ಇಂಡೋನೇಷಿಯಾದ ಮಹೇಂದ್ರದತ್ತ ಯುನಿವರ್ಸಿಟಿಗೆ ಬಸವಾದಿ ಶರಣರ ವಚನಗಳನ್ನು ಹಾಗೂ ಬಸವಣ್ಣನವರ ಪುತ್ಥಳಿಯನ್ನು ಸಾಣೇಹಳ್ಳಿ ಶ್ರೀಗಳು ಹಸ್ತಾಂತರ ಮಾಡಿದರು
ಬಾಲಿ (ಇಂಡೋನೇಷ್ಯಾ)
ಬಸವಣ್ಣನವರದು ಕೇವಲ ಕರ್ನಾಟಕ, ಕಲ್ಯಾಣ, ಭಾರತಕ್ಕೆ ಸೀಮೀತವಾದ ವ್ಯಕ್ತಿತ್ವ ಅಲ್ಲ. ಅವರದು ವಿಶ್ವವ್ಯಾಪಿ ವ್ಯಕ್ತಿತ್ವ. ಅಂತಹ ವಿಶ್ವಗುರುವಿನ ಪ್ರತಿಮೆಯನ್ನು ಇಂಡೋನೇಷಿಯಾದ ಮಹೇಂದ್ರದತ್ತ ಯುನಿವರ್ಸಿಟಿಯಲ್ಲಿ ಪ್ರತಿಷ್ಠಾಪನೆ ಮಾಡಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಚನ ಸಂಸ್ಕೃತಿ ಯಾತ್ರಾ ಅಂಗವಾಗಿ ಇಂಡೋನೇಷಿಯಾದ ಮಹೇಂದ್ರದತ್ತ ಯುನಿವರ್ಸಿಟಿಯಲ್ಲಿ ನಡೆದ ಬಸವಾದಿ ಶರಣರ ವಚನಗಳು ಹಾಗೂ ಬಸವಣ್ಣನವರ ಪುತ್ಥಳಿ ಹಸ್ತಾಂತರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂಡೋನೇಷಿಯಾದ ಜನರ ಭಾಷೆ ಬೇರೆಯಾಗಿರಬಹುದು. ಆದರೆ ಭಾವನೆ ಬಸವಪರವಾಗಿವೆ. ಇಲ್ಲಿ ಜಾತೀಯತೆ, ಸಮಾನತೆ, ಕಾಯಕಪ್ರಜ್ಞೆ, ದಾಸೋಹ ಪದ್ಧತಿ, ಪ್ರಾಮಾಣಿಕತೆ ಎದ್ದು ಕಾಣುತ್ತಿದೆ. ನಿಜವಾದ ಬಸವತತ್ವ ಈ ದೇಶದಲ್ಲಿ ಆಚರಣೆಯಲ್ಲಿದೆ. ಆದರೆ ಬಸವಣ್ಣ ಯಾರು ಎಂದು ಗೊತ್ತಿಲ್ಲ. ಆದರೆ ಕರ್ನಾಟಕದಿಂದ ತಂದ ವಚನಗಳ ಕಟ್ಟು ಹಾಗೂ ಬಸವನ ಪುತ್ಥಳಿಯ ಬೀಜ ಈ ದೇಶದಲ್ಲಿ ಅಂಕುರವಾಗಿ ಹೆಮ್ಮರವಾಗಿ ಬೆಳೆದು ಎಲ್ಲರಿಗು ಫಲವನ್ನು ಕೊಡಬೇಕು ಎನ್ನುವುದು ನಮ್ಮ ಹಂಬಲ. ಆಗ ಬಸವಣ್ಣ ಯಾರೆಂಬುದು ಗೊತ್ತಾಗುವುದು.
ಈ ಸಂದರ್ಭದಲ್ಲಿ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ, ಇಸ್ರೋ ಮಾಜಿ ಅಧ್ಯಕ್ಷ ಕಿರಣಕುಮಾರ್, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ್ರು, ಸಾಹಿತಿ ರಂಜಾನ್ ದರ್ಗಾ, ಚಿಂತಕ ಸಿದ್ದು ಯಾಪಲಪರವಿ, ಬಸವ ಪ್ರತಿಷ್ಠಾನದ ಅಧ್ಯಕ್ಷ ಸುರೇಶ, ಇಂಡೋನೇಷಿಯಾದ ರಮೇಶ ಶಾಸ್ತ್ರಿ ಹಾಗೂ ಕಾಲೇಜಿನ ಆಡಳಿತಾಧಿಕಾರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ಭಾಗವಹಿಸಿದ್ದರು.
ಇಂಡೋನೇಷಿಯಾದ ಬಾಲಿಯ ವಿಶ್ವವಿದ್ಯಾಲಯದಲ್ಲಿ ಬಸವಣ್ಣನವರ ಪುತ್ಥಳಿ ಮತ್ತು ವಚನ ಸಾಹಿತ್ಯ ಪರಿಚಯಿಸಿರುವುದು ಒಂದು ಐತಿಹಾಸಿಕ ಘಟನೆ , ಗುರು ಬಸವಣ್ಣನವರ ವಿಚಾರಗಳು ಮತ್ತು ವಚನ ಸಾಹಿತ್ಯ ಜಗತ್ರಿನ ಎಲ್ಲಕಡೆ ಪಸರಿಸಲಿ , ಅಭಿನಂದನೆಗಳು
ವಿಶ್ವ ಗುರು ಬಸವಣ್ಣನವರ ವಚನಗಳು ಆ ದೇಶದ ಬಾಷೆ ಯಲ್ಲಿ ಅಲ್ಲಿ ಯ ಜನರಿಗೆ ಮುಟ್ಟಿಸಿದ ತಮ್ಮಗೆ ಶರಣುಗಳು
ಶರಣು
ನಿಜಕ್ಕೂ ಅನಂದ ತರುವ ವಿಷಯ ಬಸವ ಶಕ್ತಿ ಜಗದಗಲ ಹಬ್ಬಲಿ