ಸವಣೂರು
ಯುವಾ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೆಲೆ ‘ವಚನ ದರ್ಶನ’ ಪುಸ್ತಕವನ್ನು ಸವಣೂರು ಪಟ್ಟಣದಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು. ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ‘ಮುಟ್ಟಿದ್ರೆ ತಟ್ಟಿಬಿಡ್ತೀವಿ’ ಎಂಬ ಬಹಿರಂಗ ಸಮಾವೇಶ ರಾಜ್ಯಾದ್ಯಂತ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
“ನಾವೆಲ್ಲ ಸೇರಿ ಕಾರ್ಗಿಲ್ ಗೆದ್ದಾಯ್ತು, ಇನ್ನೀಗ ಟಾರ್ಗೆಟ್ ಪಿಒಕೆ ಎಂಬ ಹೆಸರಿನಲ್ಲಿ ಬೈಕ್ ರ್ಯಾಲಿ ಮೂಲಕ ನಮ್ಮ ಸೈನಿಕರ ತ್ಯಾಗಕ್ಕೆ ಗೌರವವನ್ನು ಸಲ್ಲಿಸಲಾಗುವುದೆಂದು ಎಂದು ಹೇಳಿದರು. ಇದೆ ಸಂದರ್ಭದಲ್ಲಿ ‘ಮುಟ್ಟಿದ್ರೆ ತಟ್ಟಿಬಿಡ್ತೀವಿ’ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು, ಎಂದು ಕನ್ನಡ ಪ್ರಭ ವರದಿ ಮಾಡಿದೆ.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗದಗ ಶಿವಾನಂದ ಬೃಹನ್ಮಠದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ ವಚನ ದರ್ಶನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಆಂತರಿಕವಾಗಿ ಭಾರತವನ್ನು ಹಾಳು ಮಾಡುವ ಪ್ರಯೋಗಗಳು ಬಹಳ ನಡೆದಿವೆ. ಅದನ್ನು ಸರಿಪಡಿಸುವ ವಿಶೇಷ ಪ್ರಯತ್ನ ‘ವಚನ ದರ್ಶನ’ ಪುಸ್ತಕದಲ್ಲಿದೆಯೆಂದು, ಎಂದು ಸ್ವಾಮೀಜಿ ಹೇಳಿದರು.
ಇವನೊಬ್ಬ ಮೂರ್ಖ ಶಿಖಾಮಣಿಯಂತೆ ಮಾತನಾಡುತ್ತಿದ್ದಾನೆ. ಬೇರೆಯವರೂ ಅದನ್ನೇ ಮಾಡುತ್ತಾರೆ ಅಂತ ತಿಳಿದಿಲ್ಲವೋ ಅಥವಾ ಧಿಕಾರದ ಮದವೋ?