ಬಸವಕಲ್ಯಾಣ
ಬಸವಕಲ್ಯಾಣದಲ್ಲಿ ನಡೆಯುತ್ತಿರುವ “ಅನುಭವ ಮಂಟಪ ಉತ್ಸವ”ದ ಪ್ರಸಾದ ಮಂಟಪಕ್ಕೆ ನಮ್ಮೆಲ್ಲರ ಅಣ್ಣ ವೀರಭದ್ರಪ್ಪಣ್ಣನವರ ಹೆಸರಿಟ್ಟು ಸ್ಮರಣೆ ಮಾಡಿದ್ದು ಆನಂದವೆನಿಸಿತು.
ನಿಜಶರಣರೂ ನಿಜಾಚರಣೆ ಶಿವಯೋಗಿಗಳು ನಿತ್ಯ ನಿಜೈಕ್ಯದ ಸಾಧಕರೂ ಆದ ವೀರಭದ್ರಪ್ಪಣ್ಣನವರಿಗೆ 12 ನೇ ಶತಮಾನದ ಶರಣರ ಸರಿಸಮಾನ ಗೌರವ ಸಲ್ಲಿಸಿದಂತಾಗಿದೆ.
ಅಪ್ಪ ಬಸವಣ್ಣನವರಂತೆ ; ಭಕ್ತಪ್ರೇಮಿ, ಭಕ್ತರಕ್ಷಕ, ಭಕ್ತನನ್ನು ಅಜರಾಮರವಾಗಿಸುವ ಕಾರ್ಯವನ್ನು ಮಾಡಿರುವ ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು ಮಾಡಿದ ಈ ಕಾರ್ಯ ಚಿರಕಾಲ ಸ್ಮರಣೆಯಲ್ಲಿ ಇರುವದು.
ವೀರಭದ್ರಪ್ಪಣ್ಣನವರು ಇಂತಹ ಗೌರವ ಸಂಪಾಸಿದ್ದಾರೆಂದರೆ ; ಅದು ನಿಜಶರಣತ್ವ, ನಿಜಾಚರಣೆ, ಶಿವಯೋಗ ಮತ್ತು ನಿತ್ಯ ನಿಜೈಕ್ಯದ ಪ್ರಭಾವವೇ ಆಗಿದೆ.