ಹುಬ್ಬಳ್ಳಿ
ಸ್ಥಳೀಯ ಬಸವ ಕೇಂದ್ರದ ವತಿಯಿಂದ ಯಮಕನಮರಡಿ, ಹುಣಸಿಕೊಳ್ಳಮಠ, ಶ್ರೀ ಜಗದ್ಗುರು ಶೂನ್ಯ ಸಂಪಾದನಾ ಪೀಠದ ಪೂಜ್ಯ ಸಿದ್ಧಬಸವ ದೇವರು ಇವರಿಂದ ಹುಬ್ಬಳ್ಳಿ ನವೆಂಬರ್ 15ರಿಂದ ಡಿಸೆಂಬರ್ 17, 2025 ರವರೆಗೆ ಸಂಜೆ 6.30 ಗಂಟೆಯಿಂದ ‘ವಿಶ್ವ ಬಸವಧರ್ಮ ಪ್ರವಚನ’ ನಡೆಯಲಿದೆ.
ಗೋಕುಲ ರಸ್ತೆ, ಬಸವೇಶ್ವರ ನಗರದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಇಂದು ಸಂಜೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಭಾಗವಹಿಸಲಿದ್ದಾರೆ. ಪ್ರೊ. ಸಿದ್ದಣ್ಣ ಲಂಗೋಟಿ ಅನುಭಾವ ನೀಡಲಿದ್ದು, ಡಾ. ಕಲ್ಯಾಣಮ್ಮ ಲಂಗೋಟಿ ಉಪಸ್ಥಿತರಿರುವರು.
ಬಸವ ಕೇಂದ್ರದ ಕಾರ್ಯದರ್ಶಿ ಡಾ. ಪ್ರಕಾಶ ಮುನ್ನೋಳಿ, ಕಾರ್ಯಾಧ್ಯಕ್ಷ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಸರ್ವರಿಗೂ ಸ್ವಾಗತ ಕೋರಿದ್ದಾರೆ.
