“ಮಾತುಕತೆಗೆ ಕರೆದಾಗ ಬರದೇ, ಜನರನ್ನ ಪ್ರಚೋದಿಸಿ ಸಿದ್ದರಾಮಯ್ಯ ಲಾಠಿ ಚಾರ್ಜ್ ಮಾಡ್ಸಿದ್ರು, ಹೊಡ್ಸಿದ್ರು ಅಂತ ಸ್ವಾಮೀಜಿ ಹಾದಿ ತಪ್ಪಿಸುತ್ತಿದ್ದಾರೆ”
ಬೆಳಗಾವಿ
“ಸ್ವಾಮೀಜಿಯಾಗಿ ಯಾವ ರೀತಿ ಮಾತಾಡಬೇಕು ಕಲೀರಿ, ನಿಮಗೆ ಗೌರವ ಕೊಟ್ಟಿದೀವಿ ಅದನ್ನು ಉಳಿಸಿಕೊಳ್ಳಿ,” ಎಂದು ಕೂಡಲಸಂಗಮದ ಜಯ ಮೃತ್ಯುಂಜಯ ಶ್ರೀಗಳಿಗೆ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಗುರುವಾರ ಎಚ್ಚರಿಕೆ ನೀಡಿದರು.
ನಗರದಲ್ಲಿ ನಡೆಯುತ್ತಿರುವ ದಿನದ ಅಧಿವೇಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವವಹಿಸಿರುವ ಮೃತ್ಯುಂಜಯ ಶ್ರೀಗಳ ಇತ್ತೀಚಿನ ವರ್ತನೆಯನ್ನು ಕಟುವಾಗಿ ಟೀಕಿಸಿದರು.
ರಾಜಕಾರಣ ಮಾಡಬೇಡಿ
“ನಿಮ್ಮನ್ನು ನಮ್ಮ ಸಮಾಜದ ಸ್ವಾಮೀಜಿಯಾಗಿ ಮಾಡಿದ್ದೀವಿ. ಒಬ್ಬ ವ್ಯಕ್ತಿ ಅಥವಾ ಪಕ್ಷ ಹಿಂದೆ ಹೋಗ್ತೀವಿ ಅಂದ್ರೆ ಸಹಿಸೋಕೆ ಆಗುವುದಿಲ್ಲ. ನನಗೆ ಮಾತಾಡಲು ಕಲಿಸುವ ಅವಶ್ಯಕತೆ ಇಲ್ಲ, ವಯಸ್ಸಿನಲ್ಲಿ ಕೂಡ ನಿಮಗಿಂತ ನಾನು ದೊಡ್ಡವನಿದ್ದೀನಿ,” ಎಂದರು.
ಬುಧವಾರ ಸುದ್ದಿಘೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಬೇಕೆಂದು ಶ್ರೀಗಳು ಹೇಳಿದ್ದು ಕಾಶಪ್ಪನವರ ಆಕ್ರೋಶಕ್ಕೆ ಕಾರಣವಾಯಿತು.
“2028 ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಬೇಡಿ ಎನ್ನುವುದು ರಾಜಕಾರಣ ಅಲ್ವಾ, ಸಮಾಜ ಪ್ರಚೋದನೆ ಮಾಡುವ, ಎತ್ತಿಕೊಟ್ಟುವ ಕೆಲಸ ಯಾಕೆ ಮಾಡ್ತಾ ಇದ್ದೀರಾ. ಚುನಾವಣೆಗೆ ನಾನು ಮುಂದೆಯೂ ನಿಲ್ತೇನೆ ಗೆಲ್ತೇನೆ, ತಾಖತ್ ಇದ್ದರೆ ಯಾರು ಬರ್ತಿರೋ ಬನ್ನಿ,” ಎಂದು ಕೇಳಿದರು.

ಪ್ರಚೋದಿಸಿ, ಅಮಾಯಕರಿಗೆ ಹೊಡೆಸಿದ್ದೀರಾ
ಬಿಜೆಪಿ ಸರಕಾರ 2D 2C ಕೊಟ್ಟಿತ್ತಲ್ಲಾ, ಅದನ್ನ ಯಾಕೆ ತಿರಸ್ಕಾರ ಮಾಡಿ, 2A ಕೇಳ್ತಾ ಇದ್ದೀರಾ. 2A ಕೊಡುವುದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಇದನೆಲ್ಲಾ ಮುಚ್ಚಿಟ್ಟು ಸಿದ್ದರಾಮಯ್ಯ ಸರಕಾರ ಮೀಸಲಾತಿ ಕೊಡುತ್ತಾ ಇಲ್ಲ ಅಂತ ಹಾದಿ ತಪ್ಪಿಸುತ್ತಿದ್ದಾರೆ. ಮೊನ್ನೆ ಮಾತುಕತೆಗೆ ಕರೆದರೂ ಬರದೆ ಸದನಕ್ಕೆ ಮುತ್ತಿಗೆ ಹಾಕಿಸಲು ಉದ್ದೇಶಪೂರಕವಾಗಿ ಕಲ್ಲು ತೂರಿಸಿ ಅಮಾಯಕರಿಗೆ ಪೋಲೀಸರ ಕೈಲಿ ಹೊಡೆಸಿದ್ರು. ಅವರಿಗೆ ಹೆಚ್ಚು ಕಡಿಮೆ ಆದರೆ ಸ್ವಾಮೀಜಿ ಬಂದು ನೋಡಿಕೊಳ್ತಾರಾ, ಎಂದು ಕೇಳಿದರು.
ಮೀಸಲಾತಿ ವಿಷಯಕ್ಕೆ ನಾನು 700 ಕಿಮಿ ಪಾದಯಾತ್ರೆ ಮಾಡಿದರೂ ಒಂದು ಗಲಾಟೆ ನಡೆಯಲಿಲ್ಲ. ಹಿಂದೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟಾಗ ಬೊಮ್ಮಾಯಿ ಮಾತನಾಡಿ ಸಂಧಾನ ಮಾಡಿಕೊಂಡಿದ್ದರು. ಈಗ ಮಾತುಕತೆಗೆ ಕರೆದಾಗ ಬರದೇ, ಜನರನ್ನ ಪ್ರಚೋದಿಸಿ ಸಿದ್ದರಾಮಯ್ಯ ಲಾಠಿ ಚಾರ್ಜ್ ಮಾಡ್ಸಿದ್ರು, ಹೊಡ್ಸಿದ್ರು ಅಂತ ಸ್ವಾಮೀಜಿ ಹಾದಿ ತಪ್ಪಿಸುತ್ತಿದ್ದಾರೆ, ಎಂದು ಆರೋಪಿಸಿದರು.
“ಸ್ಪಷ್ಟವಾಗಿ ಹೇಳ್ತೀನಿ. ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶಿಕ್ಷಣಕ್ಕೆ, ಉದ್ಯೋಗಕ್ಕೆ ಮೀಸಲಾತಿ ಕೊಡಿಸುವ ಗುರಿ ಇದೆ. ಮೊದಲು ಹಿಂದುಳಿದ ವರ್ಗಗಳ ಆಯೋಗದ ಆಯೋಗದ ಪೂರ್ಣಪ್ರಮಾಣದ ವರದಿ ಕೈಗೆ ಬರಬೇಕು. ನಂತರ ಮುಂದಿನ ಕ್ರಮ? ಎಂದರು.
ಕಲ್ಲು ತೂರಿದವರು ಆರ್‌ಎಸ್‌ಎಸ್‌ನವರು
ಈ ಮುಂಚಿಗೆ ಸದನದಲ್ಲಿ ಮಾತನಾಡುತ್ತ ಕಾಶಪ್ಪನವರು ಕಲ್ಲು ತೂರಿದವರು ನಮ್ಮ ಸಮಾಜದವರಲ್ಲ. ಅವರು ಬಿಜೆಪಿ ಕಾರ್ಯಕರ್ತರು, ಆರ್‌ಎಸ್‌ಎಸ್ ನವರು ಎಂದು ಭಾಷಣ ಮಾಡಿದರು.
೨ ಎ ದಲ್ಲಿ ಅನೇಕ ಅತಿ ಹಿಂದುಳಿದ ಜಾತಿಗಳಿವೆ. ಅನುಕೂಲಸ್ತ, ಶ್ರೀಮಂತ ಜಾತಿಯನ್ನು ೨ಎ ದಲ್ಲಿ ಸೇರಿಸಿದರೆ ಅವರಿಗೆ ಅನ್ಯಾಯವಾಗುವುದಿಲ್ಲವೆ? ಶ್ರೀಮಂತಜಾತಿಗಳು ತಮ್ಮ ಸ್ವಸಾಮರ್ಥ್ಯದಿಂದ ಮುಂದೆ ಬರಬೇಕು. ತಮ್ಮ ಜಾತಿಯ ಗೌರವ ಕಾಯ್ದುಕೊಳ್ಳಬೇಕು.
ಶಭಾಷ್
ಈ ಸ್ವಾಮಿಗಳು ಖಾವಿ ತೆಗೆದು ಖಾದಿ ಹಾಕಿಕೊಳ್ಳಲಿ. idiots
*2a ಮೀಸಲಾತಿಯಲ್ಲಿ ಈಗಾಗಲೆ 102 ಜಾತಿಗಳಿವೆ ಅದರಲ್ಲಿ ಸೇರಿ ಅವರಿಗೆ ಅನ್ಯಾಯ ಮಾಡಬೇಡಿ.*
*ಪಂಚಮಸಾಲಿಗಳಿಗೆ EWS 10 % ನಲ್ಲಿ ಮೀಸಲಾತಿ ಕೊಡುವ ಅಧಿಕಾರ ಕೇಂದ್ರಕ್ಕೆ ಇದೆ. ಅದರಲ್ಲಿ 3 % ಕೊಟ್ಟರೂ ಸಾಕು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.*
*ಬಸವಜಯಮೃತ್ಯುಂಜಯ ಸ್ವಾಮಿಜಿಯವರ ಹೋರಾಟ EWS ನಲ್ಲಿ 2 % ಮೀಸಲಾತಿಗಾಗಿ ಆರಂಭವಾಗಲಿ*
*EWS ನಲ್ಲಿರೋದು ಕೇವಲ 3% ಜನ ಮಾತ್ರ. ಇನ್ನೂ 7% ಉಳಿಯುತ್ತದೆ. ಅದರಲ್ಲಿ 2% ಕೊಡಲಿ