ಕೊಂಡಿ ಮಂಚಣ್ಣನಂಥ ಶಾಸಕರ ಹೆಸರು ಹೇಳಿದರೆ ನಾಲಗೆ ಹೊಲಸು: ಮೃತ್ಯುಂಜಯ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಹಿರೇಬಾಗೇವಾಡಿ

ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶಕ್ಕೆ ಗುರಿಯಾಗಿರುವ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗುರುವಾರ ತಿರುಗೇಟು ನೀಡಿದರು.

ಕಾಶಪ್ಪನವರ ಹೆಸರು ಹೇಳದೆ ಬಸವಣ್ಣನವರ ಕಾಲದಲ್ಲಿ ಕೊಂಡಿ ಮಂಚಣ್ಣನಂಥವರು ಇದ್ದರು. ರಾಣಿ ಚನ್ನಮ್ಮನ ಕಾಲದಲ್ಲಿ ಮಲ್ಲಪ್ಪಶೆಟ್ಟಿ ಅಂಥವರು ಇದ್ದರು. ನಮ್ಮ ಕಾಲದಲ್ಲೂ ನಮ್ಮದೇ ಸಮಾಜದಲ್ಲಿ ಅಂಥವರು ಇದ್ದಾರೆ ಎಂದರು.

ಪಂಚಮ ಸಾಲಿ ಸಮಾಜ ದವರೇ ಆದ ಶಾಸಕರೊಬ್ಬರು ಕುಮ್ಮಕ್ಕು ನೀಡಿ ಲಾಠಿ ಚಾರ್ಜ್‌ ಮಾಡಿಸಿದ್ದಾರೆ. ಇದಕ್ಕೆ ಸುವರ್ಣ ವಿಧಾನ ಸೌಧದ ಒಳಗಿನ ಸಿಟಿಟಿವಿ ಕ್ಯಾಮೆರಾಗಳೇ ಸಾಕ್ಷಿ ಎಂದು ಶ್ರೀಗಳು ಆರೋಪ ಮಾಡಿದರು, ಎಂದು ಪ್ರಜಾವಾಣಿ ವರದಿ ಮಾಡಿದೆ.

ಅವರು ಯಾರೆಂದು ನಾನು ಹೆಸರು ಹೇಳುವುದಿಲ್ಲ. ಅಂಥವರ ಹೆಸರು ಹೇಳಿ ನನ್ನ ನಾಲಿಗೆಯನ್ನು ಹೊಲಸು ಮಾಡಿಕೊಳ್ಳುವುದಿಲ್ಲ ಎಂದೂ ಆಕ್ರೋಶ ವ್ಯಕ್ತ ಪಡಿಸಿದರು.

‘ಸಚಿವ ಸ್ಥಾನಕ್ಕಾಗಿ ಆ ಶಾಸಕ ಸಮಾಜದ ವಿರುದ್ಧವೇ ಕುಮ್ಮಕ್ಕು ನಡೆಸಿದ್ದಾರೆ. ಅವರು ಲಾಠಿಚಾರ್ಜ್‌ ಮಾಡಿಸಲಿ, ಗೋಲಿಬಾರ್‌ ಮಾಡಿಸಲಿ. ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ನಮಗಿದೆ. ಸಮಾಜದಲ್ಲಿ ಒಬ್ಬ ಮಲ್ಲಪ್ಪಶೆಟ್ಟಿ ಇದ್ದರೆ ಏನಾಯಿತು. 1 ಕೋಟಿ, 29 ಲಕ್ಷ 99,999 ಮಂದಿ ಕ್ರಾಂತಿಕಾರಿಗಳು ಇದ್ದಾರೆ’ ಎಂದೂ ಹೇಳಿದರು.

Share This Article
1 Comment
  • ಮೂರ್ಖ ಮುಟ್ಟಾಳ ಅವಿವೇಕಿ ಸ್ವಾಮಿ

Leave a Reply

Your email address will not be published. Required fields are marked *