“ಸತ್ಯ ಏನೂಂತ ಬಿಜಾಪುರ ಬಾಗಲಕೋಟೆ ಜನಸಾಮಾನ್ಯರಿಗೆ ಗೊತ್ತು. ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಬಸವಣ್ಣನವರ ಅಂತ್ಯ ಹೇಗಾಯ್ತು ಅಂತ ಹೇಳ್ಕೊಂತಾ ಬಂದಾರೆ.”
ಬನಹಟ್ಟಿ
ಬಸವಣ್ಣನವರ ಮೇಲೆ ತಮ್ಮ ಹೇಳಿಕೆಯಿಂದ ಎದ್ದಿರುವ ವಿವಾದಕ್ಕೆ ವಿಷಾದ, ಕ್ಷಮೆ ಕೇಳುವುದಿಲ್ಲ ವಾಟ್ಸ್ ಆಪ್ ನಲ್ಲಿ ನಡೆಯೋ ಮಂಗ್ಯಾಟಕ್ಕೆ ತಾವು ಹೆದರುವ ಮಗ ಅಲ್ಲ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಶನಿವಾರ ಹೇಳಿದರು.
ಸೋಮವಾರ ಬೀದರಿನಲ್ಲಿ “ಬಸವಣ್ಣನವರಂತೆ ಹೊಳ್ಯಾಗ ಜಿಗೀರಿ” ಎಂದು ಭಾಷಣ ಮಾಡಿದ್ದ ಯತ್ನಾಳ್ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವಕ್ಫ್ ವಿರುದ್ಧದ ಹೋರಾಟಕ್ಕೆ ಪಟ್ಟಣಕ್ಕೆ ಆಗಮಿಸಿ ಸುದ್ದಿಘೋಷ್ಠಿ ನಡೆಸಿದ ಯತ್ನಾಳರಿಗೆ ಅವರ ವಿವಾದಿತ ಹೇಳಿಕೆಯ ಮೇಲೆಯೇ ಬಹುತೇಕ ಪ್ರಶ್ನೆಗಳು ಬಂದವು. ಭಾಷಣದ ಭರದಲ್ಲಿ ದುಡುಕಿ ಮಾತನಾಡಿದ್ರಾ ಎಂದು ಪತ್ರಕರ್ತರೊಬ್ಬರು ಕೇಳಿದಾಗ, ತಾವು ಭಾಷಣದ ಭರದಲ್ಲಿ ಬಾಯಿ ತಪ್ಪಿ ಮಾತನಾಡಿಲ್ಲ, ಸತ್ಯವನ್ನೇ ಹೇಳಿರುವುದಾಗಿ ಯತ್ನಾಳ ಹೇಳಿದರು.
“ಸತ್ಯ ಏನೂಂತ ಬಿಜಾಪುರ ಬಾಗಲಕೋಟೆ ಜನಸಾಮಾನ್ಯರಿಗೆ ಗೊತ್ತು. ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಬಸವಣ್ಣನವರ ಅಂತ್ಯ ಹೇಗಾಯ್ತು ಅಂತ ಹೇಳ್ಕೊಂತಾ ಬಂದಾರೆ,” ಎಂದು ಹೇಳಿದರು.
“ಇತಿಹಾಸಾನೆ ಹಂಗೈತಿ. ಕಮ್ಯುನಿಸ್ಟರು, ಕಾಮರೇಡುಗಳು ಏನು ಬೇಕಾದರೂ ಪುಸ್ತಕದಲ್ಲಿ ಬರ್ಕೊತಾರೆ, …ಬುದ್ದಿಜೀವಿಗಳು…ಸಾಹಿತಿಗಳು ಎಲ್ಲಾ paid ಗಿರಾಕಿಗಳು,” ಎಂದರು.
ಈ ವಿಷಯದ ಮೇಲೆ ಚರ್ಚೆ ನಡೆಯುತ್ತಿದೆ ಎಂದು ಒಪ್ಪಿಕೊಂಡರು. “ಬಸವಣ್ಣನವರ ಇತಿಹಾಸ ಏನೈತಿ. ಗಾಂಧಿನ ಯಾರು ಹೊಡೆದ್ರು, ಬುದ್ದನಿಗೆ ಏನಾಯ್ತು, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಯಾರು ಅಪಮಾನ ಮಾಡಿದ್ರು, ಈ ದೇಶದಲ್ಲಿ ಚರ್ಚೆ ಇದೆ, ಚರ್ಚೆಗೆ ಬರ್ತೀನಿ ಅಂದ್ರ ಬಾ ಅಂತ ಹೇಳ್ರಿ,” ಎಂದರು.
ಗಂಗಾ ಮಾತೆ ಪೀಠದವರಿಗೆ ನೈತಿಕ ಹಕ್ಕಿಲ್ಲ
ಬಸವ ಧರ್ಮ ಪೀಠದ ಪೂಜ್ಯ ಗಂಗಾ ಮಾತೆ ಯತ್ನಾಳರ ಹೇಳಿಕೆಯನ್ನು ಖಂಡಿಸಿದ್ದಾರೆ ಎಂದು ಪತ್ರಕರ್ತರೊಬ್ಬರು ಹೇಳಿದಾಗ, ಆ ಪೀಠದವರಿಗೆ ಬಸವಣ್ಣನವರ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕೂ ಇಲ್ಲ ಎಂದರು. ಬಸವಣ್ಣನವರ ವಚನಗಳನ್ನು ತಿದ್ದಿದ್ದು, ಕೂಡಲ ಸಂಗಮದೇವ ತೆಗೆದದ್ದು, ಬಸವಣ್ಣನವರ ವಿರುದ್ಧ ಮಾಡಿದ ಅಪರಾಧ ಎಂದರು.
ವಿಜಯ ಸಂಕೇಶ್ವರರ ವಿರುದ್ಧ ಮಾತೆ ಮಹಾದೇವಿ ಚುನಾವಣೆಯಲ್ಲಿ ನಿಂತು 10,000 ಮತ ತೆಗೆದುಕೊಂಡರು ಎಂದು ಹೇಳಿದರು.
‘ಮತಿಗೇಡಿ’ ಖರ್ಗೆ
ತಮ್ಮ ಹೇಳಿಕೆಯನ್ನು ಖಂಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆಯವರ ಮೇಲೂ ಯತ್ನಾಳ್ ವಾಗ್ದಾಳಿ ನಡೆಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ದಲಿತರು ಕಾಂಗ್ರೆಸನಲ್ಲಿ ಇರಬಾರದು ಅಂತ ಹೇಳಿದ್ದಾರೆ. ಅದಕ್ಕೆ ಖರ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ರಜಾಕರು ಮುಸ್ಲಿಮರು ಅಲ್ಲ ಅಂತ ಹೇಳಿದ್ದಾರೆ. ಅಂತ ಮತಿಗೇಡಿಗಳ ಬಗ್ಗೆ ನಾವೇನು ಮಾತಾಡೋದು ನಾವೇನು ಮಾತಾಡೋದು.
ಪೀರ್ ಭಾಷಾ ದರ್ಗಾ
ವಿಭೂತಿ ಹಚ್ಚಿಕೊಂಡವರೆಲ್ಲ ಬಸವಣ್ಣನವರಿಗೆ ಏನು ಮಾಡಿದ್ದಾರೆ ಅಂತ ಪ್ರಶ್ನಿಸಿದರು. ಅಲ್ಲಮಪ್ರಭುಗಳು ಕೂತ ಅನುಭವ ಮಂಟಪ ಈಗ ಪೀರ್ ಭಾಷಾ ದರ್ಗಾ ಆಗಿದೆ. ಅದರ ವಿರುದ್ಧ ಆಂದೋಲ ಶ್ರೀಗಳು ಹೋರಾಟ ಶುರು ಮಾಡ್ಯಾರ. ಅದಕ್ಕೆ ಅವರೆಲ್ಲಾರು ಬಂದು ಕೈ ಜೋಡಿಸಲಿ ಎಂದರು.
ಹೊಳ್ಳೊಳ್ಳೆ ಅದನ್ನ ಕೇಳಿದ್ರ….
ವಕ್ಫ್ ವಿಷಯದ ಮೇಲೆ ಮಾತನಾಡಲು ಜಿಲ್ಲೆಯಲ್ಲಿ ಮತ್ತೊಮ್ಮೆ ಯತ್ನಾಳರು ಮಾಧ್ಯಮಗಳನ್ನು ಭೇಟಿ ಮಾಡಿದರೂ ಅವರಿಗೆ ಮತ್ತೆ ವಿವಾದಿತ ಹೇಳಿಕೆಯ ಮೇಲೆ ಪ್ರಶ್ನೆಗಳು ಬಂದವು. ಬಸವಣ್ಣ ನದಿಗೆ ಹಾರಿದ್ರು ಅಂದಿದ್ದೇಕೆ ಎಂದು ಒಬ್ಬರು ಪ್ರಶ್ನೆ ಕೇಳಿದಾಗ ” ಹೊಳ್ಳೊಳ್ಳೆ ಅದನ್ನ ಕೇಳಿದ್ರ….” ಎಂದು ಸಿಟ್ಟಾದರು.
“ಆ ಇತಿಹಾಸ ನಮಗೆ ವಿಜಯಪುರ, ಬಾಗಲಕೋಟೆ ಜನರಿಗೆ ಗೊತ್ತಿದೆ…ನೀವು ನಿಮ್ಮ ಮನಿಗೆ ಹೋಗಿ ಕೇಳ್ರಿ. ಏನಾಗೈತಿ ಅಂತ…ಅದು ಬಿಟ್ಟು ಬರೀ ಬಸವಣ್ಣ ಬಸವಣ್ಣ ಅಂತೀರಿ…ನಾನೇ ಬಸವಣ್ಣ ಅದೇನಿ….” ಎಂದರು.
“ನಾವು ಬಸವಣ್ಣ ವಿಚಾರದವರು…ಬಸವಣ್ಣನನ್ನ ನಂಬಿದವರು…ದೇಶಕ್ಕೆ ಒಳ್ಳೆಯದಾಗತ್ತೆ ಅಂದ್ರೆ ಹೋಮ ಹವನ ಮಾಡೇ ಮಾಡ್ತೇವೆ…ನಾವು ಬಸವಣ್ಣನವರನ್ನೂ ಒಪ್ಪಿಕೊಂಡಿದ್ದೇವೆ…ಬಸವಣ್ಣನ ಹಾದಿಯಲ್ಲಿ ನಡೆಯುತ್ತಿದ್ದೇವೆ….” ಎಂದು ಹೇಳಿದರು.
ಬನಹಟ್ಟಿ ಸುದ್ದಿಘೋಷ್ಠಿಯಲ್ಲಿ ಹಾಜರಿದ್ದ ಪತ್ರಕರ್ತರೊಬ್ಬರು, “ಯತ್ನಾಳ್ ಕೇಳಿದ ಯಾವ ಪ್ರಶ್ನೆಗೂ ಉತ್ತರಿಸದೆ ಮನಸ್ಸಿಗೆ ತೋಚಿದ್ದು ಮಾತನಾಡಿದ್ರು. ಖರ್ಗೆ ಅವರು ಯತ್ನಾಳರಿಗೆ 6 ಪ್ರಶ್ನೆ ಕೇಳಿದ್ದಾರೆ. ಅವುಗಳಿಗೆ ಉತ್ತರಿಸದೆ ರಜಾಕಾರ ಬಗ್ಗೆ ಮಾತನಾಡಿದ್ರು. ಯಾವುದೋ ಒತ್ತಡದಲ್ಲಿ ಇದ್ದ ಹಾಗೆ ಕಾಣಿಸಿತು,” ಎಂದರು.
ನಮ್ಮ ಧರ್ಮದ ಪೀಠದ ಮೇಲೆ ಈ ರೀತಿ ಅಗೌರವ ತೋರುವ ಮಾತುಗಳು ಬಸವ ಪೀಠದ ಸಮಸ್ತ ಬಸವ ಅಭಿಮಾನಿಗಳ ಮೇಲೆ ಅಪಾರ ನೋವು ಉಂಟು ಮಾಡಿದೆ ನಮ್ಮ ಪೀಠದ ನೈತಿಕತೆ ಬಗ್ಗೆ ಮಾತಾಡೋ ನೈತಿಕತೆ ನಿಮಗೆ ಇಲ್ಲ ನೀವು ಇದೆ ರೀತಿ ನಮ್ಮ ಧರ್ಮದ ಮೇಲೆ ಅಗೌರವ ಮಾತುಗಳು ಹಾಡುತ್ತಾ ಇದ್ರೆ ಎಲ್ಲ ಬಸವ ಭಕ್ತರು ಒಗ್ಗಟ್ಟಾಗಿ ಹೋರಾಟ ನಡೆಸುತ್ತೇವೆ
ಈ ಗೂಗಲ್ ಮೀಟ್ ಅಗತ್ಯವಿತ್ತೂ ಆಯೋಜಕರಿಗೆ ಧನ್ಯವಾದಗಳು.
ದೀಪ ಆರುವ ಮುನ್ನ ಹೇಗೆ ಉರಿಯುತ್ತದೆ, ಹಾಗೆ ಬಸವನಗೌಡ ಪಾಟೀಲರಿಗೆ ವಿನಾಶಕಾಲ ಬಂದಿದೆ
ಅವರ ಅಭಿಮಾನಿಯಾಗಿದ್ದ ನಾವು ಇವರ ಹುಚ್ಚಾಟ ಕಂಡು ದೂರ ಉಳಿಯಲು ನಿರ್ಧರಿಸಿದ್ದೇವೆ
ದೀಪ ಆರುವ ಮುನ್ನ ಹೇಗೆ ಉರಿಯುತ್ತದೆ, ಹಾಗೆ ಬಸವನಗೌಡ ಪಾಟೀಲರಿಗೆ ವಿನಾಶಕಾಲ ಬಂದಿದೆ
ಅವರ ಅಭಿಮಾನಿಯಾಗಿದ್ದ ನಾವು ಇವರ ಹುಚ್ಚಾಟ ಕಂಡು ದೂರ ಉಳಿಯಲು ನಿರ್ಧರಿಸಿದ್ದೇವೆ
ರಾಜಕಾರಣಿ ತಾನೊಬ್ಬ ಬಸವಣ್ಣ ಎಂದು ಹೇಳುವಷ್ಟು ಮೂರ್ಖನಾಗಬಾರದು.
ಅಕ್ರಮವಾಗಿ ಬೇರೆ ಜಿಲ್ಲೆಯವರ ಜನರನ್ನ ಮತದಾರ ಮಾಡಿಸಿ ಗೆದ್ದ ವ್ಯಕ್ತಿ
ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಬಂಡತನ ಪ್ರದರ್ಶನ ಮಾಡುವ ಬಿ. ಪಾ. ಯತ್ನಾಳ ಅವರಿಗೆ ಬಸವಭಕ್ತರು ನಾವು ಪಾಠ ಕಲಿಸೇ ಕಲಿಸುತ್ತೇವೆ.
ರಾಜಕೀಯವಾಗಿ ವಾಜಪೇಯಿ ಜೊತೆ ಇದ್ದೆ ಎನ್ನುವ ವ್ಯಕ್ತಿಗೆ ವಾಜಪೇಯಿ ಅವರ ರಾಜಧರ್ಮ ಪಾಠವೇ ಗೊತ್ತಿಲ್ಲ
ಪುಢಾರಿಯಂತೆ ಮಾತನಾಡಿ ಜನ ತಿರುಗಿಬಿದ್ದಾಗ ವೇದಿಕೆ ಬಿಟ್ಟು ಓಡಿ ಹೋದ ಢರ್ಪುಕಲಾ
ನಾಲಿಗೆ ಮೆದುಳು ನಡುವೆ ಸಂಪರ್ಕ ಕಳೆದುಕೊಡ ಇವನಿಗೆ ಸತ್ಯ ಶರಣರ ಶಾಪ ತಟ್ಟಲಿದೆ
Anju maga alla. Huchnan maga,,
ಅಕ್ರಮವಾಗಿ ಬೇರೆ ಜಿಲ್ಲೆಯವರ ಜನರನ್ನ ಮತದಾರ ಮಾಡಿಸಿ ಗೆದ್ದ ವ್ಯಕ್ತಿ
ಬಸವಾದಿ ಶರಣರ ಕುರಿತು ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಮನಸಿಗೆ ಬಂದಂಗ ಮಾತಡಿದ್ರ, ವಾಚಾಳಿ ಅಂತರ, ಸ್ಯಾನ್ಯಾ ಅನ್ನಂಗಿಲ್ಲ.ಯತ್ನಾಳವರು ತಾವ್ ಅಂದದ ಇತಿಹಾಸ ಅಂತಾ ತಿಳಕೊಂಡರ ? ಬಾಯ್ಗಿ ಬಂದಂಗ ಶರಣರಿಗೆ ಮಾತಾಡೋದ ಬಿಟ್ಟು, ದಾರಿ ಹಿಡಿದು ಮಾತಾಡ್ರಿ
ನದಿಗೆ ಹಾರುವಷ್ಟು ಏಡಿಗಳಲ್ಲ ಬಸವಣ್ಣ ಮತ್ತು ಶರಣರು. ಶರಣರ ವಚನ ಅದ್ಯಯನವೇ ತಿಳಿದಿಲ್ಲ ಯತ್ನಾಳರಿಗೆ…ಒಂದು ವೇಳೆ ಯತ್ನಾಳರ ಮಾತನ್ನೆ ಕೇಳೋಣ. ಬಸವಣ್ಣನವರು ನದಿಗೆ ಹಾರಲು ಯಾರು ಕಾರಣ …..ಯಾಕೆ ತೊಂದರೆ ಕೊಟ್ಟರು ಅದನ್ನು ಹೇಳಲಿ……ಹಿಂದೂ ನಾವೆಲ್ಲಾ ಒಂದು ಎನ್ನುವವರು ಬಸವಣ್ಣನವರಿಗೆ ನದಿಗೆ ಹಾರುವಷ್ಟರ ಮಟ್ಟಿಗೆ ಕಿರುಕುಳ ಯಾಕ್ ಕೊಟ್ಟರು…ಬಸವಣ್ಣನವರು ಪಾಕಿಸ್ತಾನದವರೇ…ಅಮೇರಿಕ,ಜಪಾನ್,ಬಾಂಗ್ಲಾದೇಶ,ಅರಬ್ಬ್ ದೇಶದವರೇ….ಯಾಕ್ ತೊಂದರೆ ಕೊಟ್ಟರು ಅದನ್ನು ಹೇಳಲಿ
ವಿನಾಶ ಕಾಲೆ ವಿಪರೀತ ಬುದ್ಧಿ ಎಂಬಂತೆ ಯತ್ನಾಳರ ಪಾಪದ ಕೊಡ ತುಂಬಿದೆ ಅದಕ್ಕೆ ಹುಚ್ಚು ನಾಯಿ ಕಡಿದವರಂತೆ ಆಡುತ್ತಿದ್ದಾರೆ
ಶರಣರ ನೋವೆ ಲಿಂಗದ ನೋವು
ಕೊನೆಗೊಮ್ಮೆ ಕೊಂಡಿ ಮಂಚಣ್ಣನಿಗೆ ಹುಚ್ಚು ಹಿಡಿಯಿತಲ್ಲಾ
ಅಂಥಹ ಪರಿಸ್ಥಿತಿ ಇತನಿಗೂ ಬರುವುದು ದೂರವಿಲ್ಲ