ಪಂಚಾಚಾರ್ಯರ ನಿಜ ಸ್ವರೂಪ: (2/12)
ಬಸವಣ್ಣನವರ ಕಾಲದಲ್ಲಿಯೇ ಅವರ ಅನೇಕ ತತ್ವಗಳನ್ನು ವಿರೋಧಿಸಿದ ಆಂಧ್ರದ ಆರಾಧ್ಯರು ಕಲ್ಯಾಣ ಕ್ರಾಂತಿಯ ನಂತರ ಲಿಂಗಾಯತ ಧರ್ಮ ಬೆಳೆಯಲು ಬಿಡದೆ ಅಡಚಣೆಯಾಗಿ ನಿಂತರು.
ಕ್ಷೀಣಿಸುತ್ತಿದ್ದ ಶರಣ ಧರ್ಮಕ್ಕೆ ಮತ್ತೆ ಜೀವ ಬಂದಿದ್ದು 16ನೆ ಶತಮಾನದಲ್ಲಿ. ಸಿದ್ದಲಿಂಗ ಯತಿಗಳು ಮತ್ತವರ 700 ವಿರಕ್ತ ಶಿಷ್ಯರು ನಿರಂತರವಾಗಿ ಸಂಚರಿಸಿ ಬಸವ ತತ್ವವನ್ನು ಪ್ರಚಾರ ಮಾಡಿದರು.
ಕ್ರಿ.ಶ.1570ರಲ್ಲಿ ಸಿದ್ದಲಿಂಗ ಯತಿಗಳು ಕಾಲವಾದ ಮೇಲೆ ಚಿತ್ರದುರ್ಗ, ಹರಪನಹಳ್ಳಿ ಮತ್ತು ಇಸಳೂರಿನಲ್ಲಿ ಮೂರು ಲಿಂಗಾಯತ ಮಠಗಳು ಅವರ ಶಿಷ್ಯವರ್ಗದಿಂದ ಸೃಷ್ಟಿಯಾದವು.
ವಿರಕ್ತರ ಈ ಸಂಘಟನೆ ಆರಾಧ್ಯರಿಗೆ ಸವಾಲಾಗಿ ಬಂದಿತು. ಜಾತಿ ಜಂಗಮರಾಗಿ ಗುರು ಸ್ಥಾನದಲ್ಲಿ ಅವರು ಕುಳಿತ್ತಿದ್ದರೆ, ಸಿದ್ದಲಿಂಗ ಯತಿಗಳು ಬಂದಿದ್ದು ಸಾಮಾನ್ಯ ಬಣಜಿಗ ಕುಟುಂಬದಿಂದ.
ಚುರುಕಾಗುತ್ತಿದ್ದ ಲಿಂಗಾಯತ ಧರ್ಮದಿಂದ ತಮ್ಮ ಮಿಶ್ರ ವೀರಶೈವ ಧರ್ಮವನ್ನು ಉಳಿಸಿಕೊಳ್ಳಲು ಮೊದಲು ಚತುರಾಚಾರ್ಯರನ್ನು ನಂತರ ಪಂಚಾಚಾರ್ಯರನ್ನು ಸೃಷ್ಟಿಸಿದರು.
ವಿರಕ್ತರು ಲಿಂಗಾಯತ ಮಠಗಳನ್ನು ಕಟ್ಟಿದ ಕಾಲದಲ್ಲಿಯೇ (17ನೇ ಶತಮಾನದ ಕೊನೆ) ಶ್ರೀಶೈಲ, ಉಜ್ಜನಿ, ಕೇದಾರ, ಬಾಳೆಹೊನ್ನೂರು, ಕಾಶಿಗಳಲ್ಲಿ ಪಂಚಾಚಾರ್ಯ ಮಠಗಳು ತಲೆಯೆತ್ತಿದವು.
(‘ಪಂಚಾಚಾರ್ಯರ ನಿಜ ಸ್ವರೂಪ ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)