ಬಸವಕಲ್ಯಾಣ
ಈ ನಾಡಿನ ಸುಭಿಕ್ಷೆಗಾಗಿ ಇರುವ ಏಕೈಕ ಮಾರ್ಗವೆಂದರೆ ಶರಣ ಮಾರ್ಗ. ಮನುಕುಲದ ಒಳಿತಿಗಾಗಿ ಹುಟ್ಟಿಕೊಂಡಿದ್ದೇ ಶರಣ ಸಂಸ್ಕೃತಿ. ಇದಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಗಬೇಕು, ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಹೇಳಿದರು.
“ಬಸವ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಬೇಕು. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವೆ’ ಎಂದು ಹೇಳಿದರು.
ವಿಶ್ವಬಸವಧರ್ಮ ಟ್ರಸ್ಟ್ನಿಂದ ಅನುಭವ ಮಂಟಪದ ಪ್ರಾಂಗಣದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಬಸವ ಜಯಂತಿ ರಾಷ್ಟ್ರಮಟ್ಟದಲ್ಲಿ ಆಚರಿಸಬೇಕೆಂಬ ಬೇಡಿಕೆಗೆ ಖಂಡಿತವಾಗಿಯೂ ನನ್ನ ಸಹಮತವಿದೆ. ಈ ಸಂಬಂಧ ಪ್ರಧಾನಿ ಅವರಿಗೆ ಪತ್ರ ಬರೆದು ಚರ್ಚಿಸುವೆ, ಎಂದು ಆಶ್ವಾಸನೆ ನೀಡಿದರು.
‘