ತೇರದಾಳ
ಪಟ್ಟಣದ ಅಲ್ಲಮ ಪ್ರಭು ದೇವರ ದೇವಸ್ಥಾನದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಸೋಮವಾರ ಬಿಜೆಪಿ ಶಾಸಕ ಯತ್ನಾಳ್ ಸಾರ್ವಜನಿಕರಿಂದ ಪ್ರತಿರೋಧ ಎದುರಿಸಿ ಭಾಷಣ ಮೊಟಕುಗೊಳಿಸಿ ವೇದಿಕೆಯಿಂದ ಹಠಾತ್ತಾಗಿ ನಿರ್ಗಮಿಸಿದರು.
ಎರಡು ವಾರಗಳಿಂದ ನಡೆಯುತ್ತಿರುವ ದೇವಸ್ಥಾನದ ಲೋಕಾರ್ಪಣಾ ಕಾರ್ಯಕ್ರಮಗಳ ಕೊನೆಯ ಹಾಗೂ ಮುಖ್ಯ ದಿನವಾದ ಇಂದು ಯತ್ನಾಳ್ ಅವರು ಮುಖ್ಯ ಅತಿಥಿಗಳಾಗಿ ಬಂದಿದ್ದರು.
ವೇದಿಕೆಯಲ್ಲಿ ಭಾಷಣ ಶುರು ಮಾಡಿದ ಯತ್ನಾಳ್ ಅವರು ವಕ್ಫ್ ವಿಚಾರ ಪ್ರಸ್ತಾಪಿಸುತ್ತಿದಂತೆಯೇ ಮುಂದೆಯೇ ಕುಳಿತಿದ್ದ ಸಾರ್ವಜನಿಕರಲ್ಲಿ ಕೆಲವರು ಎದ್ದು ನಿಂತು ಧಾರ್ಮಿಕ ವೇದಿಕೆಯಲ್ಲಿ ರಾಜಕೀಯದ ವಿಷಯ ಎತ್ತಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಯತ್ನಾಳ್ ತಕ್ಷಣೆ ಸಿಟ್ಟಾದರೂ ಜನರ ಪ್ರತಿರೋಧ ಹೆಚ್ಚುತ್ತಿದಂತೆಯೇ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದರು.
ಮುಂದುಗಡೆಯೇ ಇದ್ದ ಕೇಸರಿ ಶಾಲು ಹೊದೆದಿದ್ದ ಬಿಜೆಪಿ ಕಾರ್ಯಕರ್ತರು ಮಧ್ಯ ಪ್ರವೇಶಿಸಲು ಯತ್ನಿಸಿದರೂ ಭಕ್ತರು ಶಮನವಾಗಲಿಲ್ಲ.
“ದೇವಸ್ಥಾನ ನಿರ್ಮಾಣಕ್ಕೆ ಎಲ್ಲ ಸಮುದಾಯವರು ದೇಣಿಗೆ ಕೊಟ್ಟಿದ್ದಾರೆ. ಮುಸ್ಲಿಮರು ಆರು ಲಕ್ಷ ರೂ.ದೇಣಿಗೆ ಕೊಟ್ಟಿದ್ದಾರೆ. ನಾವೆಲ್ಲಾ ಇಲ್ಲಿ ಅಣ್ಣ ತಮ್ಮಂದಿರ ಹಾಗೆ ಇದೀವಿ, ಇಲ್ಲಿ ರಾಜಕಾರಣ ಮಾಡಲು ಬರಬೇಡಿ,” ಎಂದು ನೆರೆದಿದ್ದ ಜನರು ಯತ್ನಾಳರನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ಇಂದಿನ ಕಾರ್ಯಕ್ರಮದಲ್ಲಿ ದೇಣಿಗೆ ಕೊಟ್ಟಿದ್ದ ಮುಸ್ಲಿಮರೂ ಸೇರಿದಂತೆ ಎಲ್ಲಾ ಸಮುದಾಯದವರನ್ನು ವೇದಿಕೆಯಲ್ಲಿ ಸನ್ಮಾನಿಸಸಲಾಗಿತ್ತು. ಅದರ ನಂತರ ಭಾಷಣಕ್ಕೆ ಬಂದ ಯತ್ನಾಳ್ ಕೋಮು ಪ್ರಚೋದನೆಗೆ ಪ್ರಯತ್ನಿಸಿದ್ದು ಸಾರ್ವಜನಿಕರನ್ನು ಕೆರಳಿಸಿತು.
ಭಾರಿ ಮಸ್ತ ಮಾಡ್ಯಾರಲ್ರಿ
ಇನ್ನೊಬ್ಬರ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಯಾರು ಮಾತನಾಡುತ್ತಾರೋ ಅಂಥವರಿಗೆಲ್ಲ ಹೀಗೆ ಮಾಡಬೇಕು.
ಮಾಡಿದ್ದುಣ್ಣೋ ಮಾರಾಯ
ಇದು ಶರಣ ಪರಂಪರೆ. ಸಕಲ ಜೀವಾತ್ಮರಿಗೆ ಲೇಸು ಬಯಸುವ ಬಸವಾದಿ ಅಲ್ಲಮಪ್ರಭುಗಳ ವೇದಿಕೆಯಿಂದ ಕೋಮುದ್ವೇಷ ಭಾಷಣ ಮಾಡುತ್ತಿರುವ ಯತ್ನಾಳ ರಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ ಶರಣಾಭಿಮಾನಿಗಳು.
It is a befitting response.
ತನ್ನಧಮ೯ಧ ಅಸ್ಮೀತೆಯನ್ನು ತಿಳಿಯದೆ ಮನೂವಾದಿಗಳ ಗುಲಾಮನಾಗಿ ವತಿ೯ಸುವ ಯತ್ನಾಳ್ ಗೌಡನಿಗೆ ಪ್ರಜ್ಞಾ ವಾಂತ ಲಿಂಗಾಯತರ ಪ್ರತಿಕ್ರೀಯೆ ಸರಿಯಾಗಿದೆ.
ಹೆಣ್ಣು ಹೊನ್ನು ಮಣ್ಣಿಗಾಗಿ ಸಾಯುವವರಲ್ಲಾ ಶರಣರು….ವಿಶ್ವ ಶಾಂತಿಗಾಗಿ ತಮ್ಮ ಪ್ರಾಣವನ್ನು ಬಲಿಧಾನವಾಗಿ ಅರ್ಪಣೆ ಮಾಡಿಕೊಂಡವರು ಶರಣರು…’ದಾರಿ ತಪ್ಪಿದ’ ಲಿಂಗಾಯತ ರಾಜಕಾರಣಿ…
ಸರಿಯಾದ ಪಾಠ ಕಲಿಸಿದ್ದಾರೆ….