ಯತ್ನಾಳ್ ಕ್ಷಮೆ ಕೇಳದಿದ್ದರೆ ಬಸವ ಸಂಘಟನೆಗಳಿಂದ ಮುಂದಿನ ಕ್ರಮ: ಬಸವರಾಜ ಧನ್ನೂರ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

“ಡಿಸೆಂಬರ್ 1ರಂದು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ಪುಣೆಯಲ್ಲಿ ನಡೆಯಲಿದ್ದು, ಅಲ್ಲಿ ಯತ್ನಾಳ್ ಅವರ ಅವಿವೇಕಿ ಹೇಳಿಕೆಯನ್ನು ಪ್ರಸ್ತಾಪಿಸುತ್ತೇನೆ.”

ಬೀದರ್

‘ಬಸವಣ್ಣನಂತೆ ಹೊಳ್ಯಾಗ ಜಿಗಿರಿ’ ಎಂದು ಹೇಳಿ ಬಸವ ಭಕ್ತರಿಗೆ ನೋವು ಉಂಟು ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಆಗ್ರಹಿಸಿದ್ದಾರೆ.

ಬಸವಣ್ಣನವರ ಬಗ್ಗೆ ಲಘುವಾಗಿ ಮಾತನಾಡಿರುವ ಯತ್ನಾಳ್ ಕ್ಷಮೆ ಕೇಳದಿದ್ದರೆ ಬೀದರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಸಭೆಯನ್ನು ಶೀಘ್ರ ಕರೆದು ಯತ್ನಾಳ ಅವರ ಹೇಳಿಕೆ ಬಗ್ಗೆ ಸೂಕ್ತ ತೀರ್ಮಾನಕ್ಕೆ ಬರಲಾಗುವುದೆಂದು ಧನ್ನೂರ ಬಸವ ಮೀಡಿಯಾಗೆ ತಿಳಿಸಿದರು.

“ಡಿಸೆಂಬರ್ 1ರಂದು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ಪುಣೆಯಲ್ಲಿ ನಡೆಯಲಿದ್ದು, ಅಲ್ಲಿ ಯತ್ನಾಳ್ ಅವರ ಅವಿವೇಕಿ ಹೇಳಿಕೆಯನ್ನು ಪ್ರಸ್ತಾಪಿಸುತ್ತೇನೆ. ಕಾರ್ಯಕಾರಿ ಸಮಿತಿ ಈ ಬಗ್ಗೆ ಏನು ಮಾಡಬೇಕೆಂಬ ತೀರ್ಮಾನಕ್ಕೆ ಬರಲಿದೆ,” ಎಂದು ಹೇಳಿದರು.

ಬಸವಣ್ಣನವರು ಮಾನವ ಕಲ್ಯಾಣಕ್ಕಾಗಿ ಕ್ರಾಂತಿ ಮಾಡಿದ್ದರು. ಅವರು ಹೊಳೆಯಲ್ಲಿ ಜಿಗಿದಿರಲಿಲ್ಲ. ಹಾಗೆ ಜಿಗಿದಿದ್ದರೆ ಯತ್ನಾಳ್ ಅವರ ತಂದೆ-ತಾಯಿ ಅವರಿಗೆ ಬಸವಣ್ಣನವರ ಹೆಸರು ಇಡುತ್ತಿರಲಿಲ್ಲ ಎಂದು ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.

ಬಸವಣ್ಣ ಕ್ರಾಂತಿಯೋಗಿ, ಧೀರ ಪ್ರವಾದಿ. 12ನೇ ಶತಮಾನದಲ್ಲಿ ಶತ ಶತಮಾನಗಳ ಮೌಢ್ಯ, ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ, ಸಮಾನತೆ ಸಮಾಜ ನಿರ್ಮಿಸಿದ್ದರು. ಅವರು ಜನ್ಮವೆತ್ತ ಜಿಲ್ಲೆಯಲ್ಲೇ ಜನಿಸಿದ ಯತ್ನಾಳರು ಜೋಶ್‍ನಲ್ಲಿ ಬಸವಣ್ಣನವರ ಕುರಿತು ತಪ್ಪು ಸಂದೇಶ ಹೋಗುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಇತಿಹಾಸ ಅರಿತು ಮಾತನಾಡಬೇಕು.

ಒಂದನ್ನಾಡಲು ಹೋಗಿ ಒಂಬತ್ತನ್ನಾಡುವ ಡಂಬಕರ ಮೆಚ್ಚ ನಮ್ಮ ಕೂಡಲಸಂಗಮದೇವ ಎಂದು ಬಸವಣ್ಣ ಹೇಳಿದ್ದಾರೆ. ಬಸವ ಧರ್ಮದವರೇ ಆದ ಯತ್ನಾಳ್ ಅವರಿಗೆ ನಾಲಿಗೆ ಹಿಡಿತ ತಪ್ಪಿದ, ಅರಿವಿಲ್ಲದ ಪುಡಾರಿಯಂತೆ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

Share This Article
9 Comments
  • ಆತನೊಬ್ಬ ಹುಚ್ವ ಅವನುಇತಿಹಾಸವೇ ಓದಿಲ್ಲ ಮತ್ತು ಬಸವಣ್ಣನವರ ಬಗ್ಗೆ ಅರಿವಿಲ್ಲದ ಬುದ್ದಿಗೇಡಿ ತನ್ನ ಸ್ವಾರ್ಥಕ್ಕಾಗಿ ಲಿಂಗಾಯತ ಸಮುದಾಯವನ್ನು ಬಲಿಕೊಡುತ್ತಿದ್ದಾನೆ.ಲಿಂಗಾಯತ ಯುವಕರು ಎಚ್ಚರಾಗಬೇಕು.

  • ಮುಖ್ಯ ಮಂತ್ರಿ ಮಾಡುವುದಾಗಿ ಬಹುಶಃ ಕಿವಿಗೆ ಹೂ ಇಟ್ಟಿದ್ದಾನೆ ಲಂಗೋಟಿ,,ಅವನು ಕೀ ಕೊಟ್ಟಂಗೆ ಕುಣಿತದ,, ಜನರು ಈತನನ್ನು ಕೇಳಬೇಕು ನಿನ್ನ ಹೆಸರೂ ಬಸವ ಅಂತ ಇದೆ,,ನಾರಾಯಣಪುರದ ಬಸವಸಾಗರದಲ್ಲಿ ನೀನು ಹಾರಿ ತೋರಿಸು,,ನಂತರ ನಾವೂ ಹಂಗೆ ಮಾಡ್ತೀವಿ,, ಅನ್ನಬೇಕು,, ತಿರುಗಿ ಆ ಕಡೆ ತಲಿ ಹಾಕಿ ಮಕ್ಕೋಳುದಿಲ್ಲ,, ಲಿಂಗಾಯತಕಂಟಿದ ಶಾಪ ಇಂಥವರು,, ಕಾಲಕಾಲಕ್ಕೆ ಇಂಥವರು ಹುಟ್ಟಿರತಾರೆ, ಸಹವಾಸ ದೋಷದಿಂದ ಸ್ವಯಂ ನಾಶ ಆಗುವರು

  • ಅವನೊಬ್ಬ ಹುಂಬ ಎಲ್ಲಿ ಹೇಗೆ ಮಾತನಾಡಬೇಕು ಅನ್ನೊದೇ ಗೊತ್ತಿಲ್ಲ. ನಾಲಿಗೆ ಮೇಲೆ ಹಿಡಿತ ಇಲ್ಲದ ಮನುಷ್ಯ. ಕೇಂದ್ರ ಸರ್ಕಾರದ ಮಾಜಿ ಮಂತ್ರಿ ಆದವನು.ಅವನೊಬ್ಬ ರಾಜಕೀಯ ಮುತ್ಸದ್ದಿ ಅಲ್ಲಾ ಹಾಗಾಗಿ ಹೇಗೆ ಬೇಕು ಹಾಗೆ ಮಾತನಾಡುತ್ತಾನೆ.

  • ಇಂಥವರನ್ನು ಲಿಂಗಾಯತ ಧಮಿ೯ಯನೆಂದು ಹೇಳುವುದೂ. ತಪ್ಪೇ ,ಹಾಗೆಯೆ ಬಸವಣ್ಣನವರ ಫೊಟೋ & ಹೆಸರನ್ನು ಬಳಸಿಕೊಂಡು ಸಮಾಜವನ್ನು ಸಂಘಟಿಸುತ್ತಿರುವ ಬಸವಜಯಮೃತ್ಯೂಂಜಯ ಶ್ರೀ ಗಳು ಈ ಬಗ್ಗೆ ಬಹಿರಂಗವಾಗಿ ಹೆಳಿಕೆ ಕೊಡಬೇಕು.

  • ರಾಜಕೀಯವಾಗಿ ಬಹಿಷ್ಕರಿಸುವ ನಿರ್ಣಯ ತೆಗೆದುಕೊಳ್ಳಬೇಕು.

  • ಜಾಗತಿಕ ಲಿಂಗಾಯತ ಮಹಾಸಭಾದ ಲಿಂಗಾಯತ ಮಠಾಧೀಶರ ಒಕ್ಕೂಟ ಅಧ್ಯಕ್ಷರು ಮಠಾಧೀಶರು ಯಾಕೆ ಬಸನಗೌಡ ಪಾಟೀಲರ ನಡೆಯನ್ನು ಖಂಡಿಸುತ್ತಿಲ್ಲ ನೀವೂಕೂಡ ಸನಾತನ ಸಂಸ್ತೃತಿ ಸೇರಿದವರೆ ನಿಮ್ಮಗಳ ದ್ವನಿ ಬಸವಣ್ಣನವರಿಗಾಗಿ ಅಗತ್ಯವಾದುದು

  • ಇವನು ಕುಂಕುಮಧಾರಿ ವಿಭೂತಿಯ ಮಹತ್ವ ಅರಿಯದ ನಾಲಾಯಕ ನಾಯಕ ಬಸವಣ್ಣನವರು ಅಣುಬವ ಮಂಟಪದ ಹರಿಕಾರ ಅಂತ ಮೋದಿ ಹೇಳಿರುವ ಮಾತು ಅರಿಯದ ಅಹಾಂಕಾರಿ ಇವನ ವರುದ್ದ ಜಾಗತಿಕ ಲಿಂಗಾಯತ ಮಹಾಸಭಾ ಶೀಗ್ರವಾಗಿ ಉಗ್ರಕ್ರಮ ತಗೆದುಕೊಂಡು ಇವನಿಗೆ ಲಿಂಗಾಯತರು ಚಿಮಾರಿಹಾಕಬೇಕು.

  • ಲಿಂಗಾಯತರಾದ ನಾವು ಅವನ ಅಹಂಕಾರವನ್ನು ಮುರಿಯಬೇಕು. ಅವನಿಗೆ ತಕ್ಕ ಬುದ್ಧಿ ಕಲಿಸಲು ಮುಂದಾಗಬೇಕು.

Leave a Reply

Your email address will not be published. Required fields are marked *