ಯತ್ನಾಳ್ ಪ್ರತಿಕೃತಿ ದಹಿಸಿ ಬಸವ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಚೆನ್ನಮ್ಮ ವೃತ್ತದಲ್ಲಿ ಯತ್ನಾಳ ಅವರ ಪ್ರತಿಕೃತಿಯನ್ನು ದಹಿಸಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಅದನ್ನು ತಡೆಯುವ ಪ್ರಯತ್ನ ಮಾಡಿದರು.

ಬೆಳಗಾವಿ

ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಪ್ರತಿಕೃತಿಯನ್ನು ದಹಿಸಿ ಬಸವ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದರು.

ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಕಾನೂನು ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಬೆಳಗಾವಿಯ ಸಮಸ್ತ ಲಿಂಗಾಯತ ಸಮಾಜ ಹಾಗೂ ಬಸವಪರ ಸಂಘ-ಸಂಸ್ಥೆಗಳು ಒತ್ತಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದವು.

ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಅವರಿಗೆ ಬರೆದ ಮನವಿ ಪತ್ರವನ್ನು‌ ಜಿಲ್ಲಾಧಿಕಾರಿಗೆ ಸಂಘಟನೆಗಳು ಸಲ್ಲಿಸಿದವು.

ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಯಿತು. ಹರಕು ಬಾಯಿ ಯತ್ನಾಳ್ಗೆ ಧಿಕ್ಕಾರ, ಬಸವಣ್ಣನವರಿಗೆ ಅವಮಾನಿಸಿದ ಯತ್ನಾಳ್ಗೆ ಧಿಕ್ಕಾರ, ಯತ್ನಾಳ್ ವಿರುದ್ಧ ಸರಕಾರ ಹಾಗೂ ಅವರ ಪಕ್ಷ ಸೂಕ್ತ ಕ್ರಮ ಜರುಗಿಸಬೇಕು ಎಂಬ ಘೋಷಣೆಗಳನ್ನು ಹಾಕಲಾಯಿತು.

ಚೆನ್ನಮ್ಮ ವೃತ್ತದಲ್ಲಿ ಯತ್ನಾಳ ಅವರ ಪ್ರತಿಕೃತಿಯನ್ನು ದಹಿಸಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ಅದನ್ನು ತಡೆಯುವ ಪ್ರಯತ್ನ ಮಾಡಿದರು. ಪ್ರತಿಭಟನಾಕಾರರು ಪಟ್ಟುಬಿಡದೇ ದಹಿಸಿದರು. ಪೊಲೀಸರು ಅದನ್ನು ನಂದಿಸಲು ಪ್ರಯತ್ನಿದರು. ಆ ಸಂದರ್ಭದಲ್ಲಿ ಕೆಲಹೊತ್ತು ನೂಕಾಟ-ತಳ್ಳಾಟದ ವಾತಾವರಣ ನಿರ್ಮಾಣಗೊಂಡಿತು.

ಬಸವಣ್ಣನವರು ಹೊಳೆಗೆ ಹಾರಿ ಪ್ರಾಣಬಿಟ್ಟರು ಎಂಬ ಆಧಾರರಹಿತ ಸುಳ್ಳನ್ನು ತಮ್ಮ ಭಾಷಣದಲ್ಲಿ ಬಳಸಿ, ಬಸವಣ್ಣನವರು ಓರ್ವ ಹೇಡಿಯಾಗಿದ್ದರು ಎನ್ನುವ ಅರ್ಥದಲ್ಲಿ ಮಾತನಾಡಿ ಗುರು ಬಸವಣ್ಣನವರಿಗೆ ಅಪಮಾನ ಎಸಗಿದ್ದಾರೆ. ಬಸವಣ್ಣನವರನ್ನು ಅವಮಾನ ಮಾಡಿರುವ ಬಸನಗೌಡ ಪಾಟೀಲ ಯತ್ನಾಳರಿಗೆ ಇನ್ನು ಮುಂದೆ ಪಕ್ಷ ಹಾಗೂ ಸರಕಾರದ ವತಿಯಿಂದ ಲಿಂಗಾಯತ ಕೋಟಾದಲ್ಲಿ ಯಾವುದೇ ಸೌಲಭ್ಯಗಳನ್ನು ನೀಡಬಾರದು ಹಾಗೂ ಅವರ ವಿರುದ್ಧ ಕಾನೂನು ಶಿಸ್ತು ಕ್ರಮ ಕೈಗೊಂಡು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಲಾಯಿತು.

ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಅವರನ್ನು ಇನ್ಮುಂದೆ ಲಿಂಗಾಯತ ಧರ್ಮದ ಶಾಸಕನೆಂದು ಕರೆಯಬಾರದು ಎಂದು ಯತ್ನಾಳ್ ವಿರುದ್ಧ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬೀದರ ಬಸವಧರ್ಮ ಪೀಠದ ಸತ್ಯಕ್ಕ ಮಾತಾಜಿ ತಿಳಿಸಿದರು.

ಲಿಂಗಾಯತ ಮುಖಂಡ ಶಂಕರ ಗುಡಾಸ್ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಲಿಂಗಾಯತ ಧರ್ಮದ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲ. ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಸರ್ಕಾರ ಘೋಷಿಸಿದೆ. ಅಂಥವರಿಗೆ ಅಪಮಾನ ಮಾಡಿದವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಶಂಕರ ಗುಡಾಸ, ಅಶೋಕ ಬೆಂಡಿಗೇರಿ, ಸತ್ಯಕ್ಕ ತಾಯಿ, ಕವಿತಾ ಅಕ್ಕ ಮತ್ತಿತರರು ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತ ಸಂಘಟನೆ, ರಾಷ್ಟ್ರೀಯ ಬಸವ ದಳ, ಜಾ.ಲಿಂ. ಮಹಾಸಭಾ ಮತ್ತಿತರ ಬಸವಪರ ಸಂಘಟನೆಗಳ ಮುಖಂಡರಾದ ಈರಣ್ಣ ದ್ಯೇಯಣ್ಣವರ, ಕೆ. ಶರಣಪ್ರಸಾದ, ಮಹಾಂತೇಶ ಹಂಪಣ್ಣವರ, ಸಂಗಮೇಶ ಅರಳಿ, ಸುರೇಶ ನರಗುಂದ, ರಮೇಶ ಕಳಸಣ್ಣವರ, ಪ್ರಭು ಪಾಟೀಲ, ಸುವರ್ಣ ಗುಡಾಸ, ಸುಜಾತ ಮತ್ತಿಕಟ್ಟಿ, ಅನುಸೂಯ ಬಶೆಟ್ಟಿ, ಮಹದೇವಿ ಅರಳಿ, ಸಂತೋಷ ಗುಡಾಸ, ಮಹಾಂತೇಶ ಗುಡಾಸ, ಸೂರ್ಯಕಾಂತ ಭಾವಿ, ಬಸವರಾಜ ರೊಟ್ಟಿ, ಅಶೋಕ ಮಳಗಲಿ, ವಿ. ಎಸ್. ಬೆಂಡಿಗೇರಿ, ಅನ್ನಪೂರ್ಣ ಮಳಗಲಿ ಹಾಗೂ ನೂರಾರು ಸದಸ್ಯರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

Share This Article
2 Comments
  • ನಾಗಪುರದ ಬಾಗಿಲಲ್ಲಿ ಚೌಕಿದಾರ,, ಲಿಂಗಾಯತಕ್ಕೆ ಶಾಪ ಇದ್ದಂತೆ,,,ಕೇವಲ ಇವನನ್ನು ಬಹಿಷ್ಕಾರ ಹಾಕಿದರೆ ಸಾಲದು ಇವನ ಹಿಂದೆ ಆಟ ಆಡಿಸುತ್ತಿರುವ ಆ ಇಬ್ಬರು ಗರ್ಭಗುಡಿಯ ಪ್ರಧಾನ ಅರ್ಚಕರಿಗೆ ಕಠಿಣ ಸಂದೇಶ ರವಾನೆ ಮಾಡಬೇಕು,,ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿಗೆ ಸರಿಯಾದ ಪಾಠ ಕಲಿಸುವೆವೆಂದು ಲಿಂಗಾಯತರು ಒಗ್ಗಟ್ಟಾಗಿ ಶಕ್ತಿ ಪ್ರದರ್ಶನ ಮಾಡದೇ ಇದ್ದರೆ,, ಬಸವಣ್ಣ ಶರಣರು ವಚನ ಸಾಹಿತ್ಯ ಎಲ್ಲವೂ ಕಾಲ್ಪನಿಕ ಕಥೆಗಳು ಎಂದು,,ಸುಡೋ ಲಿಂಗಾಯಿತರ ಮೂಲಕ ಹೇಳಿಸಿಬಿಡುವರು,, ಈಗಾಗಲೇ ಚಡ್ಡಿಯ ಒಂದು ಪಿಂಡ ದಿಲ್ಲಿಯಲ್ಲಿ ಕೇಂದ್ರ ಸಚಿವ ಲಿಂಗಾಯತ ಸೋಮಣ್ಣನ ಎದುರಿನಲ್ಲಿಯೇ ಭಾಷಣ ಮಾಡಿದರೂ ತುಟಿ ಬಿಚ್ಚದ ಚೌಕಿದಾರ ಮಂತ್ರಿ,,, ಅವರಿಗೆ ಲಿಂಗಾಯತರು ಇಷ್ಟೇ ಹಣೆಬರಹ ಅನ್ನುವ ಖಾತ್ರಿ ಆಗಿರಬೇಕು,, ಅದಕ್ಕೆ ಮುಂದಿನ ಹಂತದ ಆಟ ನಡೆದಿದೆ

Leave a Reply

Your email address will not be published. Required fields are marked *