ನೆರವೇರಿಸಿದರು.

ವಚನ ಗಾಯನ
ಸಾಣೇಹಳ್ಳಿ ಶಿವಸಂಚಾರ ತಂಡದಿಂದ ವಚನ ಗಾಯನ.

ಇವತ್ತಿನ ಕಾರ್ಯಕ್ರಮಗಳು
ಬೆಳಿಗ್ಗೆ 9.30ಕ್ಕೆ ಹೊಸಪೇಟೆ ಕೊಟ್ಟೂರುಸ್ವಾಮಿ ಮಠದಲ್ಲಿ ಬಸವ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಲಾಯಿತು.
11:00 ಗಂಟೆಗೆ ಸುವರ್ಣ ಮಹೋತ್ಸವ ಭವನ, ವಿಜಯನಗರ ಮಹಾವಿದ್ಯಾಲಯ, ಹೊಸಪೇಟೆ, ಇಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ‘ಮುಕ್ತ ಸಂವಾದ’ ಕಾರ್ಯಕ್ರಮ ನಡೆಯಿತು.
ಸಂಜೆ 4 ಗಂಟೆಗೆ ಬಸವ ಜ್ಯೋತಿಯೊಂದಿಗೆ ವಚನ ವಿಜಯೋತ್ಸವ ಮೆರವಣಿಗೆ. ಪುನೀತ್ ರಾಜಕುಮಾರ ವೃತ್ತದಿಂದ ವಿಶ್ವಗುರು ಬಸವಣ್ಣ ವೃತ್ತದವರೆಗೆ.
ಸಂಜೆ 6 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ಮತ್ತು ವಿಶೇಷ ಉಪನ್ಯಾಸ. ಸುವರ್ಣ ಮಹೋತ್ಸವ ಭವನ, ವಿಜಯನಗರ ಮಹಾವಿದ್ಯಾಲಯ, ಹೊಸಪೇಟೆ.
ರಾತ್ರಿ 8 ಗಂಟೆಗೆ ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ.
ರಾತ್ರಿ 9: 00ರ ನಂತರ ಮಹಾದಾಸೋಹ ಇರಲಿದೆ.
ಅಭಿಯಾನದಲ್ಲಿ ಇಷ್ಟಲಿಂಗ ಪೂಜೆ, ಶಿವಯೋಗ ಕಾರ್ಯಕ್ರಮ
ವಿಜಯನಗರ ಜಿಲ್ಲಾ ಬಸವ ಸಂಸ್ಕೃತಿ ಅಭಿಯಾನದ ಪ್ರಯುಕ್ತ ಇಂದು ಬೆಳಿಗ್ಗೆ, ಹೊಸಪೇಟೆಯ ಇಷ್ಟಲಿಂಗ ಸಂಶೋಧನಾ ಕೇಂದ್ರದ ನೇತೃತ್ವದಲ್ಲಿ, ವಿಜಯನಗರ ಕಾಲೇಜಿನ ಸುವರ್ಣ ಮಹೋತ್ಸವದ ಭವನದಲ್ಲಿ ಧರ್ಮಗುರು ಬಸವಣ್ಣನವರ ಭಾವಪೂಜೆ, ಇಷ್ಟಲಿಂಗಪೂಜೆ, ಶಿವಯೋಗ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.
ಕಾರ್ಯಕ್ರಮವನ್ನು ಇಷ್ಟಲಿಂಗ ಸಂಶೋಧನ ಕೇಂದ್ರದ ಮುಖ್ಯಸ್ಥರಾದ ಖ್ಯಾತ ಮನೋವೈದ್ಯರಾದ ಡಾ. ಅಜಯ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಇಷ್ಟಲಿಂಗ ಸಂಶೋಧನಾ ಕೇಂದ್ರ, ವಿಜಯನಗರ ಜಿಲ್ಲಾ ಬಸವ ಬಳಗ, ಶರಣ ಸಾಹಿತ್ಯ ಪರಿಷತ್ ಸದಸ್ಯರು ಮತ್ತು ಬಸವ ಅನುಯಾಯಿಗಳು ಭಾಗವಹಿಸಿದ್ದರು.