ಮನಸೂರೆಗೊಂಡ 1,122 ಗಾಯಕರ ‘ವಚನಗಾನ ವೈಭವ’ ಕಾರ್ಯಕ್ರಮ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಸಾಣೇಹಳ್ಳಿಯಲ್ಲೂ ಸಮೂಹ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಪಂಡಿತಾರಾಧ್ಯ ಶ್ರೀಗಳು ಘೋಷಿಸಿದರು.

ಬೆಂಗಳೂರು

ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ನಡೆದ ಸಮೂಹ ಗಾಯನ ಕಾರ್ಯಕ್ರಮ “ವಚನಗಾನ ವೈಭವ” ನಿರೀಕ್ಷೆಗೂ ಮೀರಿ ಪ್ರೇಕ್ಷಕರನ್ನು ಸೆಳೆಯಿತು.

ರಂಗಸಂಸ್ಥಾನದ ಅಧ್ಯಕ್ಷ ಬಂಡ್ಲಗೆರೆ ವಿಜಯಕುಮಾರ ಅವರ ನೇತೃತ್ವದಲ್ಲಿ ನಡೆದ ಎರಡು ಗಂಟೆಗಳ ಕಾಲದ ಕಾರ್ಯಕ್ರಮದಲ್ಲಿ ಸುಮಾರು 1,122 ಗಾಯಕರು ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಊರಲಿಂಗದೇವ ಮುಂತಾದ ಶರಣರ 11 ಕ್ಕೂ ಹೆಚ್ಚು ವಚನಗಳನ್ನು ಸಂಗೀತದೊಂದಿಗೆ ಸುಶ್ರಾವ್ಯವಾಗಿ ಹಾಡಲಾಯಿತು.

ಸಾನಿಧ್ಯ ವಹಿಸಿದ್ದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಗಾಯನವನ್ನು ಶ್ಲಾಘಿಸಿ ಸಾಣೇಹಳ್ಳಿಯಲ್ಲೂ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಘೋಷಿಸಿದರು. ಉತ್ತಮ ಜೀವನ ಸಂದೇಶಗಳನ್ನು ನೀಡುವ ವಚನ ಗಾಯನ ಆಯೋಜಿಸಿರುವುದು ಸಮಾಜದಲ್ಲಿ ಬದಲಾವಣೆ ತರುತ್ತದೆ, ಎಂದು ಹೇಳಿದರು.

ಶರಣರ ವಚನ, ದಾಸರ ಪದ್ಯ, ಕುವೆಂಪು ಕಾವ್ಯ ಒಳಗೊಂಡ ಸಮೂಹ ಗಾಯನ ಕಾರ್ಯಕ್ರಮವನ್ನು ವಿಧಾನಸೌಧದ ಎದುರಿಗೂ ನಡೆಸಬೇಕೆಂದು ಶ್ರೀ ಸಂತೋಷ ಗುರೂಜಿ ಹೇಳಿದರು. ಬಂಡ್ಲಗೆರೆ ವಿಜಯಕುಮಾರ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಮೂರು ತಿಂಗಳು ಕಾಲ ಗಾಯನ ತಯಾರಿಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮೇಘನಾ ಕುಮಾರ, ಕವಿತಾ ಎಸ್. ಮಧುಕುಮಾರ, ಸಂಸ್ಕೃತಿ, ಎಂ‌. ಮಂಜುಳ ಶಶಿಭೂಷಣ, ಮನೋಜ್ಞ, ಪ್ರಸೀದ, ರೋಹಿಣಿ, ವರ್ಣಿಕ ಉಡುಪ ಮುಖ್ಯ ಗಾಯಕರಾಗಿದ್ದರು.

ಪ್ರಭಾ ಇನಾಮದಾರ, ವರ್ಣಶ್ರೀ ಮುರೂರು, ರಕ್ಷಿತಾ ಮೇಘನಾ, ಸಂಸ್ಕೃತಿ, ರುಚಿತಾ, ನೇತ್ರಾವತಿ ಹನುಮಂತರಾಯಪ್ಪ, ರಾಮಚಂದ್ರ ವಿ, ಚಂದ್ರಕಲಾ, ವೀರೇಶಕುಮಾರ, ವಿಶ್ವನಾಥ ಜಿ, ಹೇಮಂತ್ ಸಮೂಹ ಗಾಯನದ ಕಾರ್ಯನಿರ್ವಾಹಕರಾಗಿದ್ದರು.

ಸುಮಾರು ಆರು ನೂರು ಜನ ಪ್ರೇಕ್ಷಕರು ಇದ್ದರು. ಪ್ರೇಕ್ಷರಿಂದ ತುಂಬಾ ಉತ್ತಮ ಪ್ರತಿಕ್ರಿಯೆ ಕೇಳಿಬಂತು ಎಂದು ಹೆಚ್.ಸಿ. ಉಮೇಶ ಹೇಳಿದರು.

ಮುಖ್ಯ ಅತಿಥಿಗಳಾಗಿ ಡಾ. ಶಂಕರ ಬಿದರಿ, ಡಾ. ಸಿ. ಸೋಮಶೇಖರ, ಲೀಲಾದೇವಿ ಪ್ರಸಾದ, ಎಸ್. ಷಡಕ್ಷರಿ, ಎಸ್.ಜಿ. ಸುಶೀಲಮ್ಮ, ಶ್ರೀರಾಮಚಂದ್ರ, ಟಿ. ತಿಮ್ಮೇಗೌಡ, ಜಾಣಗೆರೆ ವೆಂಕಟರಾಮಯ್ಯ, ಸಂಜೀವ ಕಡಗದ ಹಾಗೂ ವಿಶೇಷ ಆಹ್ವಾನಿತರು ಉಪಸ್ಥಿತರಿದ್ದರು.

ಬಸವ ವೇದಿಕೆ, ರಮಶ್ರೀ ಸಂಸ್ಥೆಗಳು, ಅಕ್ಕಮಹಾದೇವಿ ಸಮಿತಿ, ಸುಮಂಗಲಿ ಸೇವಾಶ್ರಮ, ಶೇಷಾದ್ರಿಪುರಂ ಶಿಕ್ಷಣ ದತ್ತಿ ಕಾಲೇಜುಗಳ ಬಸವ ಅಧ್ಯಯನ ಕೇಂದ್ರದ ಸಹ ಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಎಲ್ಲಾ ಗಾಯಕರು ಪ್ರಮಾಣಪತ್ರ, ಪ್ರಶಸ್ತಿ ಸ್ವೀಕರಿಸಿದರು.

Share This Article
2 Comments
  • ಇಂತಹ ಅದ್ಭುತ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಿದಕ್ಕಾಗಿ ಪೂಜ್ಯ ಸಾಣೇಹಳ್ಳಿ ಶ್ರೀಗಳಿಗೆ ಹೃತ್ಪೂರ್ವಕ ಅಭಿನಂದನೆಗಳು

    -ಕ್ರಿಯಾಮೂರ್ತಿ ಚಂದ್ರಮೌಳಿ ಏನ್. ಲಿಂಗಾಯತ
    ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ

  • ಪ್ರತಿ ಲಿಂಗಾಯತ ಧರ್ಮದ ಕಾರ್ಯಕ್ರಮದಲ್ಲಿ ವೀರಶೈವರು ಲಿಂಗಾಯತ ಧರ್ಮ ಒಂದು ಭಾಗವಾಗಿ ಇರಲಿ, ಲಿಂಗಾಯತ ಧರ್ಮದ ಮೇಲೆ ಸವಾರಿ ಬಿಡಲಿ.
    ಅನ್ನುವ ಸಂದೇಶ ಸಾರಬೇಕು.

Leave a Reply

Your email address will not be published. Required fields are marked *