3 ವರ್ಷಕ್ಕೆ 200 ವಚನಗಳನ್ನು ಹೇಳುವ ವೈರಲ್ ಪುಟಾಣಿ ದಿತಿ ಶಿರಶ್ಯಾಡ

ಬಸವನ ಬಾಗೇವಾಡಿ

ಒಂದು ಪುಟ್ಟ ಹುಡಗಿ ವಿಶ್ವಗುರು ಬಸವಣ್ಣನವರ ‘ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ’ ವಚನವನ್ನು ಮುದ್ದಾಗಿ ತೊದಲು ನುಡಿಯಲ್ಲಿ ಹೇಳುತ್ತಾ ಅಭಿನಯಿಸುವ ವಿಡಿಯೋ ನೀವು ನೋಡಿರಬಹುದು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆ ಪುಟಾಣಿಯನ್ನು ಬಸವ ಮೀಡಿಯಾ ಹುಡುಕಲು ಶುರು ಮಾಡಿತು. ಮೂರು ದಿನಗಳ ಹುಡುಕಾಟದ ನಂತರ ಮೂರು ವರ್ಷದ ದಿತಿ ಶಿರಶ್ಯಾಡ ಬಸವನ ಬಾಗೇವಾಡಿಯಲ್ಲಿ ಪತ್ತೆಯಾಗಿದ್ದಾಳೆ.

ಈ ಅದ್ಬುತ ಪ್ರತಿಭೆ ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಶಿಕ್ಷಕ ಹನುಮಂತ ಶಿರಶ್ಯಾಡ, ಗೃಹಿಣಿ ಸರಸ್ವತಿ ಶಿರಶ್ಯಾಡ ದಂಪತಿಗಳ ಪುತ್ರಿ.

200 ಬಸವಾದಿ ಶರಣರ ವಚನಗಳನ್ನು ಅಭಿನಯದ ಮೂಲಕ ಹೇಳುತ್ತಾಳೆ. ನೂರಾರು ಗಾದೆ ಮಾತುಗಳನ್ನು ಹೇಳುತ್ತಾಳೆ. ಇವಾಗ ಸುಮಾರು 5000 ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ.

ಮಾನವತಾವಾದಿ, ದಾರ್ಶನಿಕ ಬಸವಣ್ಣ ಸೇರಿದಂತೆ ಅನೇಕ ಶರಣರ ವಚನಗಳನ್ನು ವಾಚಿಸುವುದಲ್ಲದೆ, ನಟನೆ ಮಾಡಿ ವಚನವನ್ನು ಎಲ್ಲೆಡೆ ಪಸರಿಸುತ್ತಿದ್ದಾಳೆ.

ದಿತಿ ವಚನ ವಾಚನ ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

ಈಗ ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋಗಳು ಜನವರಿ 19ರಂದು ಕೂಡಲ ಸಂಗಮದಲ್ಲಿ ನಡೆದ ವಚನ ಧ್ಯಾನ ಮಹಾಧ್ಯಾನ ಸಂಗಮ ಕಾರ್ಯಕ್ರಮದಲ್ಲಿ ರೆಕಾರ್ಡ್ ಆಗಿದ್ದು. ಇದನ್ನು ಕಂಡು ಅನೇಕರು ನಿಬ್ಬೆರಗಾಗಿದ್ದಾರೆ.

ತಂದೆ ಹನುಮಂತ, ತಾಯಿ ಸರಸ್ವತಿ ಇವರಿಬ್ಬರೂ ಸೇರಿ ದಿತಿಗೆ ವಚನಗಳನ್ನು ಕಲಿಸಿದ್ದಾರೆ. ದಿತಿ ಇಡೀ ನಾಡಿನ ಹೆಮ್ಮೆಯ ಪುತ್ರಿಯಾಗಿ ಬಸವ ನಾಡಿನ ಬೆಳಕಾಗಿ ಬೆಳಗಲಿ ಎಂದು ಅವಳ ವಚನ ವಾಚನ ಕೇಳಿದವರು ಆಶಿಸಿದ್ದಾರೆ.

ವಚನ ವಾಚನದ ಮೂಲಕ ಇಂದಿನ ಮಕ್ಕಳಿಗೆ ದಿತಿ ಮಾದರಿಯಾಗಿದ್ದು, ಪಾಲಕರು ಮಕ್ಕಳಿಗೆ ಏನು ಕಲಿಸಬೇಕು ಎನ್ನುವುದನ್ನು ಎಲ್ಲರೂ ಅವರಿಂದ ಕಲಿತುಕೊಳ್ಳಬೇಕು.

Share This Article
7 Comments
  • ಧನ್ಯವಾದಗಳು ಪುಟ್ಟಿಗೆ. ಅವಳ ಭವಿಷ್ಯ ಉಜ್ವಲವಾಗಲಿ.

  • ಬಸಪ್ಪ ಗುಮಗೇರಿ ನಿವೃತ್ತ ಪಿಎಸ್ಐ. ಸಾ:ಕೊಪ್ಪಳ says:

    ಹಿರಿಯರು ಹೇಳುತ್ತಾರೆ ಮೂರು ವರ್ಷಗಳ ಬುದ್ಧಿ ನೂರು ವರ್ಷಗಳವರೆಗೆ. ಪುಟ್ಟ ಪುಟಾಣಿಗೆ ತೊದಲು ನುಡಿ ಇದ್ದರೂ ಅದ್ಭುತವಾಗಿ ವಚನ ಪಠಣ ಅದ್ಭುತವಾಗಿ ಮೂಡಿಬಂದಿದೆ. ವಚನಗಳನ್ನು ಮನನ ಮಾಡಿಸಿದ ಪಾಲಕರಿಗೆ ಶರಣು ಶರಣಾರ್ಥಿಗಳು. ಪುಟ್ಟ ಬಾಲಕಿ ಭವಿಷ್ಯ ಉಜ್ವಲ ಆಗಲೆಂದು ಶುಭಾಶಯಗಳು.

      • ಇಷ್ಟು ಸಣ್ಣ ವಯಸ್ಸಿಗೆ ಎಂತಹ ಅದ್ಭುತವಾದ ಪ್ರತಿಭೆ ಈ ಹುಡುಗಿಗೆ ವಚನಗಳನ್ನು ತನ್ನ ಅಭಿನಯದ ಮೂಲಕ ತೊದಲು ನುಡಿಗಳಿಂದ ಅದೆಷ್ಟು ಚೆನ್ನಾಗಿ ಹೇಳುತ್ತಿದ್ದಾಳೆ ಅಪ್ಪ ಬಸವಣ್ಣನವರ ಆಶೀರ್ವಾದ ಅವಳ ಮೇಲೆ ಸದಾ ಇರಲಿ ಎಂದು ಆಶಿಸುತ್ತೇನೆ ಅವಳನ್ನು ಬೆಳೆಸಿದ ತಂದೆ ತಾಯಿಗೂ ಅನಂತ ಶರಣು ಶರಣಾರ್ಥಿಗಳು

  • ಅದ್ಭುತ ಪ್ರತಿಭೆ ಮುಂದೊಂದು ಜನ ಇಡೀ ಜಗತ್ತೇ ನಿನ್ನನ್ನು ಹೊಗಳಲ್ಲಿ ದಿತಿ

Leave a Reply

Your email address will not be published. Required fields are marked *