ವಿಜಯಪುರ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ ಅಂಗೈಯಲ್ಲಿ ಇಷ್ಟಲಿಂಗದ ಪ್ರತಿಷ್ಠಾಪನೆಯನ್ನು ಶರಣತತ್ವ ಚಿಂತಕ ಡಾ. ಜೆ ಎಸ್ ಪಾಟೀಲ ಶನಿವಾರ ಉದ್ಘಾಟಿಸಿದರು.
ನಗರದಲ್ಲಿ ಕಳೆದ ಮುವತ್ತು ವರ್ಷಗಳಿಂದ ಶರಣ ಕಲ್ಲಪ್ಪ ಕಡೆಚೂರ ನೇತೃತ್ವದ ಶರಣ ಪಡೆ-ಲಿಂಗಾಯತ ಜಾಗರಣ ವೇದಿಕೆಯು ಗಣೇಶ ಚೌತಿಯ ದಿನ ಅಂಗೈಯಲ್ಲಿ ಇಷ್ಟಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದೆ.
ಈ ಸಂದರ್ಭದಲ್ಲಿ ಚಿಂತಕ ಜೆ.ಎಸ್, ಪಾಟೀಲ ಮಾತನಾಡುತ್ತ, ಧಾರ್ಮಿಕ ಉನ್ಮಾದದ ಸಮೂಹ ಸನ್ನಿಗಳಿಂದ ಈಗಾಗಲೆ ಮುಸ್ಲಿಂ ರಾಷ್ಟ್ರಗಳು ನಾಶಹೊಂದುತ್ತಿವೆ. ಭಾರತವೂ ಕೂಡ ಹಿಂದುತ್ವವಾದಿ ಪಿತೂರಿಯಿಂದ ಬಿತ್ತಲಾಗುತ್ತಿರುವ ಸಮೂಹ ಸನ್ನಿಗೆ ಒಳಗಾಗಿದೆ ಎಂದರು.
ಬಸವಣ್ಣನವರು ಮೂರ್ತಿಪೂಜೆ ಬಹುದೇವೋಪಾಸನೆಯನ್ನು ಹುಡಿಗೊಳಿಸಲೆಂದೆ ಇಷ್ಟಲಿಂಗ ಅನುಸಂಧಾನ ವಿಧಾನವನ್ನು ಸಂಶೋಧಿಸಿದರು. ಲಿಂಗಾಯತರೆನ್ನಿಸಿಕೊಳ್ಳುವವರು ತಮ್ಮ ಸಂಸ್ಕೃತಿಯನ್ನು ಬಿಟ್ಟು ವೈದಿಕದ ಸಮೂಹ ಸನ್ನಿಗೆ ಒಳಗಾಗಿ ಮತಿಭ್ರಷ್ಟರಾಗಿದ್ದಾರೆ ಎಂದು ಪಾಟೀಲರು ಹೇಳಿದರು.
ಬಡಾವಣೆಯ ಅನೇಕ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ತುಂಬಾ ಒಳ್ಳೆಯ ಅರ್ಥಪೂರ್ಣ ಕಾರ್ಯಕ್ರಮ 🙏
100% ಸತ್ಯವಾದ ದಾರಿ , ಪ್ರಜ್ಞೆಯ ಹಿಂದೆ ಇರಬೇಕು ಎನ್ನುವವರು ಎಲ್ಲರೂ ಇಷ್ಟ ಲಿಂಗ ಪೂಜೆ ಮಾಡುತ್ತಾ ವೈದಿಕ ವ್ಯವಸ್ತೆಯಿನ್ದ ದೂರ ಇರುವದು ಒಳ್ಳೆಯದು.
ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🙏
Perfectly corre’t.
Ssri ede.