ದಾವಣಗೆರೆ
ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಮಯ ಮುಗಿದು ಒಂದೇ ಅರ್ಜಿ ಬಂದಿರುವುದರಿಂದ ಮುಂದಿನ ಐದು ವರ್ಷಕ್ಕೆ ಅವಿರೋಧವಾಗಿ ನಾನೇ ಅಧ್ಯಕ್ಷ ಎಂದು ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಬುಧವಾರ ಹೇಳಿದರು.
“ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷನ ಕುರ್ಚಿ ಗಟ್ಟಿ ಇದೆ,” ಎಂದು ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೇಳಿದರು.
ಮೈಸೂರಿನ ಮುಡಾ ಹಗರಣ ಹೈಕೋರ್ಟ್ ಮುಟ್ಟಿದ್ದರೂ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಒಳ್ಳೆ ಆಡಳಿತ ಕೊಡುತ್ತಿದ್ದಾರೆ. ಅವರ ಅವಧಿ ಮುಗಿದ ಮೇಲೆ ಶಾಸಕರು ಯಾರನ್ನು ಆರಿಸುತ್ತಾರೋ ಅವರನ್ನು ಹೈಕಮಾಂಡ್ ಸಿಎಂ ಮಾಡಲಿದೆ. ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ, ಎಂದರು.