ಈ ವರ್ಷದ ‘ಬಸವ ಪಂಚಮಿ’ ಕಾರ್ಯಕ್ರಮಗಳು ಶುರುವಾಗಿವೆ.
ಹಗರಿಬೊಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮದ ಪಾಟೇಲ್ ಕೃಷ್ಣಮೂರ್ತಿ ರಾವ್ ಸ್ಮಾರಕ ಪ್ರೌಢಶಾಲೆಯಲ್ಲಿ ‘ಬಸವ ಪಂಚಮಿ’ಯ ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆ ಮತ್ತು ಎಂ. ಎಸ್. ಸ್ವರೂಪನಂದ ಕುಟುಂಬದ ನೇತೃತ್ವದಲ್ಲಿ ನಡೆಸಲಾಯಿತು.
ಪದವಿ ಕಾಲೇಜಿನ ಕನ್ನಡ ಪ್ರಧ್ಯಾಪಕರದ ಅಕ್ಕಿ ಬಸವೇಶರವರು ಬದುಕಿನಲ್ಲಿ ವೈಚಾರಿಕತೆಯ ಅಗತ್ಯತೆಯ ಕುರಿತು ಮಾತನಾಡಿದರು. ನಿವೃತ್ತ ಬ್ಯಾಂಕ್ ನೌಕರ ಗಣೇಶ ಹವಲ್ದಾರ ಹಾವಿನ ಸುತ್ತವಿರುವ ಮಿತ್ಯಗಳನ್ನು ವಿವರಗಳನ್ನು ವಿವರಿಸಿದರು.

ಮಾನವ ಬಂಧುತ್ವ ವೇದಿಕೆ ಹಗರಿಬೊಮ್ಮನಹಳ್ಳಿ ತಾಲೂಕಿನ ಸಂಚಾಲಕರರಾದ ವೀರಣ್ಣ ಬಸವ ಪಂಚಮಿ ಕಾರ್ಯಕ್ರಮ ಆಚರಿಸುವ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘಟನೆಯ ಕೊಟಗಿ ಮಲ್ಲಿಕಾರ್ಜುನ, ಬಾಚಿಗೊಂಡನಹಳ್ಳಿ ಹೊಸೂರ ಭರಮಲ್ಲಿಂಗಪ್ಪ ಮತ್ತು ಶಾಲಾ ಶಿಕ್ಷಕ/ಶಿಕ್ಷಕಿಯರು ಉಪಸ್ಥಿತಿಯಲ್ಲಿದ್ದರು.ಶಾಲೆಯ ಮುಖ್ಯಗುರುಗಳಾದ ಸುರೇಶ್‌ರವರು ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು.
