ಧಾರವಾಡ
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥ ಭಂಡಾರದಲ್ಲಿರುವ 7 ಲಕ್ಷ ತಾಡೋಲೆ-ಗರಿಗಳ ಡಿಜಿಟಲೀಕರಣ ಪ್ರಕ್ರಿಯೆ ನವಂಬರ್ 11ರಿಂದ ಶುರುವಾಗಿದೆ.
ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಅವರು ತಾಡೋಲೆ ಸ್ಕ್ಯಾನಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು. ವಚನ ಸಾಹಿತ್ಯದೊಂದಿಗೆ ಎಲ್ಲಾ ರೀತಿಯ ಸಾಹಿತ್ಯವನ್ನು ಈ ತಾಳೆಗರಿಗಳು ಹೊಂದಿವೆ.
ಮೊದಲು ರಾಸಾಯನಿಕಗಳನ್ನು ಬಳಸಿ ತಾಡೋಲೆ-ಗರಿಗಳ ಸ್ವಚ್ಛ ಮಾಡಿ, ಗರಿಗಳ ಪುಟ ಸಂಖ್ಯೆಗಳನ್ನು ಕ್ರಮಬದ್ಧವಾಗಿ ಜೋಡಿಸಲಾಗುತ್ತೆ ನಂತರ ಸ್ಕ್ಯಾನಿಂಗ್ ಮಾಡಲಾಗುತ್ತೆ, ಇದೆಲ್ಲವು ಕನಿಷ್ಠ ಒಂದು ವರ್ಷದ ಕಾಲ ಮುಂದುವರೆಯುತ್ತೆ ಎಂದು ಡಿಜಿಟಲೀಕರಣವನ್ನು ನಿರ್ವಹಿಸುತ್ತಿರುವ ಅಶೋಕ ದೊಮ್ಮಲೂರು ಹೇಳಿದರು.
15-20 ಶರಣ ಧರ್ಮದ ಅನುಯಾಯಿಗಳು, ದೊಮ್ಮಲೂರು ಅವರ ತಂಡದ ಸದಸ್ಯರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಬಸವಾದಿ ಶರಣರ ವಚನಗಳನ್ನು ಹಾಡುತ್ತ ಹಸ್ತಪ್ರತಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಬಸವ ಕೇಂದ್ರ, ಬಸವ ದಳದ ಸದಸ್ಯರು, ಹುಬ್ಬಳ್ಳಿಯಿಂದ ಕೆಲವು ಆಸಕ್ತರು ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಹೆಚ್ಚು ಜನ ಬಂದು ಕಾರ್ಯದಲ್ಲಿ ತೊಡಗಿಸಿಕೊಂಡರೆ ಇನ್ನೂ ಬೇಗ ಈ ಕಾರ್ಯ ಮುಗಿಯುತ್ತದೆ ಎಂದು ಬಸವ ಕೇಂದ್ರದ ಬಿ.ಎಸ್. ತೋಟದ ಹೇಳಿದರು.
ವೀರಣ್ಣ ರಾಜೂರು, ಸಿದ್ಧರಾಮ ನಡಕಟ್ಟಿ, ಬಸವಂತ ತೋಟದ, ಆರ್.ಎಂ. ಹೊಸಮನಿ, ರಂಜಾನ್ ದರ್ಗಾ, ಅನಿಲ ಅಳ್ಳೊಳ್ಳಿ ಮತ್ತಿತರರ ಸಹಕಾರ ಈ ಕಾರ್ಯಕ್ಕೆ ಸಿಕ್ಕಿದೆ ಎಂದು ದೊಮ್ಮಲೂರು ಹೇಳಿದರು.
ಈ ಅಧ್ಭುತ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡ ತಾವುಗಳೆಲ್ಲಾ ಭಾಗ್ಯವಂತರು ಹಾಗೂ ಬಸವ ಹೃದಯಿಗಳು….ನಿಮ್ಮೆಲ್ಲರಿಗೆ ಬಸವ ಭಕ್ತರು ಪರವಾಗಿ ಶರಣು ಶರಣಾರ್ಥಿಗಳು..🙏🙏🙏🙏🙏
👍🙏
👏😍💐🙏
ನಿಮ್ಮ ಈ ಕಾರ್ಯಕ್ಕೆ ಅಭಿನಂದನೆಗಳು 🌹🙏