(ವಿಶ್ವಗುರು ಬಸವಣ್ಣನವರ ಮೇಲೆ ವಿವಾದಾಸ್ಪದ ಹೇಳಿಕೆ ನೀಡಿರುವ ಬಸವನಗೌಡ ಪಾಟೀಲ ಯತ್ನಾಳ್ ಅವರಿಗೆ ಬಹಿರಂಗ ಪತ್ರ.)
ದಾವಣಗೆರೆ
ಮಾನ್ಯ ಬಿಜಾಪುರದ ಶಾಸಕರಾದ ಯತ್ನಾಳರೆ,
ನೀವು ವಾಕ್ಫ ಬೋರ್ಡ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಬಸವಣ್ಣನವರಂತೆ ಹೊಳಿಗೆ ಹಾರಿ ಎಂದು ಕರೆ ಕೊಟ್ಟಿದ್ದೀರಿ
ಬಸವಣ್ಣನವರು ಹೊಳೆಗೆ ಹಾರಿದರು ಎಂದು ನಿಮಗೆ ಅನಿಸಿದ್ದಾರೂ ಹೇಗೆ ಆ ಬಗ್ಗೆ ನಿಮ್ಮ ಬಳಿ ದಾಖಲೆ ಇದೆಯಾ?
ನಾಳೆಬಪ್ಪುದು ನಮಗಿಂದೇ ಬರಲಿ
ಇಂದು ಬಪ್ಪದು ನಮಗೀಗಲೇ ಬರಲಿ ಎಂದ ಬಸವಣ್ಣನವರು ಹೊಳೆಗೆ ಹಾರುವಷ್ಟು ದುರ್ಭಲರು ಅಂತ ನಿಮಗೆ ಹೇಗೆ ಅನಿಸಿತು ?
ಊರ ಮುನಿದು ನಮಗೇನು ಮಾಳ್ಪರು ಎಂದ ಬಸವಣ್ಣನವರು ಹೇಡಿ ಅಂತ ನಿಮ್ಮ ದುರ್ಬಲ ಮನಸ್ಸಿಗೆ ಅನಿಸಿದ್ದಾರೂ ಏಕೆ ?
ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ. ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ. ಕೇಳು, ಕೂಡಲಸಂಗಮದೇವಾ, ಮರಣವೆ ಮಹಾನವಮಿ.
ಹಾಳುಗೆಟ್ಟು ಹೋಡಿಹೋಗುವ ಹೇಡಿ ನಾನಲ್ಲ ಮರಣವೇ ಮಹಾನವಮಿ ಎಂದು ಗಟ್ಟಿದನಿಯಲ್ಲಿ ಸಾರಿದ ಬಸವಣ್ಣನವರು ಹೊಳೆಗೆ ಹಾರಿದರು ಎಂದ ನಿಮ್ಮ ನೀಚ ಬುದ್ದಿಗೆ ಬಂದದ್ದಾರೂ ಹೇಗೆ
ಬಸವನಗೌಡ ಪಾಟೀಲ್ ಯತ್ನಾಳರೇ ನೀವು ವೈಧಿಕರ ಮನುವಾದಿಗಳ ಗುಲಾಮಗಿರಿ ಮಾಡಿ ಅದು ನಿಮ್ಮ ಭೌಧ್ದಿಕ ದಿವಾಳಿತನಕ್ಕೆ ಸಾಕ್ಷಿ ಆದರೆ ಸ್ವಾಭಿಮಾನಿ ಲಿಂಗಾಯತ ಧರ್ಮದ ಜನರನ್ನು ಕೆಣಕಿ ನೀವು ತಪ್ಪು ಮಾಡಿದಿರಿ
ಬಸವಣ್ಣನವರ ದ್ರೋಹಿಯಾದ ಬಸವರಾಜ ಬೊಮ್ಮಾಯಿ ಅವರಿಗೆ ಬಸವಣ್ಣನವರ ಅನುಯಾಯಿಗಳು ಈಗಾಗಲೇ ಚನ್ನಾಗಿ ಪಾಠ ಕಲಿಸಿದ್ದಾರೆ ನಿಮಗೆ ಜನ ಪಾಠ ಕಲಿಸುವ ದಿನ ದೂರವಿಲ್ಲ
ಯತ್ನಾಳರೇ ಹರಕು ಬಾಯಿ ಹೊಲಸು ಬುದ್ಧಿಯನ್ನು ನಿಮ್ಮ ರಾಜಕೀಯದಲ್ಲಿ ಇಟ್ಟುಕೊಂಡಿದ್ದರೆ ಸಾಕಿತ್ತು. ಬಸವಣ್ಣನವರ ವಿಚಾರಕ್ಕೆ ಬರಬಾರದಿತ್ತು. ನೀವು ಬಂದಿದ್ದೀರಿ, ಆದರೆ ಬಸವಣ್ಣನವರ ವಿಚಾರಗಳಿಗೆ ವಿರೋಧಿಯಾಗಿ ಬಂದಿದ್ದೀರಿ ಇದರ ಪರಿಣಾಮ ಮುಂದಿನ ದಿನಗಳಲ್ಲಿ ನೀವು ಎದುರಿಸಬೇಕಾಗುತ್ತದೆ.
ಯತ್ನಾಳರೇ ಬಸವಣ್ಣನವರ ಬಗ್ಗೆ ಮಾತನಾಡುವಾಗ ಹಲ್ಲು ಬಿಗಿಹಿಡಿದು ಮಾತನಾಡದರೆ ನಿಮಗೇ ಕ್ಷೇಮ ಈಗಾಗಲೇ ಹಗುರಾಗಿ ಮಾತನಾಡಿದ ನೀವು ಬಹಿರಂಗ ಕ್ಷೆಮೆ ಕೊರದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ
ನಿಮ್ಮ ಹೇಳಿಕೆ ಬಸವಾಭಿಮಾನಿಗಳನ್ನು ಕೆರಳಿಸಿದೆ ಹಾಗಾಗಿ ಮುಂದಿನ ಪರಿಣಾಮ ಕೆಟ್ಟದಾಗಿರಬಾರದು ಎಂದರೆ ತಕ್ಷಣ ಬಹಿರಂಗ ಕ್ಷೆಮೆ ಕೇಳಬೇಕು ಎಂದು ಆಗ್ರಹಿಸುತ್ತೇನೆ
ವಿಶ್ವೇಶ್ವರಯ್ಯ ಬಿಎಂ ಹೆಮ್ಮನಬೇತೂರು
ಸೋಕಾಲ್ಡ್ ಲಿಂಗಾಯತ ಶಾಸಕ ಸಂಸದರು ಮಂತ್ರಿಗಳು,, ಇವರಿಗೆ ಲಿಂಗಾಯತ ಮತ್ತು ಬಸವಣ್ಣನವರು ರಾಜಕಾರಣ ಮಾಡಿ ಅಧಿಕಾರ ಹಿಡಿಯಲು ಒಂದು ಪ್ರಭಲ ಅಸ್ತ್ರ ಅಷ್ಟೇ,, ಅಧಿಕಾರಕ್ಕೆ ಬಂದ ನಂತರ ಅವರು ತಮ್ಮ ವ್ಯಾಪಾರ ವ್ಯವಹಾರವೇ, ಬೃಷ್ಠಾಚಾರ ಮುಖ್ಯ,, ಹಣ ಸಂಗ್ರಹಿಸುವ ಯಾವುದೇ ಕೆಲಸ ಮಾಡಲು ಹಿಂದೇಟು ಹಾಕುವುದಿಲ್ಲ, ಆಗ ತಮ್ಮ ಅಸ್ಮಿತೆ ಸ್ವಾಭಿಮಾನ ಏನು ಬೇಕಾದ್ರೂ ಮಾರಿಕೊಳ್ಳುವ ಹಂತಕ್ಕೂ ಹೋಗುವ ಬೇಕಾದಷ್ಟು ಉದಾಹರಣೆಗಳು ಇವೆ,,ಇವರ ಈ ನಿರಭಿಮಾನಿ ದೌರ್ಬಲ್ಯವನ್ನು ಸಮಯಕ್ಕೆ ತಕ್ಕಂತೆ ಇದೇ ಸಮುದಾಯವನ್ನು ಹತ್ತಿಕ್ಕಲು ಮನುವ್ಯಾದಿಗಳು ವ್ಯವಸ್ಥಿತವಾಗಿ ಬಳಸಿಕೊಂಡಿದ್ದಾರೆ,, ರಾಜಕೀಯ ಕೆಸರು ಅಂಟಿಸಿಕೊಳ್ಳದ ಅದೆಷ್ಟೋ ನಿಷ್ಠಾವಂತ ಬಸವಭಕ್ತರು ಶರಣ ಅನುಯಾಯಿಗಳು ಲಿಂಗಾಯತವನ್ನು ಜೀವಂತವಾಗಿ ಇಟ್ಟಿದ್ದಾರೆ,,ಈ ಬಣ್ಣಗೇಡಿ ರಾಜಕಾರಣಿಗಳನ್ನು ಜಾತಿ ಮುಲಾಜಿಲ್ಲದೆ ಮುಖದ ಮೇಲೆ ಹೇಳಿ ತಿರಸ್ಕರಿಸಿದಾಗ ಮಾತ್ರ ಅವರ ಗುಲಾಮಗಿರಿ ಹುಚ್ಚಾಟಗಳು ನಿಯಂತ್ರಣಕ್ಕೆ ಬರಬಹುದು,, ಹೀಗೆ ಬಿಟ್ಟರೆ ಲಿಂಗಾಯತವನ್ನು ಜಾತಿಗಳಿಂದ ಛಿದ್ರ ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡ ಬೃಷ್ಠಾಚಾರದಿಂದ ಆಸ್ತಿ ಮಾಡಿಕೊಂಡು,, ಸಮುದಾಯಗಳನ್ನು ಮತ್ತೊಮ್ಮೆ ಮನುವ್ಯಾದಿಗಳ ಕಾಲಬುಡದಲ್ಲಿ ಹಾಕುವರು ಸಂಶಯವೇ ಇಲ್ಲ
ಅರ್ಧ ಬೆಂದ ವಿಚಾರವಂತಿಕೆಯ ಯತ್ನಾಳರಿಗೆ ಶರಣರ ವಿಚಾರವಂತಿಕೆಯು ಸಂಪೂರ್ಣ ತಿಳಿಯಲು ಹೇಗೆ ಸಾಧ್ಯ? ಬಿಜೆಪಿಯ ಹಾಗು RSS ನಾಯಕರ ಓಲೈಕೆಯ ಹುಚ್ಚಿನಿಂದ ಏನೇನೋ ಮಾತನಾಡುವ ಇವರು ಬಸವಣ್ಣನವರ ಬಗ್ಗೆ ಏನೂ ಅರಿತಿದ್ದಾರೆ ? ಬಸವಣ್ಣನವರ ಬಗಾಗೆ ಬಾಯಿಗೆ ಬಂದಂಗೆ ಮತ್ತೋಮ್ಮೆ ಮಾತನಾಡಿದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾದಿತು
ನಿಜವನ್ನೆ ಹೇಳಿರುವಿರಿ