ಕಾಗಿನೆಲೆ ಕನಕಪೀಠದ ನಿರಂಜನಾನಂದ ಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆ.
ರೇವಣಸಿದ್ಧ ಸಂಪ್ರದಾಯದ ನಿಜವಾದ ವಾರಸುದಾರರು ಇವರು. ಕಾಗಿನೆಲೆ ಪೀಠದ ಉತ್ತುಂಗದಲ್ಲಿ, ‘ಜಗದ್ಗುರು ರೇವಣಸಿದ್ಧ ಪೀಠ’ ಎಂದು ಬರೆಯಿಸಿದ್ದಾರೆ. ಇವರು ಕುಂಕುಮ ಹಚ್ಚಿದರೂ ಪರವಾಗಿಲ್ಲ. ಬಸವ ಪ್ರಣೀತ ಲಿಂಗಾಯತ ಧರ್ಮದ ಪರವಾಗಿ ಇದ್ದಾರೆ. ಆದರೆ, ಐತಿಹಾಸಿಕ ರೇವಣಸಿದ್ಧರನ್ನು ಮೋಸದಿಂದ ರೇಣುಕಾರಾಧ್ಯರನ್ನಾಗಿ, ರೇಣುಕಾಚಾರ್ಯರನ್ನಾಗಿ ಪರಿವರ್ತಿಸಿದವರು ವೀರಶೈವ ಲಿಂಗಿಬ್ರಾಹ್ಮಣ ಸಂಪ್ರದಾಯದ, ಆಂಧ್ರ ಮೂಲದ ಆರಾಧ್ಯರು. ಮೊದಲು ಕಾಲ್ಪನಿಕ ಚತುರಾಚಾರ್ಯರು ನಂತರ ಪಂಚಾಚಾರ್ಯರನ್ನು ಸೃಷ್ಟಿಸಿದ ಕುಹಕಿ ಸ್ವಾರ್ಥಿ ಜಾತಿ ಜಂಗಮರು ಈ ಪಂಚಪೀಠಿಗಳು. ನಿರಂತರ ಅರಿವಿನ ಸಂಕೇತವಾದ ಜಂಗಮವನ್ನು ಜಾತಿಯನ್ನಾಗಿ ಮಾಡಿದ ಜಂಗಮದ್ರೋಹಿಗಳು ಮತ್ತು ಬಸವ ದ್ರೋಹಿಗಳು ಈ ಪಂಚಪೀಠಿಗಳು. ಅನಂತ ಜನ್ಮಗಳಲ್ಲಿ ರೌರವ ನರಕ ಪ್ರಾಪ್ತಿ ತಪ್ಪದು ಈ ಪಂಚಪೀಠಿಗಳಿಗೆ.
(ಕೃಪೆ: ಫೇಸ್ಬುಕ್/ ಶಿವಶರಣಪ್ಪ ಮದ್ದೋರು)