ಬೀದರ್
ಶಾಸಕ ಬಸವನ ಗೌಡ ಯತ್ನಾಳ್ ಬಸವಣ್ಣನವರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿದ್ದರೂ ಕ್ಷಮೆ ಕೇಳಲು ನಿರಾಕರಿಸಿದ್ದಾರೆ.
ಸರ್ವಜ್ಞನ 15ನೇ ಶತಮಾನದ ವಚನವಿಟ್ಟುಕೊಂಡು ಬಸವಣ್ಣನವರ ಯಾವುದೇ ಸಮಕಾಲೀನ ಆಧಾರವಿಲ್ಲದಿದ್ದರೂ ತಮ್ಮ ಮೊಂಡುವಾದ ಮುಂದುವರೆಸುತ್ತಿದ್ದಾರೆ.
ಶರಣ ಬಂಧುಗಳೇ, ಈಗ ನಾವು ಎಚ್ಛೆತ್ತುಕೊಳ್ಳದಿದ್ದರೆ ಬಸವಣ್ಣನವರ ಮೇಲೆ ಅವಹೇಳನಕಾರಿಯಾಗಿ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತದೆ. ಅದಕ್ಕೆ ಇದರ ವಿರುದ್ಧ ಉಗ್ರ ಆಂದೋಲನ ಹಮ್ಮಿಕೊಳ್ಳುವುದು ಆವಶ್ಯ, ಎಂದು ಬೀದರಿನ ಬಸವ ಮಂಟಪದ ಪೂಜ್ಯ ಸದ್ಗುರು ಸತ್ಯದೇವಿ ಮಾತಾಜಿ ಎಚ್ಚರಿಸಿದ್ದಾರೆ.