ಸಾಣೇಹಳ್ಳಿ
ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಕೃಷಿ ಇಲಾಖಾ ವತಿಯಿಂದ 2024-25ನೆಯ ಸಾಲಿನ ಆಹಾರ ಮತ್ತು ಪೌಷ್ಠಿಕ ಭದ್ರತೆ-ನ್ಯೂಟ್ರಿ ಸಿರಿಧಾನ್ಯಗಳ ಯೋಜನೆಯಡಿ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ಸಿರಿಧಾನ್ಯಗಳ ರೋಡ್‌ಶೋ ಕಾರ್ಯಕ್ರಮಗಳನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇವರ ಸಹಯೋಗದೊಂದಿಗೆ ಶ್ರೀಮಠದ ಆವರಣದಲ್ಲಿ ಪೂಜ್ಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳವರು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಸಾಣೇಹಳ್ಳಿಯ ಗ್ರಾಮದ ಬೀದಿಗಳಲ್ಲಿ ಸಿರಿಧಾನ್ಯಗಳ ಮಹತ್ವ ಮತ್ತು ಪ್ರಾಮುಖ್ಯತೆಯ ಬಗ್ಗೆ ಗ್ರಾಮಸ್ಥರಲ್ಲಿ ಸಾರ್ವಜನಿಕರಿಗೆ ನಾಗರೀಕರಿಗೆ ಸಿರಿಧಾನ್ಯಗಳ ಬಗ್ಗೆ ಹಾಗೂ ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸಿ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಿರಿಧಾನ್ಯಗಳು ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಂಡು ಅತೀ ಕಡಿಮೆ ಫಲವತ್ತತೆಯುಳ್ಳ ಭೂಮಿಯಲ್ಲಿ ಬೆಳೆಯಬಲ್ಲ ಉತ್ತಮ ಆಹಾರಧಾನ್ಯಗಳಾಗಿರುತ್ತವೆ ಎಂಬ ಮಾಹಿತಿ ನೀಡಲಾಯಿತು. ಸಿರಿಧಾನ್ಯಗಳು ಉತ್ತಮ ಫಲಿತಾಂಶ ಹೊಂದಿರುವುದರಿಂದ ಆರೋಗ್ಯಕ್ಕೆ ಉತ್ತಮ ಆಹಾರ ಧಾನ್ಯವಾಗಿರುತ್ತದೆ ಎನ್ನುವ ಮಾಹಿತಿಯನ್ನು ಕೃಷಿ ಇಲಾಖೆಯ ಸಹಾಯಕ ಕೃಷಿನಿರ್ದೇಶಕರಾದ ಸಿ.ಎಸ್. ಈಶರವರು ತಿಳಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಆತ್ಮಯೋಜನೆ ಹಾಗೂ ಇತರೆ ಸಿಬ್ಬಂದಿಗಳು ಮತ್ತು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಶಿಬಿರದ ನಾಯಕರಾದ ಡಾ. ರವಿಕುಮಾರ, ಡಾ. ಸುಮಂಗಲಾಮೇಟಿ, ರೇಖಾ ಚಿನ್ನಾಕರ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಯೋಗರಾಜ, ಸಂಘಟಕ ಮಲ್ಲೇಶಪ್ಪ, ರಾಜ್ಯದ 26 ಜಿಲ್ಲೆಗಳಿಂದ ಆಗಮಿಸಿದ ರೋವರ್ ಮತ್ತು ರೇಂಜರ್‌ಗಳು ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸಿದರು.