ಹುಲಸೂರ
“ಬಸವಣ್ಣನವರ ಚರಿತ್ರೆ, ಸಿದ್ಧಾಂತ ಯತ್ನಾಳ ಅವರಿಗೆ ಸರಿಯಾಗಿ ಗೊತ್ತಿಲ್ಲದಿರುವುದು ವಿಷಾದನೀಯ ಸಂಗತಿ. ಬಸವಣ್ಣನವರ ಬಗ್ಗೆ ಅವರು ಆಡಿರುವ ಮಾತುಗಳು ಖಂಡನಾರ್ಹ. ಅವರ ವರ್ತನೆ ಮೂರ್ಖರ ರೀತಿಯಿದೆ’ ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕೆ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದರು.
‘12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರನ್ನು ಸಬಲೀಕರಣಗೊಳಿಸಿ ಅವರೂ ಶರಣ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಸವಣ್ಣನವರ ವಿರುದ್ದ ಹಗುರವಾಗಿ ಮಾತನಾಡುವ ಮೂಲಕ ಅವರಿಗಷ್ಟೇ ಅಲ್ಲ, ಮಹಿಳೆಯರಿಗೂ ಅಪಮಾನ ಮಾಡಿದ್ದಾರೆ. ಅವರು ಕೂಡಲೇ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.
ನೋಡು ನೋಡು ನೋಡು ಲಿಂಗವೆ….. ಬಸವ ಬಳ್ಳಿ ಹಬ್ಬಿದೆ ಜಗವೆಲ್ಲ.. ಜಗದಗಲ ಮುಗಿಲಾಗಲ ಮಿಗೆಯಗಳ ಪಾತಾಳ ದಿಂದತ್ತತ್ತ…ನಿಮ್ಮ ಶ್ರೀ ಮುಕುಟ.. ಜೈ ಶರಣು ಶರಣಾರ್ಥಿಗಳು,….