ವಿಶ್ವವಾಣಿ: ಸಾಣೆಹಳ್ಳಿ ಶ್ರೀಗಳ ಕಹಿ ಗುಳಿಗೆಯನ್ನು ಅರಗಿಸಿಕೊಳ್ಳಿ

ವಿಶ್ವೇಶ್ವರ ಭಟ್ಟರೇ,

ಸಾಣೆಹಳ್ಳಿ ಶ್ರೀಗಳ ಆಲೋಚನೆ ನಿಮಗೆ ಗೊಡ್ಡು ಪುರಾಣ ಆಯಿತು. ಆದರೆ, ಲಾಗಾಯ್ತನಿಂದ ಆಚರಿಸಿಕೊಂಡು ಬರುತ್ತಿರುವ ಮೌಡ್ಯ ಹಾಗು ಗೊಡ್ಡು ಸಂಪ್ರದಾಯಗಳು ಜನರ ನಂಬುಗೆ ಶೃದ್ಧೆಯ ಹೆಸರಲ್ಲಿ ಸ್ಥಾಪಿತ ಮೌಲ್ಯವೆಂದು ಋಜುವಾತಪಡಿಸಲು ಹೊರಟ ನಿಮ್ಮ ಪ್ರಯತ್ನ ಯಾರಿಗೂ ತಿಳಿಯುವುದಿಲ್ಲ ಅಂತ ಭಾವಿಸಬೇಡಿ.

ಗಣಪತಿಯ ಕುರಿತು ಅವರು ಹೇಳಿದ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದಾದರೆ ದಿನಗಳಗಟ್ಟಲೆ ಬರೆದುದು ಯಾಕೆ? ಹೋಂವರ್ಕ್ ಮಾಡದ ಮಕ್ಕಳು ಶಾಲೆಯಲ್ಲಿ ಶಿಕ್ಷಕರಿಂದ ಬಡಿಯಿಸಿಕೊಂಡು, ನನಗೆ ಪೆಟ್ಟು ಬೀಳಲಿಲ್ಲ ಅಂತ ಹೇಳಿದ ಹಾಗಿದೆ.

ಹೀಗೆ ಹೇಳುವ ಅಧಿಕಾರವನ್ನು ಸ್ವಾಮಿಗಳಿಗೆ ಯಾರು ನೀಡಿದರು ಎಂಬ ನಿಮ್ಮ ಪ್ರಶ್ನೆಗೆ, ಶರಣ ಪರಂಪರೆಯ ಚಿಂತನೆಗಳ ಮೂಲಕ ಜನಜಾಗೃತಿಯ ಜವಾಬ್ದಾರಿಯನ್ನು ಶರಣ ಪರಂಪರೆಯ ಅನುಯಾಯಿಗಳು ನೀಡಿರುತ್ತಾರೆ, ಹೀಗಾಗಿ ಅದು ಸಮುದಾಯದ ಆದೇಶ. ಅದನ್ನು ಗುರುಗಳು ಪಾಲಿಸಬೇಕಾಗುತ್ತದೆ. ಇನ್ನು ಶರಣಧರ್ಮದ ಅಧ್ಯಯನ ಆಚರಣೆ ಸಾಮಾನ್ಯ ಜ್ಞಾನವೂ ಇಲ್ಲದೆ ಷರಾ ಬರೆಯುವ ಅಧಿಕಾರವನ್ನು ನಿಮಗೆ ಯಾರು ನೀಡಿದರು? ಎಂಬುದನ್ನು ನೀವೂ ಹೇಳಬೇಕಾಗುತ್ತದೆ.

ಕೊನೆಗೆ ಚಿತ್ರದುರ್ಗದಲ್ಲಿ ಹೇಳಿದರೆನ್ನಲಾದ ಅಪ್ರಭುದ್ಧ ಸ್ವಾಮಿಯೋರ್ವರ ಬಾಲಿಶ ಮಾತುಗಳು ನಿಮಗೆ ಆಪ್ಯಾಯಮಾನ ಎನಿಸುತ್ತವೆ. ಅದನ್ನು ಉದಾಹರಿಸುವ ಮೂಲಕ ನಮ್ಮ ಬೆರಳನ್ನೇ ನಮ್ಮ ಕಣ್ಣಲ್ಲಿ ಚುಚ್ಚುವ ದೂರ್ತತನದ ಜಾಣ್ಮೆಯನ್ನು ಸಂಧರ್ಭೋಚಿತವಾಗಿ ಬಳಸಿಕೊಳ್ಳುವ ನಿಮ್ಮ ರೀತಿಯನ್ನು ಗಮನಿಸಿದಾಗ, ಗುಣ ಸ್ವಭಾವಗಳು ವಂಶವಾಹಿನಿಗಳಲ್ಲಿ ಉಳಿದುಕೊಂಡು ಬಂದಿರುತ್ತವೆ ಎಂಬ ಮಾತನ್ನು ನಂಬುವಂತಾಗುತ್ತದೆ.

ಸಾಣೆಹಳ್ಳಿ ಶ್ರೀಗಳು ಹೇಳುವ ತಾತ್ವಿಕ ಸತ್ಯಗಳು ಉದ್ಧಟತನ ಉಪದ್ಯಾಪಿಯಾಗಿ ನಿಮಗೆ ಕಂಡಿರಬಹುದು. ನೀವು ಮೂಲಭೂತವಾದಿಗಳು, ಅದು ಅಧರಕ್ಕೆ ಕಹಿ, ಉದರಕ್ಕೆ ಸಿಹಿಯಾಗಿದೆ. ಕಾರಣ ಸತ್ಯ ಕಹಿ ಎನಿಸುತ್ತದೆ. ಆದರೆ ನೀವು ಹೇಳುವ ಹಸಿಸುಳ್ಳುಗಳು ಆಕರ್ಷಕ ಸಿಹಿಯಾಗಿರುತ್ತವೆ ಗೋಕಾಕದ ಕರದಂಟಿನಂತೆ. ಯಾಕೆಂದರೆ ಸುಳ್ಳಿಗೆ ಅಲಂಕಾರ ಇರುತ್ತದೆ, ಮಸಾಲೆ ಬಿದ್ದಿರುತ್ತೆ. ಅದು ತತ್ವನಿಷ್ಟರ ಆಚಾರನಿಷ್ಠರ ಸತ್ಯಪ್ರಿಯರ ಮನಸ್ಸಿಗೆ ನೋವುಂಟು ಮಾಡುತ್ತದೆ ಎಂಬುದನ್ನು ನೆನಪಿಸಬಯಸುತ್ತೇವೆ.

ಲಿಂಗಾಯತ ಕುರಿತಾದ ಹೇಳಿಕೆಗಳನ್ನು ಲಿಂಗಾಯತರೇ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತ, ಲಿಂಗಾಯತೇತರಾದ ನೀವು ಅಂಕಣ ಬರೆಯುವ ಅಗತ್ಯವೇನಿತ್ತು?

ಒಟ್ಟಾರೆ ಬರಹವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಾಣೇಹಳ್ಳಿ ಶ್ರೀಗಳ ಕಹಿ ಗುಳಿಗೆ ನಿಮ್ಮ ಮೇಲೆ ಉತ್ತಮ ಪರಿಣಾಮ ಬೀರಿದೆ ಎನಿಸುತ್ತದೆ.

Share This Article
7 Comments
  • ಪೂಜ್ಯ ಹಂದಿಗುಂದ ಶ್ರೀಗಳು ವಿಶ್ವೇಶ್ವರ ಭಟ್ಟರಿಗೆ ನೀಡಿದ ಉತ್ತರವನ್ನು ಜಾಗತಿಕ ಲಿಂಗಾಯತ ಸಭೆ ಬಾಗಲಕೋಟ ಜಿಲ್ಲೆ ಅನುಮೋದಿಸುತ್ತದೆ ಹಾಗೂ ಬಾಗಲಕೋಟ ಜಿಲ್ಲಾ ಘಟಕದ ಅಧಿಕೃತ ಪ್ರತಿಕ್ರಿಯೆ ಎಂದು ಪರಿಗಣಿಸುತ್ತೇವೆ.

    ಸಾಣೆಹಳ್ಳಿ ಅಪ್ಪಗಳ ಚಿಂತನೆಗಳನ್ನು ಪಚಿಸಿಕೊಳ್ಳದ ಇಂತಹ ಮನಸ್ಥಿತಿಯವರೇ 12ನೆಯ ಶತಮಾನದಲ್ಲಿ ವಚನಸಾಹಿತ್ಯದ ಮೇಲೆ ದಾಳಿ ನಡೆಸಿದ್ದು… ಕಲಬುರ್ಗಿ ಗೌರಿಯಂತಹವರ ಕೊಲೆಗೆ ಪ್ರಚೋದನಕಾರಿಯಾಗುವಂತೆ ಮಾಧ್ಯಮಗಳ ಮೂಲಕ ಪ್ರಚಾರ ನೀಡಿದ್ದು.

    ಹಿಂದೊಮ್ಮೆ ನಮ್ಮ ವಚನಾನಂದರು ತಮ್ಮ “ಸ್ಫೂರ್ತಿ… ” ಪುಸ್ತಕವನ್ನು ಈ ಭಟ್ಟರಿಗೆ ಅರ್ಪಿಸಿದ್ದರು. ಆ ಋಣದ ಭಾರ ತೀರಿಸಲು ವಚನಾನಂದರ ಬೆನ್ನಿಗೆ ನಿಲ್ಲುತ್ತಿರುವಂತೆ ನಾಟಕವಾಡುತ್ತಿದ್ದಾರೆ. ಮತ್ತು ವಚನಾನಂದರು ತಮ್ಮನ್ನು ತಾವು ತಿದ್ದಿಕೊಳ್ಳದೇ ಶಾಶ್ವತವಾಗಿ ಬಸವವಿರೋಧಿಯಾಗಿರುವಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿದ್ದಾರೆ ಎಂಬ ವೈದಿಕರ ಹುನ್ನಾರಗಳನ್ನು ಬಸವಾನುಯಾಯಿಗಳು ಅರಿತಿದ್ದಾರೆ ಎಂಬ ಸತ್ಯವನ್ನು ಭಟ್ಟರು ಅರಿಯುವುದು ಅವರಿಗೇ ಒಳಿತು.
    ಹಂದಿಗುಂದ ಅಪ್ಪಗಳ ಬಸವಪರ ನಿಲುವಿಗೆ ಶರಣಾರ್ಥಿಗಳು.

    ಅಶೋಕ ಬ ಬರಗುಂಡಿ
    ಅಧ್ಯಕ್ಷ
    ಜಾ. ಲಿಂಗ. ಮ. ಬಾಗಲಕೋಟ

  • ಸತ್ವಯುತ ಪರಿಣಾಮಕಾರಿ ಪ್ರತ್ಯುತ್ತರ.
    ಶರಣು ಶರಣಾರ್ಥಿಗಳು ಸ್ವಾಮೀಜಿ.

    • ಬಟ್ಟರ ಪ್ರತ್ಯುತ್ತರ ನಿರೀಕ್ಷೆಯಲ್ಲಿ ಸಮಾಜ ಇದೆ.

  • ಪೂಜ್ಯ ಶಿವಾನಂದ ಸ್ವಾಮೀಜಿಯವರು ಸರಿಯಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ಭಟ್ಟರ ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಒಂದು ಧರ್ಮಕ್ಕೆ ಧಾರ್ಮಿಕ ಗುರುಗಳಿಗೆ ಅವಮಾನ ಮಾಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುವುದು ಜರೂರಿನ ಕೆಲಸ. ಲಿಂಗಾಯತ ಸಹೋದರ ಸಹೋದರಿಯರೇ ಜಾಗೃತರಾಗಿ.

  • ಈತನಿಗೆ ಬರೀ ಉತ್ತರ ಸಾಕು..
    ಆತನ ಕುಂಬಳಕಾಯಿ ಮುಖದ ಫೋಟೋ ಯಾಕೆ ಹಾಕ್ತೀರಿ

    • ಅಪ್ಯಾಯನ ಪ್ರಸಾದವಾದ ಕುಂಬಳಕಾಯಿಗೇಕೆ ಅಪಮಾನ ಮಾಡುತ್ತೀರಿ. ಉಗುಳಮಾರಿಯ ವ್ಯಕ್ತಿತ್ವದವನೀತ.

  • ಶ್ರೀ ಶಿವಾನಂದ ಸ್ವಾಮಿಗಳು ಸರಿಯಾಗಿ ಉತ್ತರ ನೀಡಿದ್ದಾರೆ. ಶ್ರೀಗಳಿಗೆ ಶರಣು ಶರಣಾರ್ಥಿ

Leave a Reply

Your email address will not be published. Required fields are marked *

ಪೂಜ್ಯರು ಹಂದಿಗುಂದ-ಆಡಿಯ ಶ್ರೀ ಸಿದ್ದೇಶ್ವರ ಮಠದ ಶ್ರೀಗಳು