45ನೆಯ ಶರಣಕಮ್ಮಟ ಅನುಭವಮಂಟಪ ಉತ್ಸವದಲ್ಲಿ 4 ನಿರ್ಣಯ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಬಸವಕಲ್ಯಾಣದಲ್ಲಿ ನಡೆದ 45ನೆಯ ಶರಣಕಮ್ಮಟ ಅನುಭವಮಂಟಪ ಉತ್ಸವದಲ್ಲಿ ನಾಲ್ಕು ಒಮ್ಮತದ ನಿರ್ಣಯ ಗಳನ್ನು ಕೈಗೊಂಡು ಸರ್ಕಾರಕ್ಕೆ ಮನವಿ ಮಾಡಲಾಯಿತು.

೧) ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಭಾರತಾದ್ಯಂತ ಕೇಂದ್ರ ಸರಕಾರದಿಂದ ಆಚರಿಸುವಂತಾಗಬೇಕು.

೨) ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಸಂವಿಧಾನಾತ್ಮಕವಾಗಿ ಸ್ವತಂತ್ರ ಧರ್ಮ ಎಂದು ಕೇಂದ್ರ ಸರಕಾರದಿಂದ ಘೋಷಣೆಯಾಗಬೇಕು.

೩) ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು.

೪) ದೇಶದಲ್ಲಿದ್ದ ಶರಣರ ಸ್ಮಾರಕಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರಕಾರ ಸ್ವತಂತ್ರ ಸಚಿವಾಲಯ ಸ್ಥಾಪಿಸಬೇಕು.

Share This Article
3 Comments
  • ಮೊದಲ ನಿರ್ಣಯ ಸಂಘ ಪರಿವಾರದ ಕೈಗೆ ಜಾರಿ ಹೋಗುವ ಅಪಾಯವಿದೆ.

  • ತೆಗೆದುಕೊಂಡು ನಾಲ್ಕು ನಿರ್ಣಯಗಳಲ್ಲಿ ಮೊದಲನೇ
    ನಿರ್ಣಯ ಸದ್ಯಕ್ಕೆ ಅವಶ್ಯಕತೆ ಇಲ್ಲ, ಕಾರಣ ಸಂಘ
    ಪರಿವಾರ ಈ ನಿರ್ಣಯವನ್ನು ಸನಾತನ ಧರ್ಮದ
    ಸುಧಾರಕ ಎಂದು ಬಿಂಬಿಸುವ ಶರಣ ಧರ್ಮವನ್ನು
    ವೈದಿಕಕರಣ ಮಾಡುವ ಸಾಧ್ಯತೆಯೆ ಹೆಚ್ಚು ಕಾರಣ
    ಈಗಾಗಲೇ ಕರ್ನಾಟಕದಲ್ಲಿ ಸಂಘ ಪ್ರೇರಿತ ವಚನ ದರ್ಶನ
    ಇಂಥ ಕೆಲಸ ಮಾಡಿದೆ ಅದಕ್ಕೆ ಬಸವವಾದಿಗಳ ಪ್ರತಿರೋಧವು ಹೆಚ್ಚು ಕಂಡು ಬಂದಿದೆ.
    ಈ ನಿರ್ಣಯ ಬದಲಾಗಿ 2018 ರಲ್ಲಿ ಕರ್ನಾಟಕ
    ಸರ್ಕಾರ ಶಿಫಾರಸು ಮಾಡಿದ್ದ ನಾಗ್ ಮೋಹನದಾಸ್
    ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ವಾಪಸ್
    ಮಾಡಲಾಗಿದೆ ಅದನ್ನು ಮತ್ತೂಮ್ಮೆ ಪರಿಶೀಲಿಸಿ
    ನಾಗ ಮೋಹನದಾಸ್ ವರದಿಯನ್ನು ಪುರಸ್ಕರಿಸಿ
    ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ
    ನೀಡಬೇಕೆಂದು ಒತ್ತಾಯಿಸಬೇಕು ಇದು ನಮ್ಮ ಸಾಂವಿಧಾನಿಕ ಹಕ್ಕು ಎಂಬ ಒತ್ತಡ ಕೇಂದ್ರ ಸರ್ಕಾರದ
    ಮೇಲೆ ಹೇರಬೇಕು. ಇದರ ಬಗ್ಗೆ 45ನೇ ವರ್ಷದ ವಚನ ಕಮ್ಮಟ ಅನುಭಾವ ಮಂಟಪ ಉತ್ಸವ ಸಮಿತಿ
    ತಮ್ಮ ಮೊದಲನೇ ನಿರ್ಣಯ ಪುನರಪರಿಶೀಲಿಸಿ ಈ ಮೇಲೆ
    ಹೇಳಲಾದ ನಿರ್ಣಯ ತೆಗೆದುಕೊಂಡರೆ ಅಸಂಖ್ಯಾತ
    ಬಸವಾದಿ ಗಳಿಗೆ ನ್ಯಾಯ ಒದಗಿಸಿದಂತೆ ಆಗುತ್ತದೆ
    ಮತ್ತೆ ಪ್ರತ್ಯೇಕ ಧರ್ಮದ ಸಾಂವಿಧಾನಿಕ ಮಾನ್ಯತೆಯ
    ಹೋರಾಟಕ್ಕೆ ಚಾಲನೆ ಸಿಗುತ್ತದೆ.
    ಶರಣ ಶ್ರೀಶೈಲ ಜಿ ಮಸೂತೆ ಲಿಂಗಾಯತ 🙏
    🙏 ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ ಬೆಂಗಳೂರು 🙏

Leave a Reply

Your email address will not be published. Required fields are marked *