ಕೇರಳದ ಆಲಪ್ಪಿಯ ಬಳಿ ಬಸವಣ್ಣನವರ ಹೊಸ ಪುತ್ಥಳಿ ಅನಾವರಣ

ಬಸವ ಮೀಡಿಯಾ
ಬಸವ ಮೀಡಿಯಾ

ಆಲಪ್ಪಿ

ಕೇರಳದ ಬಸವ ಸಮಿತಿ ಮತ್ತು ವೀರಶೈವ ಶಾಖ ಸಮಾಜ ಅವರ ಸಹಯೋಗದಿಂದ ಆಲಪ್ಪಿ ಜಿಲ್ಲೆಯಲ್ಲಿ ಬಸವಣ್ಣನವರ ಹೊಸ ಪುತ್ಥಳಿ ಅನಾವರಣಗೊಂಡಿದೆ.

ಜಿಲ್ಲೆಯ ಚೆಂಗನೂರು ತಾಲೂಕಿನ ಮಜುಕ್ಕೇರ್ ಗ್ರಾಮದ ಖಾಸಗಿ ಭೂಮಿಯಿಂದರಲ್ಲಿ ಇತ್ತೀಚಿಗೆ ನಡೆದ ಸಣ್ಣ ಕಾರ್ಯಕ್ರಮದಲ್ಲಿ ಸ್ಥಳೀಯ ಬಸವ ಭಕ್ತರೆಲ್ಲಾ ಸೇರಿ ಪುತ್ಥಳಿಯನ್ನು ಸ್ಥಾಪಿಸಿದರು.

ಬಸವ ಸಮಿತಿಯ ಪ್ರಸನ್ನ ಕುಮಾರ್ ಅವರು ಸದ್ಯಕ್ಕೆ ಪುತ್ಥಳಿಯ ಸುತ್ತ ಒಂದು ಸಣ್ಣ ಉದ್ಯಾನ ನಿರ್ಮಿಸುವ ಕಾರ್ಯ ನಡೆದಿದೆ. ಅದು ಮುಗಿದ ನಂತರ ದೊಡ್ಡ ಕಾರ್ಯಕ್ರಮ ನಡೆಸಿ ಪುತ್ಥಳಿಯನ್ನು ಲೋಕಾರ್ಪಣೆ ಮಾಡುವುದು ಎಂದು ಹೇಳಿದರು.

ಕೇರಳದ ವಿವಿಧ ಜಿಲ್ಲೆಗಳಲ್ಲಿ 10 ಲಕ್ಷ ಬಸವ ಅನುಯಾಯಿಗಳಿದ್ದಾರೆ. ರಾಜ್ಯದಲ್ಲಿ ಒಟ್ಟು 5-6 ಬಸವ ಪುತ್ಥಳಿಗಳು ಸಿಗಬಹುದು ಎಂದರು. ಬಸವ ಅನುಯಾಯಿಗಳು ಇರುವೆಡೆಯೆಲ್ಲಾ ಪುತ್ಥಳಿ ಸ್ಥಾಪಿಸುವ ಕೆಲಸವಾಗಬೇಕು ಎಂದರು.

Share This Article
11 Comments
  • ಸಂತೋಷಪಡುವ ಸುದ್ದಿ. ಸಂಬಂಧಪಟ್ಟ ಎಲ್ಲಾ ಬಸವಾಭಿಮಾನಿಗಳಿಗೂ ಧನ್ಯವಾದಗಳು ಮತ್ತು ಶರಣು ಶರಣಾರ್ಥಿಗಳು 🌹🙏

    • ಶ್ರೀ ಗುರು ಬಸವಲಿಂಗಾಯ ನಮಃ ಬಸವ ಸಮಿತಿ ಕಾರ್ಯಗಳು ಕೇರಳ ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಪುನರುತ್ಥಾನಕ್ಕೆ ನಾಂದಿಯಾಗಿವೆ 🙏

  • ಬಸವ ಅಭಿಮಾನಿಗಳಿಗೆ ಶರಣು ಶರಣಾರ್ಥಿಗಳು ನೋಡಿ ತುಂಬಾ ಸಂತೋಷವಾಯಿತು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಬಸವದಿ ಶರಣರ ತತ್ವ ಪ್ರಚಾರ ಪ್ರಸಾರ ತಮ್ಮಿಂದ ಆಗಲಿ ಎಂದು ಹಾರೈಸುತ್ತೇನೆ ಮತ್ತೊಮ್ಮೆ ಬಸವ ಬಂಧುಗಳಿಗೆ ಶರಣು ಶರಣಾರ್ಥಿ

  • ಅತ್ಯಂತ ಸಂತಸದಾಯಕ ಘಟನೆ ಅನವರತ ಅಪ್ಪ ಬಸವನ ತತ್ವ ಪ್ರಚಾರ ನಡೆಯಲಿ ಎಂದು ಹಾರೈಸುವೆ

    • ಒಳ್ಳೆಯ ಕಾರ್ಯ ಎಲ್ಲಾ ಬಸವ ಅಭಿಮಾನಿಗಳಿಗೆ ಅಭಿನಂದನೆಗಳು ಬೀದರ್ ಜಿಲ್ಲೆಯ ಭಾಲ್ಕಿ ಗ್ರಾಮೀ ತಾಲೂಕಿನ ಸುನಿಲ್ ಕುಮಾರ್ ಹೊನ್ನಾಳಿ ಅವರಿಂದ ಎಲ್ಲಾ ಕೇರಳಬಸವ ಅಭಿಮಾನಿಗಳಿಗೆ ಅಭಿನಂದನೆಗಳು

  • ಆಲಪ್ಪಿಯಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪನೆ ಮಾಡಿರುವುದು ನಿಜಕ್ಕೂ ಸಂತೋಷದ ವಿಷಯ.ಆಲಪ್ಪಿಯಲ್ಲಿನ “ವಾಟರ್ ಬೋಟ್” ಗಳಲ್ಲಿ ಹೆಚ್ಚಾಗಿ ಮಾಂಸಹಾರವೇ ಬಳಕೆಯಲ್ಲಿದೆ. ಹಾಗಾಗಿ ನಮ್ಮಂತಹ ಲಿಂಗಾಯತರು ಅಥವಾ ಇತರೆ ಸಸ್ಯಹಾರಿಗಳು ಆಲಪ್ಪಿಗೆ ಹೋದರೆ ವಾಟರ್ ಬೋಟ್ ನಲ್ಲಿ ಒಂದು ದಿನ ತಂಗಬೇಕು ಎಂದರೆ ಮುಜುಗರವಾಗುತ್ತಿದೆ. ಹಾಗಾಗಿ ಆಲಪ್ಪಿಯಲ್ಲಿರುವ ಶರಣರು ಸಸ್ಯಹಾರಿಗಳಿಗಾಗಿ ಸಾಧ್ಯವಾದರೆ ಒಂದು ಪ್ರತ್ಯೇಕ “ವಾಟರ್ ಬೋಟ್” ಅನ್ನು ಗುತ್ತಿಗೆ ಪಡೆಯುವುದು ಅಥವಾ ರಿಸರ್ವ್ ಮಾಡುವುದು ಅಥವಾ ನಿಗದಿಪಡಿಸುವುದು ಅಥವಾ ಮತ್ತಿನ್ನಾವ ಮಾರ್ಗದಲ್ಲಿ ಆದರೂ ಸರಿ ಸಸ್ಯಹಾರಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ಆಲಪ್ಪಿಯ ಶರಣರಲ್ಲಿ ವಿನಂತಿ.

  • With the instalation of Basava Statue marks the sign of spreading Basava philosophy outside Karnataka

Leave a Reply

Your email address will not be published. Required fields are marked *