ಬೆಂಗಳೂರು
ವಚನ ಸಾಹಿತ್ಯದ ಮೂಲಕ ಬಸವಾದಿ ಶರಣರ ಸಂದೇಶಗಳನ್ನು, ಬದುಕುವ ಮಾರ್ಗದ ಸೂತ್ರಗಳನ್ನು ಜಗತ್ತಿಗೆ ತಲುಪಿಸುವ ಮಹಾನ್ ಕಾರ್ಯವನ್ನು ಮಠಮಾನ್ಯಗಳು ಮಾಡಿಕೊಂಡು ಬಂದಿವೆ.
ಅದರಲ್ಲೂ ಅಥಣಿ ಮುರುಘೇಂದ್ರ ಶ್ರೀಗಳು ಬಸವ ತತ್ವದ ಸಂದೇಶಗಳ ಮಹಾ ರಥವನ್ನು ಎಳೆಯಲೆಂದೇ ಈ ಭೂಮಿಗೆ ಅವತರಿಸಿ ಬಂದವರು, ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಶನಿವಾರ ಹೇಳಿದರು.
ಬೆಂಗಳೂರಿನ ವಿಜಯನಗರದ ಹಂಪಿನಗರ ಕ್ರೀಡಾಂಗಣದಲ್ಲಿ ಅಥಣಿಯ ಗಚ್ಚಿನ ಮಠ ಹಾಗೂ ರಾಷ್ಟ್ರೀಯ ಬಸವ ತತ್ವ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಬಸವೋತ್ಸವ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ನಿಟ್ಟಿನಲ್ಲಿ ಗಚ್ಚಿನ ಮಠ ಹಾಗೂ ರಾಷ್ಟ್ರೀಯ ಬಸವ ತತ್ವ ಪರಿಷತ್ತು ಮುರುಘೇಂದ್ರ ಶಿವಯೋಗಿಗಳ ಹಾಕಿಕೊಟ್ಟ ಮಾರ್ಗದಲ್ಲಿ ಬಸವ ತತ್ವದ ಪ್ರತಿಪಾದನೆ ಮಾಡುತ್ತಿದ್ದಾರೆ, ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದರಾಮ ತೋಂಟದಾರ್ಯ ಶ್ರೀಗಳು, ಅಥಣಿ ಗಚ್ಚಿನ ಮಠದ ಶಿವಬಸವ ಶ್ರೀಗಳು, ನಿರ್ಮಲಾನಂದನಾಥ ಶ್ರೀಗಳು, ವಚನಾನಂದ ಶ್ರೀಗಳು, ನಿರಂಜನಾನಂದಪುರಿ ಶ್ರೀಗಳು, ಡಾ.ಬಸವಕುಮಾರ ಶ್ರೀಗಳು, ಮಹಾಂತ ಶ್ರೀಗಳು, ಮಾದಾರ ಚೆನ್ನಯ್ಯ ಶ್ರೀಗಳು, ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಶಾಸಕರಾದ ಕೃಷ್ಣಪ್ಪನವರು, ಮುಖಂಡರಾದ ರವೀಂದ್ರ, ಪುಟ್ಟರಾಜು, ಉಮೇಶ್ ಶೆಟ್ಟಿ, ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
