ವಿಜಯಪುರ:
ಅಕ್ಟೋಬರ್ 6 ರಂದು ವಿಜಯಪುರ, ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಒಂದು ದಿನದ ಜನಕಲಾ ಸಾಂಸ್ಕೃತಿಕ ಮೇಳ ನಡೆಯಲಿದೆ.
ಮೇ ಸಾಹಿತ್ಯ ಮೇಳ ಬಳಗ ವಿಜಯಪುರ, ಕವಿ ಪ್ರಕಾಶನ ಕವಲಕ್ಕಿ, ಚಿತ್ತಾರ ಕಲಾಬಳಗ ಧಾರವಾಡ, ಲಡಾಯಿ ಪ್ರಕಾಶನ ಗದಗ ಜಂಟಿಯಾಗಿ ಮೇಳ ಆಯೋಜಿಸಿವೆ.
ಬಸಮ್ಮಾ ಪೀರಪ್ಪಾ ನಡುವಿನಮನಿ, ಆದಮ್ಮಾ ಚಂದಪ್ಪ ಕದ್ರಿ, ಸಾವಿತ್ರಿಬಾಯಿ ನೀಡೋಣಿ, ರಮಾಬಾಯಿ ಸಂಗಪ್ಪಾ ಬೆಳ್ಳೆಣ್ಣವರ ಹಾಗೂ ಪದ್ಮಾವತಿ ಸಂಗಪ್ಪ ವಾಘಮೋರೆ ಅವರು ಜಂಟಿಯಾಗಿ ಮೇಳವನ್ನು ಉದ್ಘಾಟಿಸಲಿದ್ದಾರೆ.
ಲಕ್ಷ್ಮಿಪತಿ ಕೋಲಾರ, ಜನಾರ್ಧನ (ಜೆನ್ನಿ) ಮೈಸೂರು ಇವರುಗಳು ದಿಕ್ಸೂಚಿ ಮಾತುಗಳನ್ನಾಡುವರು. ಬಿ. ಶ್ರೀನಿವಾಸ, ದಾವಣಗೆರೆ ಆಶಯ ಮಾತು ಆಡಲಿದ್ದಾರೆ.
ಜನರ ಹೋರಾಟದ ಹಾಡುಗಳ ಗಾಯನವೇ ಜನಕಲಾ ಸಾಂಸ್ಕೃತಿಕ ಮೇಳದ ಮುಖ್ಯ ಭಾಗವಾಗಿದೆ ಜೊತೆಗೆ ಸಂವಾದ ಮತ್ತು ಮಾತು ಇರಲಿದೆ. ಹೋರಾಟ ಗೀತೆಗಳನ್ನು ಹಾಡುವ ನಾಡಿನ ಕಲಾತಂಡಗಳು ಮೇಳದಲ್ಲಿ ಭಾಗಿಯಾಗುತ್ತಿವೆ.
ಸಮಾರೋಪ ಮಾತುಗಳನ್ನು ಎಂ.ಬಿ. ರಾಮಚಂದ್ರಪ್ಪ ದಾವಣಗೆರೆ, ಬಸವರಾಜ ಹೂಗಾರ, ಧಾರವಾಡ ಇವರು ಆಡಲಿದ್ದಾರೆ.
ಸಂಜೆ 6:45 ರಿಂದ ನಾಟಕ ಪ್ರದರ್ಶನ, ಸಮುದಾಯ ರಾಯಚೂರು ಪ್ರಸ್ತುತಪಡಿಸುವ, ಡಾ. ಎಂ. ಎಂ. ಕಲಬುರ್ಗಿ ಜೀವನ ಆಧಾರಿತ, ಪ್ರವೀಣರೆಡ್ಡಿ ಗುಂಜಹಳ್ಳಿ ನಿರ್ದೇಶನ, ವಿಕ್ರಂ ವಿಸಾಜಿ ರಚಿಸಿರುವ “ರಕ್ತ ವಿಲಾಪ”.