ವಿರತೀಶಾನಂದ ಶ್ರೀಗಳಿಂದ ವೈರಾಗ್ಯನಿಧಿ ಅಕ್ಕಮಹಾದೇವಿ ಪ್ರವಚನ

ಹುಕ್ಕೇರಿ

ತಾಲೂಕಿನ ಹೆಬ್ಬಾಳ ಗ್ರಾಮದ ಬಸವ ಭವನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಶರಣ‌ (ಶ್ರಾವಣ) ಮಾಸದ ನಿಮಿತ್ಯವಾಗಿ ಒಂದು ತಿಂಗಳ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ವೈರಾಗ್ಯನಿಧಿ ಅಕ್ಕಮಹಾದೇವಿ ಶರಣೆಯ ಕುರಿತಾಗಿ ಬಸವನಬಾಗೇವಾಡಿ ತಾಲ್ಲೂಕು, ಮನಗೂಳಿಯ ಬಸವ ಲಿಂಗಾಯತ ಮಠದ ಪೂಜ್ಯ ವಿರತೀಶಾನಂದ ಸ್ವಾಮೀಜಿ ಅವರಿಂದ ಪ್ರವಚನ ನಡೆಯಲಿದೆ.

ಜಗದ್ಗುರು ಸಿದ್ದಸಂಪಾದನ ಹುಣಸಿಕೊಳ್ಳಮಠ, ಯಮಕನಮರಡಿಯ
ಪೂಜ್ಯ ಸಿದ್ದಬಸವ ದೇವರು ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹೆಬ್ಬಾಳ ಬಸವ ಭವನದ ಕ್ರಿಯಾಮೂರ್ತಿಗಳಾದ ಪೂಜ್ಯ ಯೋಗಿನಾಥ ಶರಣರು ನೇತೃತ್ವ ವಹಿಸಲಿದ್ದಾರೆ.

ಜುಲೈ28 ರಿಂದ ಆಗಸ್ಟ್ 24, 2025 ರವರೆಗೆ ಪ್ರತಿನಿತ್ಯ ಸಾಯಂಕಾಲ 7:30 ರಿಂದ ನಡೆಯುವ ಪ್ರವಚನ ಕಾರ್ಯಕ್ರಮಕ್ಕೆ, ಹೆಬ್ಬಾಳ ಗ್ರಾಮದ ಹಾಗೂ ಸುತ್ತಲಿನ ಸಮಸ್ತ ಶರಣ ಬಂಧುಗಳು ಆಗಮಿಸಿ ನಿತ್ಯ ನಡೆಯುವ ಜ್ಞಾನದಾಸೋಹ ಮತ್ತು ಅನ್ನದಾಸೋಹದಲ್ಲಿ ಪಾಲ್ಗೊಳ್ಳಲು ಬಸವ ಶ್ರೀ ಕಮಿಟಿ ಹಾಗೂ ಅಕ್ಕನ ಬಳಗದವರು ವಿನಂತಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಬೆಳಗಾವಿ.