ಬೆಂಗಳೂರು
ಬಾಗಲಕೋಟೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಯುವ ಒಂದು ದಿನದ ಮುಂಚೆ ಗುಳೇದಗುಡ್ಡದ ಒಂದು ಸಣ್ಣ ವೀರಶೈವ ಮಠ ಏನೋ ನೆಪ ಹೇಳಿ ಅಭಿಯಾನ ಬಹಿಷ್ಕಾರ ಮಾಡಲು ಕರೆ ನೀಡಿತ್ತು.
ಅದರ ಬಗ್ಗೆ ಮಾತನಾಡಲು ಕರೆ ಮಾಡಿದಾಗ ಬಸವ ಕೇಂದ್ರದ ಅಣ್ಣಪ್ಪ ಜಗದೇವ ಇಂತಹ ವಿರೋಧದಿಂದ ಅಭಿಯಾನದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
ಆಗ ಅವರು ಹೇಳಿದ ಇನ್ನೊಂದು ಮಾತು: “ವೀರಶೈವರು ಸಣ್ಣ ಸುದ್ದಿಗೋಷ್ಠಿ ನಡೆಸಿದರೂ ವಿಜಯವಾಣಿ ದೊಡ್ಡದಾಗಿ ಹಾಕುತ್ತದೆ. ನಾವು ಏನೇ ಮಾಡಿದರೂ ಪ್ರಚಾರ ಕೊಡುವುದಿಲ್ಲ.”
ವಿಜಯವಾಣಿಯ ವರದಿಗಳನ್ನು ನೋಡಿದರೆ ಈ ಆಪಾದನೆಯಲ್ಲಿ ಹುರುಳಿದೆ ಎನ್ನುವುದು ಕಾಣಿಸುತ್ತದೆ.
ಬಸವ ಸಂಸ್ಕೃತಿ ಅಭಿಯಾನ ರಾಜ್ಯದಲ್ಲಿ ಸಂಚಲನ ಮೂಡಿಸಿರುವಂತಹ ಜನಾಂದೋಲನ. ವಿವಿಧ ಜಿಲ್ಲೆಗಳಲ್ಲಿ ಪ್ರಭಾವಿ ಮಠಾಧೀಶರು, ಸಹಸ್ರಾರು ಶರಣ ಶರಣೆಯರು, ಸಚಿವರು, ಶಾಸಕರು, ಮುಖಂಡರು ಜಾತ್ಯತೀತವಾಗಿ ಭಾಗವಹಿಸುತ್ತಿದ್ದಾರೆ.
ಲಿಂಗಾಯತ ಧರ್ಮದ ಹೋರಾಟದಲ್ಲಿ, ಬಹಳಷ್ಟು ವಿರೋಧಿಗಳ ನಿದ್ದೆ ಕೆಡಿಸಿರುವ, ಮಹತ್ವದ ಹೆಜ್ಜೆಯಿದು. ರಾಜ್ಯದ ಸಾಮಾಜಿಕ ಸ್ವರೂಪಕ್ಕೆ, ರಾಜಕೀಯಕ್ಕೆ ಹೊಸ ತಿರುವು ನೀಡಿರುವಂತಹ ಬೆಳವಣಿಗೆ.
ಇಲ್ಲಿಯವರೆಗೆ ಅಭಿಯಾನದ ವರದಿಯನ್ನು ವಿಜಯವಾಣಿ ತನ್ನ ಪ್ರಮುಖ ಆವೃತ್ತಿಗಳಲ್ಲಿ (ಹುಬ್ಬಳ್ಳಿ, ಬೆಂಗಳೂರು) ಹಾಗೂ ಎಲ್ಲಾ ಜಿಲ್ಲೆಗಳನ್ನು ಮುಟ್ಟುವ ‘ರಾಜ್ಯದ’ ಪುಟಗಳಲ್ಲಿ ಒಂದು ಭಾರಿ ಕೂಡ ಹಾಕಿಲ್ಲ ಎನ್ನುವ ಮಾತು ಸತ್ಯ..
ಅಭಿಯಾನದ ವರದಿಗಳನ್ನು ವಿಜಯವಾಣಿ ಸ್ಥಳೀಯ ಆವೃತಿಗಳಿಗೆ ಮಾತ್ರ ಸೀಮಿತಗೊಳಿಸಿದೆ. ಅಂದರೆ ಬೀದರ್ ಅಭಿಯಾನದ ವರದಿ ಬೀದರ್ ಜಿಲ್ಲೆಯಲ್ಲಿ ಲಭ್ಯವಾಗುವ ಪುಟಗಳಲ್ಲಿ ಮಾತ್ರ ಪ್ರಕಟವಾಗುತ್ತದೆ.
ಇದೇ ರೀತಿ ಪ್ರಮುಖ ಲಿಂಗಾಯತ ಬೆಳವಣಿಗೆಗಳನ್ನು ವಿಜಯವಾಣಿ ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ ಎಂಬ ಗುಮಾನಿ ಹೊಸದಲ್ಲ.
ಜಾತಿಗಣತಿಯಲ್ಲಿ ಲಿಂಗಾಯತ ಎಂದು ಬರೆಸಿ ಎಂದು ಲಿಂಗಾಯತ ಮಠಾಧಿಪತಿಗಳು ಬೆಂಗಳೂರಿನಲ್ಲಿ ಸೆಪ್ಟೆಂಬರ್ 17 ಸುದ್ದಿಗೋಷ್ಠಿ ನಡೆಸಿದರು. ಇದನ್ನು ಬಹಳ ಪತ್ರಿಕೆಗಳು ವರದಿ ಮಾಡಿದವು ಮತ್ತು ವಾರ್ತಾ ಭಾರತಿ ಮೊದಲನೇ ಪುಟದ ಮುಖ್ಯ ವರದಿಯಾಗಿಯೇ ಪ್ರಕಟಿಸಿತು. ಆದರೆ ವಿಜಯವಾಣಿಯಲ್ಲಿ ಇದರ ಸುಳಿವೂ ಕಾಣಿಸಲಿಲ್ಲ.
ಆದರೆ ಯಾವುದಾದರು ವೀರಶೈವರ ಕಾರ್ಯಕ್ರಮವಾದರೆ ಸೂರು ಕಿತ್ತು ಹೋಗುವಂತೆ ವರದಿ ಮಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ತಲುಪುವಂತೆ ನೋಡಿಕೊಳ್ಳುತ್ತದೆ.
ಲಿಂಗಾಯತ ವಿರೋಧಿ ನಿಲುವು ಎಲ್ಲಾ ಗೋಧಿ ಮೀಡಿಯಾಗಳಲ್ಲಿ ಕಾಣುತ್ತದೆ. ಅಭಿಯಾನಕ್ಕೆ ನ್ಯಾಯ ಒದಗಿಸುವಂತಹ ರೀತಿ ಯಾರೂ ವರದಿ ಮಾಡಿಲ್ಲ ಎನ್ನುವುದು ಸತ್ಯ.
ಆದರೆ ವಿಜಯವಾಣಿ ಲಿಂಗಾಯತರ ಹೆಸರಿನಲ್ಲಿ ನಡೆಯುವ ಪತ್ರಿಕೆ.
ಇದು ಲಿಂಗಾಯತ ಮಾಲೀಕತ್ವದ, ಲಿಂಗಾಯತ ಪತ್ರಿಕೆಯೆಂದೇ ಮಾರಾಟವಾಗುತ್ತದೆ. ಲಿಂಗಾಯತ ಓದುಗರಿರುವ, ಲಿಂಗಾಯತ ಸಮಾಜದ ಬೆಂಬಲದಿಂದಲೇ ನಡೆಯುತ್ತಿರುವ ಪತ್ರಿಕೆ.
ಇನ್ನೂ ವಿಪರ್ಯಾಸವೆಂದರೆ ಇದರ ಕಣ್ಣಿಗೆ ರಾಚುವ ಪಕ್ಷಪಾತವನ್ನು ಸಹಿಸಿಕೊಂಡು ನಿಷ್ಠೆಯಿಂದ ಓದುವ ಲಿಂಗಾಯತರೂ ಬಹಳಷ್ಟಿದ್ದಾರೆ. ಅವರೆಲ್ಲಾ ಜಾಗೃತಿಗೊಂದು ವಿಜಯವಾಣಿಯ ಪಕ್ಷಪಾತ ಸರಿಪಡಿಸುವ ಕಾಲ ಬಂದಿದೆ.
ಅಭಿಯಾನದ ಬಗ್ಗೆ ತಲೆ ಕೆಡಸಿಕೊಳ್ಳದ ವಿಜಯವಾಣಿ ವೀರಶೈವರ ಏಕತಾ ಸಮಾವೇಶಕ್ಕೆ ನೀಡಿದ ಆದ್ಯತೆ




ವಿಜಯ ವಾಣಿ ಪೇಪರ್ ನ್ನು ಹಾಕಿಸಬಾರದು ಬೇರೆಯವರ ಪೇಪರ್ ಹಾಕ್ಕಿಸಿ ಆಂದೋಲನ ಮಾಡಿರಾಯಿತು
Yes u rt
ವಿಜಯವಾಣಿ ಪತ್ರಿಕೆಯನ್ನು ಬಹಿಷ್ಕರಿಸಬೇಕು, ಹಾಗೂ ಯಾರು ಕೊಂಡುಕೊಳ್ಳದೆ ಇದರ ಮಾರಾಟ ತಗ್ಗಿಸಬೇಕು. ಲಿಂಗಾಯತರು ಈಗಲಾದರೂ ಎಚ್ಚೆತ್ತುಕೊಳ್ಳಿ.
ಹೌದು ಶರಣರೇ , ಈ ಹಿಂದೆಯೂ ನಮ್ಮ ಲಿಂಗಾಯತ ಧರ್ಮಕೆ ,ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಒಪ್ಪಿಗೆ ಕೊಟ್ಟು, ಲಿಂಗಾಯತ ಧರ್ಮದ ಮಾನ್ಯತೆಗೆ ವರದಿ ಯನು ಕೇಂದ್ರ ಸರಕಾರಕೆ ಶಿಫಾರಸು ಮಾಡಿದ, ಮೇಲೆ ಕೇಂದ್ರ ಸರ್ಕಾರ ದುರುದ್ದೇಶ ದಿಂದ , ಯಾವುದೋ ನೆಪ ಹೇಳಿ ,ಮತ್ತೆ ರಾಜ್ಯ ಸರ್ಕಾರಕೆ ಮರಳಿ ಖಳಿಸಿತ್ತು, ಅಂದು ಅದರ ಸುದ್ದಿಯನ್ನು , ಈ ವಿಜಯವಾಣಿ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಿತ್ತು , ಇದರಿಂದಲೂ ನಮ್ಮಗೇ ಮೊದಲೇ ತಿಳಿದಿದೆ, ಈ ವಿಜಯವಾಣಿ ಮಾಲೀಕರು , ವೀರಶೈವ ಬೆಳಸಿ , ಲಿಂಗಾಯತ ಧರ್ಮದ ವಿರೋಧಿ ಯಾಗಿದ್ದಾರೆ ,ಕಾರಣ ಇನ್ನೂ ಮುಂದೆ ಜನರಿಗೆ ತಿಳಿಸಿ ,ಮತ್ತು ವಿಜಯವಾಣಿ ಪತ್ರಿಕೆ ಯಾರೂ ಖರಿದಸಬೇಡಿ ಮತ್ತು ಪತ್ರಿಕೆ ಓದಬೇಡಿ ಎಂದು ನಮ್ಮ ಲಿಂಗಾಯತರಿಗೆ ತಿಳಿಸಿ ತಿಳಿಸಬೇಕು
ಈ ಪತ್ರಿಕೆಯ ಹೆಚ್ಚಿನ ಓದುಗರು ಲಿಂಗಾಯತರೇ ಆಗಿದ್ದಾರೆ ಎಂಬುದನ್ನು ಅದರ ಮಾಲೀಕರು ತಿಳಿದುಕೊಂಡರೆ ಒಳ್ಳೆಯದು ನಾವಂತೂ ಪ್ರತಿ ದಿನ ಅಭಿಯಾನದ ಸುದ್ದಿಗಳಿಗಾಗಿ ಕಾದು ನಿರಾಶರಾಗುತ್ತಿದ್ದೆವು
ಅದಕ್ಕಾಗಿಯೇ ಈ ಪೇಪರ್ ಓದೋದು ಕೊಳ್ಳೋದು ಬಿಟ್ಟೆ
ವಿಜಯ ಸಂಕೇಶ್ವರ ಮೊದಲಿಂದಲೂ ಲಿಂಗಾಯತ ಅಸ್ಮಿತೆ ವಿರೋಧಿ, ಗದುಗಿನ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಒಬ್ಬರನ್ನು ಜಾತ್ರಾ ಅಧ್ಯಕ್ಷ ಮಾಡಿದ್ದಕ್ಕೆ ಆಕ್ಷೇಪಣೆ ಮಾಡಿ ಅಂದಿನ ಗದುಗಿನ ಶ್ರೀಗಳಿಂದ ಭಾವೈಕ್ಯತೆ ಪಾಠ ಮಾಡಿಸಿಕೊಂಡಿದ್ರೂ ಎಂದೂ ಸುಧಾರಿಸಲಿಲ್ಲ, ಬದಲಿಗೆ ಪಂಚ ಪೀಠದ ಶ್ರೀಗಳ ಅಡ್ಡ್ಡಪಲ್ಲಕ್ಕಿಗೆ ,ಅವರ ವಾಣಿಗೆ, ಪಂಚಾಂಗ, ಜ್ಯೋತಿಷ್ಯ ನಂಬುತ್ತ ಕೊನೆಗೆ ಕೊರೊನಾ ಸಮಯದಲ್ಲಿ ಲಿಂಬೆರಸ ಹಿಂಡುವ ಐಡಿಯಾ ಕೊಟ್ಟು ಶಿಕ್ಷಕರೊಬ್ಬರ ಸಾವಿಗೆ ಕಾರಣವಾದರು, ಟ್ರಕ್ ಲಾಜಿಸ್ವಿಕ್ ವ್ಯವಹ್ಯಾರದಲ್ಲಿ ಪಳಗಿದ ಮಾತ್ರಕ್ಕೆ ತಮಗೆ ಎಲ್ಲವೂ ತಿಳಿದಿದೆ ಏನು ಬೇಕಾದರೂ ಮಾಡುತ್ತೇನೆ ಎನ್ನುವ ಜಂಭವೇ ಇಂದು ಲಿಂಗಾಯತ ಅಸ್ಮಿತೆ ತುಳಿಯುವ ಕೆಲಸ ಮಾಡುತ್ತಿದ್ದಾರೆ, ಅಲ್ಲಿ ಸಂಪಾದಕರು ನೆಪ ಮಾತ್ರ ಎಲ್ಲ ವಿಜಯ ಸಂಕೇಶ್ವರ ಅಣತಿಯಂತೆ ನಡೆಯಯತ್ತಿದೆ ಎನ್ನುವುದರಲ್ಲಿ ಸಂಶಯ ಬೇಡ
Better to stop buying Vijayavani .
ಅಲ್ಲೂ ನಿಮ್ಮ ವಕ್ರ ದೃಷ್ಟಿ ಬಿತ್ತಾ
ನಾವು ವಿ ವಾ ಹಾಕಿಸುವುದನ್ನು ಬಿಡಬೇಕಾಗಿದೆ.
ಲಿಂಗಾಯತ ಧರ್ಮದ ಬಗ್ಗೆಯ ಸುದ್ದಿಗಳಿಗೆ ಆದ್ಯತೆ ಕೊಡದವರು ನಮಗೂ ಬೇಡ.
RSS ಮೂಲದ (ವೀರಶೈವ) ಪತ್ರಿಕೆ.
ಅವರು ಲಿಂಗಾಯತ ಧರ್ಮದ ವಿರೋಧಿ.
BJP ticket ಬೇಕು ಸಂಕೇಶ್ವರಗೆ.
ಲಿಂಗಾಯತ ಧರ್ಮದ ಜನ BJP TICKET ಕೊಡಿಸ್ತೀರಾ??
ಲಿಂಗಾಯತರು ಎಂತ ಮುಟ್ಟಾಳರು ಅನ್ನೋದಕ್ಕೆ ಈ ಸಂಕೇಶ್ವರನೇ ಸಾಕ್ಷಿ. VRL ಕೂಡ ಬಹಿಷ್ಕರಿಸಿ.
ಇಂದಿನಿಂದಲೇ ಪ್ರಾರಂಭ ಮಾಡಿ, (ವಿಜಯವಾಣಿ ವಾಣಿ ) ಲಿಂಗಾಯತ ವಿರೋಧಿ,
ನಾನು ಪ್ರಜಾವಾಣಿ ಪತ್ರಿಕೆ 30 ವರ್ಷದಿಂದ ಓದುತ್ತಿದ್ದೇನೆ ಇದರಲ್ಲಿ ಈ ತರ ಪಕ್ಷಪಾತ ಇಲ್ಲಾ,
ನಾನು ವಿ ವಾ ಪೇಪರ್ ತರೀಸುವುದಿಲಃ
Vijaya ವಾಣಿ ಎಂದಿದ್ದರೂ ಅದು ವೀರಶೈವ ವಾಣಿಯೇ ಇದರಲ್ಲಿ ಎರಡು ಮಾತಿಲ್ಲ. ಸಂಕೇಶ್ವರ ineru ತಾನೇ .ವಿಜಯವಾಣಿ ಪಂಚಾಚಾರ್ಯರ ಮುಖವಾಣಿ, adendu ಲಿಂಗಾಯತ ಧರ್ಮದ ವಿರುದ್ಧವಾದುದು. ಆದ್ರಿಂದ ಅದನ್ನು ಬನಿಷ್ಕರಿಸಿ.
ವೀರಶೈವ ವಾಣಿ ಬಹಿಷ್ಕರಿಸಿ
ಹಿಂದೆ ಬ್ರಿಟಿಷರು ಇದೆ ರೀತಿ ನಮ್ಮ ಭಾರತೀಯರನ್ನು ಒಡೆದು ಆಳಿದರು, ಈಗ ಕುತಂತ್ರಿ ರಾಜಕಾರಣಿಗಳು ವ್ಯವಸ್ಥಿತವಾಗಿ ಅಖಂಡ ಹಿಂದೂ ಸಮಾಜವನ್ನು ಜಾತಿಗಳ ಹೆಸರಿನಲ್ಲಿ ಒಡೆಯುತ್ತಿದ್ದಾರೆ. ಅದಕ್ಕೆ ನಾವು ಲಿಂಗಾಯತರು, ವೀರಶೈವರು ಮೊದಲ ಬಲಿ
ತಾವು ಲಿಂಗಾಯತರಾಗಿದ್ರೆ ಮೊದಲು ಲಿಂಗಾಯತದ / ಶರಣರ ಜೀವನದ ಬಗ್ಗೆ ತಿಳಿದುಕೊಳ್ಳಿ ವಚನಗಳನ್ನು ಓದಿಕೊಳ್ಳಿ ಆ ಮೇಲೆ ಹಿಂದುತ್ವದ ಬಗ್ಗೆ ತಿಳಿದುಕೊಳ್ಳುವಿರಂತೆ…. ಒಂದು ವೇಳೆ ತಾವು ಹಿಂದೂ/ವೀರಶೈವ ರಾಗಿದ್ದಲ್ಲಿ ಇದು ತಮಗೆ ಸಂಬಂಧಿಸಿದ ವಿಶಯವಲ್ಲ. ದೂರ ಇರಿ.
ಆರಾಧನೆಯ ಮಾಡಿದಡೆ ಅಮೃತದ ಬೆಳೆಸು, ವಿರೋಧಿಸಿ ದಡೆ ವಿಷದ ಬೆಳೆಸಿರಿ, ಇದು ಕಾರಣ ಲಿಂಗ ಜಂಗಮಕ್ಕಂಜಲೇಬೇಕು. ಸ್ಥಾವರ ಜಂಗಮ ಒಂದೆಯಂದರಿದೊಡ್, ಕೂಡಲಸಂಗಮದೇವ ಶರಣ ಸನ್ನಿಹಿತ
ಈ ಸಾಹುಕಾರಣಿಗೆ ಆಗಿನ ಗದಗ ಮಠದ ಸಿದ್ದಲಿಂಗ ಸ್ವಾಮಿಗಳು RSS ನಾ ಚೆಡ್ಡಿ ಹಾಕುವ ಎಂದು ನಗೆಯಡಿದ್ದರು. ಸಂಘಿಗಳ ಒಡನಾಡಿ ಎಂದು ಹೀಗೆಳೆದರೂ ಇವನಿಗೆ ತಿಳುವಳಿಕೆ ಬರಲಿಲ್ಲ.
ಇನ್ನು ಮುಂದೆ ಆದರು ವಿಜೈ ವಾಣಿ ಪತ್ರಿಕೆಯನ್ನು ಲಿಂಗಾಯತರು ಬಹಿಸ್ಕಾರ ಹಾಕಿ ಸಂಕೇಶ್ವರ್ ಗೆ ಬುದ್ಧಿ ಕಲಿಸಿರಿ.
ಗುರು ಬಸವಣ್ಣನವರ ಕುರಿತು ಸರ್ವಜ್ಞನವರ ವಚನಗಳು
ಲಿಂಗಾಯತ ಧರ್ಮ ಸಂಸ್ಥಾಪಕ ವಿಶ್ವಗುರು ಬಸವಣ್ಣನವರ ಕುರಿತು ಸರ್ವಜ್ಞನವರ ವಚನಗಳು
ಬಸವ ಪೀಠವು ಎದ್ದು ಒಸೆದು ನಾಣ್ಯವ ಹುಟ್ಟಿ
ಬಸವನ ಮುದ್ರೆ ಮೆರೆದಾವು | ಧರೆಯೊಳಗೆ
ವಶವಾಗದಿಹುದೆ ಸರ್ವಜ್ಞ ||
ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ
ಹುಸಿಮಾತನಾಡಿ ಕೆಡದಿರಿ | ಲಿಂಗಾಯತಕೆ
ಬಸವಣ್ಣನೆ ಕರ್ತೃ ಸರ್ವಜ್ಞ ||
ಬಸವನೆಂದಡೆ ಪಾಪ ದೆಶೆಗೆಟ್ಟು ಹೋಗುವುದು
ಬಸವನ ಪಾದವ ನಂಬಿದ | ಭಕ್ತರು
ಹಸನಾದರಯ್ಯ ಸರ್ವಜ್ಞ ||
ನಂಬಿ ಹೇಳುವೆ ಬಸವ ನಿಂಬಿಸಿ ಮಹಿಮೆಯ
ಶಂಭುವಿನ ಕರುಣ ನಿನಗುಂಟ | ನಾನಿಮ್ಮ
ನಂಬಿ ಹೇಳಿದೆನು ಸರ್ವಜ್ಞ ||
ಕಂತುಹರ ಬಸವಣ್ಣ ಚಿಂತಾಯಕ ಬಸವಣ್ಣ
ಮಂತ್ರಸಿದ್ದನು ಬಸವಣ್ಣ | ನ ಪಾದಕ್ಕ
ಶರಣೆನ್ನಿರೆಲ್ಲ ಸರ್ವಜ್ಞ ||
ಬಸವನೆ ಜಗದಾದಿ ಬಸವನೆ ಜಗದೀಶ
ಬಸವನೇ ಜಗದ ಗುರುಪ್ರಣವ | ವೆಂದರಿದು
ಬಸವನನು ಜಪಿಸು ಸರ್ವಜ್ಞ ||
ಏನಯ್ಯ ಗುರುರಾಯ ನಾ ನಿನ್ನ ನಂಬಿದೇನು
ನೀನು ದಯತೋರು ಜಗದೀಶ | ಬಸವನಿಗೆ
ನಾನು ಶರಣೆಂದೇ ಸರ್ವಜ್ಞ ||
ಬಸವಣ್ಣನವರು ಲಿಂಗಾಯತಧರ್ಮದ ಸ್ಫಾಪಕರು ಎಂಬುದಕ್ಕೆ 12ನೇ ಶತಮಾನದ ಶರಣರ ನೂರಾರು ವಚನಗಳಿವೆ .
#basavanna
#lingayathyouths
#Rastriyabasavadala
#kannadasamkrutikanayakabasavanna
ಭಾರತ ದೇಶ ಜೈ ಬಸವೇಶ…
ಒಬ್ಬ ಲಿಂಗಾಯತ ಕೋಟಿ ಲಿಂಗಾಯತ….
ಜೈ ವಿಶ್ವ ಗುರು ಬಸವಣ್ಣನವರು
ಜೈ ಲಿಂಗಾಯತ..
ಲಿಂಗಾಯತರೇ,
12 ನೇ ಶತಮಾನದಲ್ಲಿ ಕುತಂತ್ರದಿಂದ ಕ್ರಾಂತಿ / ಚಳುವಳಿ ಏನ್ ಆಯ್ತು ಆಗ ಪಟ್ಟ ಭದ್ರರು , ವಿರೋಧಿಗಳು ಏಳೆಹೋಟೆ ಶಿಕ್ಷೆ , ಎಲ್ಲಾ ಶರಣರ ಕೊಲೆ , ವಚನ ಕಟ್ಟುಗಳ ಸುಡುವಿಕೆ , ಕ್ರೌರ್ಯ ಏನ್ ನೆಡಿತು.
ಈಗ ಒಂದು ಅಂಕಿ ಹಿಂದೆ ಅಷ್ಟೇ, 21 (12) ನೇ ಶತಮಾನ ಹಿಸ್ಟೋರಿ ರಿಪೀಟ್ ಮತ್ತೆ ಲಿಂಗಾಯತರ ಹೋರಾಟವನ್ನು ಹೇಗೆಲ್ಲಾ ಗೊಂದಲ ಸೃಷ್ಟಿ ಮಾಡಿ ಹಿನ್ನಡೆ ಮಾಡಲು ಕಾಣದ ಕೈಗಳು ಬಹಳ ವ್ಯವಸ್ಥಿತವಾಗಿ ಕೆಲಸ ಮಾಡ್ತಾ ಇದ್ದವೆ, ಹೋದ್ ಸಾರಿ “ಲಿಂಗಾಯತ ಸ್ವತಂತ್ರ” ಧರ್ಮ ಹೋರಾಟದಲ್ಲಿ ಇಲ್ಲಸಲ್ಲದ ಆರೋಪ , ಗೊಂದಲ ಸೃಷ್ಟಿ ಮಾಡಿ ಹಿನ್ನಡೆ ಮಾಡಿದ್ದಾರೆ,
ಆದರೆ ನಮ್ಮ ಎಲ್ಲಾ ಲಿಂಗಾಯತರು ಜಾಗೃತರಾಗಿದ್ದಾರೆ.
ಈ ಸಾರಿ ಮತ್ತೆ ಅದೇ ತಪ್ಪು ಮಾಡಲ್ಲ,
12 ಮತ್ತೆ 21 ನೇ ಶತಮಾನ ಅವಾಗಿಂದ, ಇಲ್ಲಿವರೆಗೂ ಹೋರಾಟ ನಡಿತನೇ ಇದೆ.
ಇದು
ನಮ್ಮ ಅಸ್ಮಿತೆಯ ಉಳಿವಿಗಾಗಿ ,
ನಮ್ಮ ಸ್ಮಾರಕಗಳ ಉಳಿವಿಗಾಗಿ,
ನಮ್ಮ ಮಕ್ಕಳ ಭವಿಷ್ಯಕ್ಕಾಗಿ ,
ನಮ್ಮ ಲಿಂಗಾಯತರು ಸರ್ಕಾರ ಸೌಲಭ್ಯಗಳ ವಂಚಿತರಿಗಾಗಿ,
ನಮ್ಮ ಶರಣರ ಮತ್ತು ಲಿಂಗಾಯತರ ಮೇಲೆ ನಿರಂತರ ನಡೆಯುತ್ತಿರುವ ದೌರ್ಜನ್ಯ ಹಿನ್ನಡೆ ಮಾಡುವುದಕ್ಕಾಗಿ,
ನಮ್ಮ ಹೋರಾಟ ಯಾರಿಂದಲೂ ಹತ್ತಿಕ್ಕಲು ಸಾಧ್ಯವಾಗಲು ಬಿಡಬೇಡಿ.
ಬಹಳ ಜಾಗ್ರತೆ ಇಂದ ಹೆಜ್ಜೆ ಇಡುವ ಮೂಲಕ ಈ ಧರ್ಮದಲ್ಲಿ ಹುಟ್ಟಿದ್ದಕ್ಕೂ ಒಂದಿಷ್ಟು ಕೃತಜ್ಞತೆ ಸಲ್ಲಿಸೋಣ,
ನಮ್ಮ ಮಕ್ಕಳ ಭವಿಷ್ಯ ಸಧೃಡ ಮಾಡೋಣ.
ಲಿಂಗಾಯತರಲ್ಲಿ ಮಾತ್ರ ದೇಹ ಅಂತಿಮ ಯಾತ್ರೆಯಲ್ಲಿ ನಮ್ಮ ಆಸ್ತಿ ಅಂದರೆ “ಇಷ್ಟಲಿಂಗ” ಇಟ್ಟು ಕಳಿಸುತ್ತಾರೆ.
ಇಂಥ ಧರ್ಮಕ್ಕೆ ಮತ್ತು ಶರಣರಿಗೆ ದ್ರೋಹ ಮಾಡದೆ ಬಹಳ ಜಾಗರೂಕತೆಯಿಂದ ನಮ್ಮ ಉಳಿವು ಮತ್ತು ಬೆಳೆವು ನಮ್ಮ ಕೈಯಲ್ಲಿ ಇದೆ.
ಧರ್ಮದ ಕಾಲಂ ನಲ್ಲಿ “ಲಿಂಗಾಯತ” ಅಂತಾನೆ ಬರೆಸಿ.
ಭಾರತ ದೇಶ ಜೈ ಬಸವೇಶ….
ಒಬ್ಬ ಲಿಂಗಾಯತ, ಕೋಟಿ ಲಿಂಗಾಯತ….
ಜೈ ವಿಶ್ವಗುರು ಬಸವಣ್ಣ
ಜೈ ಲಿಂಗಾಯತ
ನಾನು ಇದನ್ನರಿತೆ ವಿಜಯವಾಣಿ ಪತ್ರಿಕೆ ನಿಲ್ಲಿಸಿ ಪ್ರಜಾವಾಣಿ ಪತ್ರಿಕೆ ತರಿಸುತ್ತಿದ್ದೇನೆ. ಲಿಂಗಾಯತರೆಲ್ಲರೋ ಹಾಗೆ ಮಾಡಿದರೆ ಬುದ್ಧಿ ಬರುತ್ತದೆ
U b wat U want
Sir..,
I , m an Indian
First n till Last
I fought n gave
My blood for
My Mothet Land
Hindostan….n
Kept it United
Let’s mind
Safety of Bharat
Our Mother Land
Basavaraj s kallur
Age 84 running
4th Oct 2025
ಇಷ್ಟು ದಿನ ನಮ್ಮ ಲಿಂಗಾಯತರಲ್ಲಿ ಇರುವ ಕೆಲವೇ ಕೆಲವು ಯಶಸ್ವಿ ಉದ್ಯಮಿ ಎಂದು ಹೆಮ್ಮೆ ಪಡುತ್ತಿದ್ದೆ. ಇವರು ಕೇವಲ ತಮ್ಮ ಸ್ವಾರ್ಥಕ್ಕೋಸ್ಕರ, ಪತ್ರಿಕಾ ಧರ್ಮವನ್ನು ಪಾಲಿಸದೆ ಬರಿ ವೀರಶೈವ ರ ಬಾಲಂಗೋಚಿ ಯಾಗಿ ಕೆಲಸ ಮಾಡುತ್ತಿರುವುದು ನಾಚಿಗ್ಗೇಡು. ಬಸವಣ್ಣನವರನ್ನು ಧರ್ಮ ಸಂಸ್ಥಾಪಕ ಎಂದು ಒಪ್ಪದ ಇವರು ಬಸವದ್ರೋಹಿ ಅಲ್ಲದೆ ಮತ್ತೇನೂ ಅಲ್ಲ.