ಸಂಘಿಗಳನ್ನು ಖುಷಿ ಪಡಿಸಲು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೇಡಿ ಎಂದು ಬಿಂಬಿಸಿ ಯತ್ನಾಳ್ ಹೇಳಿಕೆ ಕೊಟ್ಟಿದ್ದಾರೆ.
ಬೀದರ್
ಬಸವನಗೌಡ ಯತ್ನಾಳ್ ಒಬ್ಬ ಜೋಕರ್, ಮಾನಸಿಕ ರೋಗಿ, ಅವರು ಮಾನಸಿಕ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಇಂದು ಮಧ್ಯಾಹ್ನ ನಗರದಲ್ಲಿ ಹೇಳಿದರು.
ವಿಶ್ವಗುರು ಬಸವಣ್ಣನವರ ಮೇಲೆ ಅತ್ಯಂತ ಲಘುವಾಗಿ, ಅವಹೇಳನಕಾರಿ ಹೇಳಿಕೆ ನೀಡಿರುವ ಯತ್ನಾಳರನ್ನು ವೈಯಕ್ತಿಕವಾಗಿ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಖಂಡಿಸುತ್ತೇನೆ ಎಂದು ವಿಶೇಷವಾಗಿ ಕರೆದಿದ್ದ ಸುದ್ದಿಘೋಷ್ಠಿಯಲ್ಲಿ ಹೇಳಿದರು.
ಸಂಘ ಪರಿವಾರದವರನ್ನು, ಸಂಘಿಗಳನ್ನು ಖುಷಿ ಪಡಿಸಲು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೇಡಿ ಎಂದು ಬಿಂಬಿಸಿ ಯತ್ನಾಳ್ ಹೇಳಿಕೆ ಕೊಟ್ಟಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸಮ ಸಮಾಜ ಕಟ್ಟಲು ಕ್ರಾಂತಿ ನಡೆಯಿತು. ಇಂದು ಅವರ ಇತಿಹಾಸ ತಿಳಿದುಕೊಳ್ಳಲು ಇಡೀ ಜಗತ್ತೇ ಆಸಕ್ತಿ ತೋರಿಸುತ್ತಿದೆ.
ಆದರೆ ಯತ್ನಾಳ್ ಅವರು ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವ ರೀತಿಯಲ್ಲಿ ನಾವು ಆರಾಧಿಸುವ ಬಸವಣ್ಣನವರ ಬಗ್ಗೆ ಮಾತನಾಡಿದ್ದಾರೆ. ಇದರಿಂದ ಜಗತ್ತಿನಾದ್ಯಂತ ಇರುವ ಬಸವ ಅನುಯಾಯಿಗಳಿಗೆ ಅತ್ಯಂತ ನೋವಾಗಿದೆ. ಇದರ ಫಲ ಮುಂದಿನ ದಿನಗಳಲ್ಲಿ ಬಸವ ಭಕ್ತರು ಅವರಿಗೆ ಕೊಡಲಿದ್ದಾರೆ, ಎಂದು ಎಚ್ಚರಿಸಿದರು.
ಬಸವಣ್ಣನವರ ಹೆಸರಿನಲ್ಲಿ ಮತ ಕೇಳುವ ಬಿಜೆಪಿ ಯತ್ನಾಳರು ಇಷ್ಟೊಂದು ಕೀಳು, ನೀಚ, ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದರೂ ಕೊಟ್ಟಿದ್ದರೂ ಅವರನ್ನು ಖಂಡಿಸುವ ಪ್ರಯತ್ನ ಮಾಡಿಲ್ಲ. ಮೌನಂ ಸಮ್ಮತಿ ಲಕ್ಷಣಂ ಎನ್ನುವ ರೀತಿಯಲ್ಲಿ ಪಕ್ಷ ಸುಮ್ಮನಿದೆ ಎಂದು ಹೇಳಿದರು.
ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ತಮ್ಮ ಪಕ್ಷದ ಆಂತರಿಕ ಕಲಹಗಳಿಗೆ ಯತ್ನಾಳ್ ಈ ರೀತಿ ನಾಟಕ ಮಾಡುತ್ತಿದ್ದಾರೆ. ಬಿಜೆಪಿಯ ಒಳ ಜಗಳದಿಂದಲೇ ವಕ್ಫ್ ವಿರುದ್ಧ ಹೋರಾಟ ಕೂಡ ನಡೆಯುತ್ತಿದೆ. ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳು ಆಗಲೇ ಹೇಳಿಕೆ ಕೊಟ್ಟಿದಾರೆ. RTCಯಲ್ಲಿ ಹೆಸರು ಬದಲಾಗಿದ್ದರೆ ಅದನ್ನು ಮತ್ತೆ ಹಿಂಪಡೆಯುವ ಆದೇಶ ಕೊಟ್ಟಿದ್ದಾರೆ. BJPಯವರು ತಮ್ಮ ಅವಧಿಯಲ್ಲಿ ಎಷ್ಟು ರೈತರು, ದೇವಾಲಯಗಳಿಗೆ ನೋಟೀಸ್ ಕೊಟ್ಟಿದ್ದರು ಎಂದು ಹೇಳಬೇಕು ಎಂದು ಆಗ್ರಹಿಸಿದರು.
ಅನುಭವ ಮಂಟಪಕ್ಕೆ ವಿರೋಧ
‘ಇಡೀ ಜಗತ್ತಿಗೆ ಪ್ರಥಮ ಬಾರಿಗೆ ಸಂಸತ್ತು, ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟು ಮಾನವ ಹಕ್ಕುಗಳ ಮಹತ್ವ ಸಾರಿದ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಮ್ಮ ಸರ್ಕಾರದಿಂದ ಅನುಭವ ಮಂಟಪ ನಿರ್ಮಿಸುತ್ತಿರುವುದು ಕೆಲವರಿಗೆ ಹಿಡಿಸುತ್ತಿಲ್ಲ. ಹೀಗಾಗಿ ಬಸವಕಲ್ಯಾಣದ ಪೀರ್ ಪಾಷಾ ದರ್ಗಾ ಇರುವ ಸ್ಥಳದಲ್ಲಿ ಅನುಭವ ಮಂಟಪ ಇತ್ತು ಎಂದು ಹೇಳಿ ವಿವಾದ ಸೃಷ್ಟಿಸಲಾಗುತ್ತಿದೆ’ ಎಂದು ಈಶ್ವರ ಬಿ. ಖಂಡ್ರೆ ಹೇಳಿದರು.
ಈಗಾಗಲೇ ಸಂಶೋಧಕರು ಸೇರಿದಂತೆ ಅನೇಕ ಜನ ಬಸವಕಲ್ಯಾಣದ ತ್ರಿಪುರಾಂತ ಕೆರೆಯ ದಡದಲ್ಲಿ ಅನುಭವ ಮಂಟಪದ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಹೇಳಿದ್ದಾರೆ. ಹೀಗಿರುವಾಗ ವಿವಾದ ಸೃಷ್ಟಿಸಿ ಹೋರಾಟ ಮಾಡಲು ಮುಂದಾಗಿರುವುದು ಸರಿಯಲ್ಲ. ಸಾಮರಸ್ಯ, ಸಹೋದರತ್ವ ಬಸವೇಶ್ವರರ ಸಂದೇಶಗಳು. ಈ ರೀತಿಯ ಹೋರಾಟಗಳಿಗೆ ಮಠಾಧೀಶರು, ಜನರು ಮನ್ನಣೆ ಕೊಡಬಾರದು ಎಂದು ಮನವಿ ಮಾಡಿದರು.
ಪೌರಾಡಳಿತ ಸಚಿವ ರಹೀಂ ಖಾನ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಕಾಂಗ್ರೆಸ್ ಮುಖಂಡ ಅರವಿಂದಕುಮಾರ ಅರಳಿ ಹಾಜರಿದ್ದರು.
ಸಮಾಜದಲ್ಲಿ ಶಾಂತಿ ಸಂತೋಷಗಳನ್ನು ಹೆಚ್ಚಿಸುವ ಮಾತುಗಳೇ ಬಾರದ ಆರ್ ಎಸ್ ಎಸ್…ಸಂಗಟನೆಯ ಸ್ನೇಹದ ಫಲ ನಾನು ಯಾರು,? ಹಾಗೂ ನಮ್ಮ ಧರ್ಮಗುರುಗಳನ್ನು ಹೇಗೆ ಪೂಜ್ಯ ಭಾವದಿಂದ ಸಂಭೋದಿಸಬೇಕೆಂಬ ಸಾಮಾನ್ಯ ಜ್ಞಾನ ವಿಲ್ಲದ ಯತ್ನಾಳ್… ತಮ್ಮ ಹೆಸರನ್ನು ಬದಲಿಸಿಕೊಳ್ಳಿ ಮೊದಲು.
ಎರಡು ಪಕ್ಷದವರು ಈ ತರಹದ ಹೇಳಿಕೆ ಕೊಡುತ್ತಿರುವದು ತಮ್ಮ ತಮ್ಮ ಸ್ವಾರ್ಥ ಸಲುವಾಗಿಯ ಹೊರತು ಲಿ೦ಗಾಯತ ಧರ್ಮದ ಹಿತದೃಷ್ಟಿಯಿಂದ ಅಲ್ಲ
12ನೆ ಶತಮಾನದ ಅನುಭವ ಮಂಟಪ ಎಲ್ಲಿತು ಅನೊದು ಯಾರಿಗೂ ಗೊತ್ತಿಲ್ಲ ಆದ್ರೆ ಕಲ್ಯಾಣ ದಲ್ಲಿಯ ಇರಬೇಕು ಆದರೆ ಕೆರೆಯ ದಡದಲ್ಲಿ ಹೆಗೆ 12ನೆ ಶತಮಾನದಲ್ಲಿ ಪಿರ ಪಾಶಾ ಕಲ್ಯಾಣ ದಲ್ಲಿ ಇದೆ ಇಲ್ಲ